SUDDIKSHANA KANNADA NEWS/ DAVANAGERE/ DATE:03-06-2023
ಬೆಂಗಳೂರು(BANGALORE): ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ನಟಿ. ತಮಿಳು ಭಾಷಿಕರಾದ ತ್ರಿಶಾ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಪವರ್ (POWER) ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ (PUNEETH RAJKUMAR) ಜೊತೆ ನಟಿಸಿದ್ದ ಈ ನಟಿ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಿದ್ದರು. 40 ರ ಹರೆಯದಲ್ಲಿಯೂ ಯುವಕರ ಎದೆಗೆ ಕಿಚ್ಚು ಹಚ್ಚುವ ಲುಕ್ (LOOK) ಅವರದ್ದು. ಮಾತ್ರವಲ್ಲ, ಈ ಸೌತ್ ಬ್ಯೂಟಿಗೆ ಇನ್ನು ಸ್ವೀಟ್ @40. ಇಂದು ಈ ನಟಿಯ ಜನುಮದಿನ.
ಪುಟ್ಟಪಾತ್ರಗಳಿಂದ ಹೀರೋಯಿನ್ ಆಗೋ ತನಕ:
ತಮಿಳುನಾಡಿನ ಚೈನ್ನೈನಲ್ಲಿ ಜನಿಸಿದ ತ್ರಿಶಾ ಅವರು ಕೃಷ್ಣನ್ ಮತ್ತು ಉಮಾ ದಂಪತಿಯ ಪುತ್ರಿ. ಹುಟ್ಟಿದ್ದು ಮೇ 4, 1983. ಈಗ 38ರ ಹರೆಯ. ಆದ್ರೂ ತುಂಬಾನೇ ಬೇಡಿಕೆ ಇರುವ ನಟಿ. ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗ ಪ್ರವೇಶಿಸಿ ತ್ರಿಶಾ, ಪ್ರಿಯಾದರ್ಶನ್ ನಿರ್ದೇಶಿಸಿದ ಲೆಸ ಲೆಸ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿಯಾದ್ರು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಬಳಿಕ ಹಿಂದುರಿಗಿ ನೋಡಲೇ ಇಲ್ಲ.
ಗಿಲ್ಲಿ, ಕುರುವಿ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟನೆ:
ಗಿಲ್ಲಿ, ಕುರುವಿ ಸೇರಿದಂತೆ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟ ಈ ತಾರೆ ತೆಲುಗಿನಲ್ಲಿ ಮಹೇಶ್ ಬಾಬು, ಜಗಪತಿಬಾಬು, ತಮಿಳುನಾಡಿನ ಸೂಪರ್ ಸ್ಟಾರ್ ರಜಿನಿಕಾಂತ್, ಖ್ಯಾತ ನಟರಾದ ವಿಜಯ್, ಅಜಿತ್, ಚಿರಂಜೀವಿ, ಸೂರ್ಯ, ರವಿತೇಜಾ ಸೇರಿದಂತೆ ದೊಡ್ಡ ದೊಡ್ಡ ನಟರ ನಟಿಸಿ ಸೈ ಎನಿಸಿಕೊಂಡಾಕೆ.
ನೂವ್ವೊಸ್ತಾನಂಟೆ ನೇನೊದ್ದಂಟಾನಾ ಚಿತ್ರವಂತೂ ತ್ರಿಶಾಗೆ ಖ್ಯಾತಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಗಿಲ್ಲಿ ಚಿತ್ರವೂ ಗಮನ ಸೆಳೆದಿತ್ತು. ಹಲವು ಪ್ರಶಸ್ತಿಗಳು ಈ ನಟಿಯನ್ನು ಅರಸಿ ಬಂದಿವೆ.
ನಿಶ್ಚಿತಾರ್ಥ ಮುರಿದು ಬಿದ್ದಿದ್ಯಾಕೆ..?
2005 ರ ಜನವರಿ 23 ರಂದು ಚೆನ್ನೈನ ಉದ್ಯಮಿ ವರುಣ್ ಜೊತೆ ತ್ರಿಶಾ ಮದುವೆ ನಿಶ್ಛಿತಾರ್ಥ ಮಾಡಿಕೊಂಡರೂ ಇಬ್ಬರ ನಡುವೆ ಉತ್ತಮ ಸಂಬಂಧ ಏರ್ಪಡದ ಮತ್ತು ಬೇರೆ ಕಾರಣದಿಂದ ಮದುವೆ ಮುರಿದು ಬಿತ್ತು. ವೈಯಕ್ತಿಕ ಮತ್ತು ಸಿನಿಮಾ ಜಗತ್ತಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈ ನಟಿ ಎಲ್ಲವನ್ನೂ ಎದುರಿಸಿ ಈ ಮಟ್ಟಕ್ಕೆ ಬೆಳೆದ ತಾರೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಅಲ್ಲಿಂದ ಕೆಲವು ನಟರ ಹೆಸರಿನ ಜೊತೆ ತ್ರಿಶಾ ಲವ್ವಿಡವ್ವಿ ವದಂತಿ ಶುರುವಾಗಿತ್ತು. ದಗ್ಗು ಬಾಟಿಯಾ ಜೊತೆ ಹೆಚ್ಚಾಗಿ ತಳಕು ಹಾಕಿಕೊಂಡಿತ್ತು. ಸೌಂದರ್ಯದ ಖನಿಯಂತಿರುವ ತ್ರಿಶಾರಿಗೆ ಈಗ 40ರ ಹರೆಯ.
ಡಿಪ್ರೆಸ್ ಆಗಿದ್ದು ಯಾಕೆ…?
ನಿಶ್ಛಿತಾರ್ಥ ಮುರಿದು ಬಿದ್ದ ಬಳಿಕ ತ್ರಿಶಾ ಕೃಷ್ಣನ್ ಆಘಾತಕ್ಕೊಳಗಾಗಿದ್ದರು. ಡಿಪ್ರೆಸ್ ಗೂ ಹೋಗಿದ್ದರು. ಆಮೇಲೆ ಚಿತ್ರಗಳಲ್ಲಿ ನಟಿಸುವ ನೋವು ಮರೆಯುವ ಪ್ರಯತ್ನ ಮಾಡಿದರು. ದಿಗ್ಗಜ ನಟರ ಜೊತೆ ನಟಿಸುವ ಸೂಪರ್
ಡ್ಯೂಪರ್ ಹಿಟ್ ಸಿನಿಮಾ ಕೊಟ್ಟರು.
ಆಮೇಲೆ ನೋವು ಮರೆಯುತ್ತಾ ಹೆಚ್ಚಾಗಿ ಪಾತ್ರಗಳಲ್ಲಿ ನಟಿಸುತ್ತಾ ಸಾಗಿರುವ ಈ ನಟಿ ಆದಷ್ಟು ಬೇಗ ಮದುವೆಯಾಗಲಿ ಎಂಬುದು ಅಭಿಮಾನಿಗಳ ಬಯಕೆ.
ತ್ರಿಶಾ ಕೃಷ್ಣನ್ ಜೀವನ ಚರಿತ್ರೆ
ನಿಜವಾದ ಹೆಸರು ತ್ರಿಶಾ ಕೃಷ್ಣನ್
ಅಡ್ಡಹೆಸರು: ಹನಿ
ಹುಟ್ಟಿದ ದಿನಾಂಕ ಬುಧವಾರ, 04 ಮೇ, 1983
ವಯಸ್ಸು (3 ಜೂನ್, 2023) 40 ವರ್ಷಗಳು, 30 ದಿನಗಳು
ಜನ್ಮಸ್ಥಳ ಪಾಲಕ್ಕಾಡ್, ಕೇರಳ, ಭಾರತ
ತವರು ಪಟ್ಟಣ ಚೆನ್ನೈ, ತಮಿಳುನಾಡು
ರಾಷ್ಟ್ರೀಯತೆ ಭಾರತೀಯ
ಧರ್ಮ / ಜಾತಿ ಹಿಂದೂ ಧರ್ಮ
ಎತ್ತರ 165 ಸೆಂಟಿಮೀಟರ್‌ಗಳು / 1.65 ಮೀಟರ್‌ಗಳು / 5 ಅಡಿ 4 ಇಂಚುಗಳು
ತೂಕ 52 ಕಿಲೋಗ್ರಾಂಗಳು / 115 ಪೌಂಡುಗಳು
ಕಣ್ಣಿನ ಬಣ್ಣ ಕಂದು
ಕೂದಲಿನ ಬಣ್ಣ ಕಪ್ಪು
ರಾಶಿಚಕ್ರ ಚಿಹ್ನೆ / ಸೂರ್ಯನ ಚಿಹ್ನೆ ವೃಷಭ
ಶಿಕ್ಷಣ ಅರ್ಹತೆಗಳು
ಸೇಕ್ರೆಡ್ ಹಾರ್ಟ್ ಮೆಟ್ರಿಕ್ಯುಲೇಷನ್ ನಿಂದ ಪ್ರೌಢಶಾಲೆ Hr. ಸೆಕೆಂಡ್ ಸ್ಕೂಲ್, ಚರ್ಚ್ ಪಾರ್ಕ್, ಚೆನ್ನೈ
ಚೆನ್ನೈನ ಎಥಿರಾಜ್ ಮಹಿಳಾ ಕಾಲೇಜಿನಿಂದ ಬಿ.ಬಿ.ಎ
ಕುಟುಂಬ, ಬಾಯ್ ಫ್ರೆಂಡ್ಸ್, ಪತಿ, ವ್ಯವಹಾರಗಳು ಮತ್ತು ಇನ್ನಷ್ಟು
ತಂದೆ – ಕೃಷ್ಣನ್ (ಜನರಲ್ ಮ್ಯಾನೇಜರ್) (ಮರಣ)
ತಾಯಿ – ಉಮಾ ಕೃಷ್ಣನ್
ಬಾಯ್ ಫ್ರೆಂಡ್ – ರಾಣಾ ದಗ್ಗುಬಾಟಿ (ನಟ)
ಬಾಯ್ ಫ್ರೆಂಡ್ – ವರುಣ್ ಮಣಿಯನ್ (ನಿರ್ಮಾಪಕ)
ಹವ್ಯಾಸಗಳು ಸಂಗೀತ ಕೇಳುವುದು, ಓದುವುದು, ಈಜು
ಸಂಬಳ 80 ಲಕ್ಷ – 1 ಕೋಟಿ
ನಿವ್ವಳ ಮೌಲ್ಯ 24 ಕೋಟಿ