SUDDIKSHANA KANNADA NEWS/ DAVANAGERE/ DATE:24-02-2025
ಶಿವಮೊಗ್ಗ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಶಿಕಾರಿಪುರ ವತಿಯಿಂದ ಮಾ.3 ಪೂರ್ವಾಹ್ನ 10.30 ರಿಂದ 1.30 ರವೆಗೆ ಗಾಜನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿ ಸ್ಕೀಮ್ ಹಾಗೂ ಪ್ರೈಮ್ ಮಿನಿಸ್ಟರ್ ಇಂಟರ್ನ್ಶಿಪ್ ಸ್ಕೀಮ್ ಯೋಜನೆಯ ಬಗ್ಗೆ ಉದ್ದಿಮೆದಾರರಿಗೆ ಹಾಗೂ ತರಬೇತಿದಾರರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು. 21 ರಿಂದ 24 ವರ್ಷದವರಾಗಿರಬೇಕು, ಸೆಕೆಂಡರಿ ಸ್ಕೂಲ್ ಸರ್ಟಿಫಿಕೆಟ್ ಅಥವಾ ಸಮಾನ/ಹೈಯರ್ ಸ್ಕೂಲ್ ಸರ್ಟೀಫಿಕೆಟ್ ಅಥವಾ ಸಮಾನ/ಐಟಿಐ ಕಂಪ್ಲಿಟೆಡ್ ಕ್ಯಾಂಡಿಡೇಟ್/ಡಿಪ್ಲೋಮಾ/ಗ್ರ್ಯಾಜುಯೇಷನ್ ಡಿಗ್ರಿ ಬಿಎ, ಬಿಎಸ್‌ಸಿ, ಬಿ.ಕಾಂ, ಬಿಸಿಎ, ಬಿಬಿಎ, ಬಿ ಫಾರ್ಮ ಈ ಅರ್ಹತೆಗಳನ್ನು ಹೊಂದಿರುವವರು https://pminternship.mca.gov.in/login/ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಶಿಕಾರಿಪುರ ಶಿಶಿಕ್ಷ ನೋಡಲ್ ಅಧಿಕಾರಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವಿಜಯಕುಮಾರ್ ಸಪಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.