SUDDIKSHANA KANNADA NEWS/ DAVANAGERE/ DATE:23-07-2023
ದಾವಣಗೆರೆ: ಸಂಚಾರಿ ಪೊಲೀಸ್ (Traffic police) ನಿರೀಕ್ಷಕರ ಕಚೇರಿಯಲ್ಲಿ ಟಿಪ್ಪರ್ ಲಾರಿ ಮಾಲೀಕರೊಂದಿಗೆ ಸಭೆ ನಡೆಸಲಾಯಿತು.
ದಾವಣಗೆರೆ ನಗರದಲ್ಲಿ ಟಿಪ್ಪರ್ ಲಾರಿಗಳು ಕಡ್ಡಾಯವಾಗಿ ಈಗಾಗಲೇ ನಿಗದಿಪಡಿಸಿರುವ ಬೆಳಗ್ಗೆ 9 ರಿಂದ 11, ಸಂಜೆ 4 ರಿಂದ 6 ಗಂಟೆಯವರೆಗೆ ನಗರದಲ್ಲಿ ಭಾರೀ ಟಿಪ್ಪರ್, ಲಾರಿಗಳಿಗೆ ನಗರದಲ್ಲಿ ಪ್ರವೇಶ ಇರುವುದಿಲ್ಲ.
ಈ ಸಮಯದಲ್ಲಿ ಮಾತ್ರ ನಗರದಲ್ಲಿ ಸಂಚರಿಸುವುದು ಹಾಗೂ ಲಾರಿಯಲ್ಲಿ ಟಾರ್ಪಲ್ ಅನ್ನು ಬಳಸಬೇಕು. ಓವರ್ ಲೋಡ್ ಮಾಡುವಂತಿಲ್ಲ. ನಗರದಲ್ಲಿ ಲಾರಿಗಳ ವೇಗದ ಮಿತಿಯನ್ನು 35 ಕಿ ಮಿ ನಿಗಧಿಪಡಿಸಿದ್ದು, ವೇಗವಾಗಿ ಚಾಲನೆ
ಮಾಡಬಾರದೆಂದು ಟಿಪ್ಪರ್ ಲಾರಿ ಮಾಲೀಕರಿಗೆ ಸಂಚಾರ ಪೊಲೀಸ್ (Traffic police)ನಿರೀಕ್ಷಕ ಆರ್. ಪಿ. ಅನಿಲ್ ಸೂಚಿಸಿದರು. ಈ ವೇಳೆ ಸಿಬ್ಬಂದಿ ಹಾಗೂ ಟಿಪ್ಪರ್ ಲಾರಿ ಮಾಲೀಕರು ಹಾಜರಿದ್ದರು.
ಈ ಸುದ್ದಿಯನ್ನೂ ಓದಿ:
BIG BREAKING STORY, EYE VIRAS: ಸಾವಿರಾರು ಮಕ್ಕಳಿಗೆ ತಗುಲಿದೆ ಕಣ್ಣು ಬೇನೆ ( ಐ ವೈರಸ್): ಪೋಷಕರಿಗೆ ಮಕ್ಕಳ ತಜ್ಞ ವೈದ್ಯರು ಹೇಳಿದ್ದೇನು…? ತಂದೆ ತಾಯಿ ಓದಲೇಬೇಕಾದ ಸ್ಟೋರಿ
ಲಾರಿ ಮಾಲೀಕರು ಟ್ರಾಫಿಕ್ ನಿಯಮಗಳನ್ನು ಪಾಲಿಸಲೇಬೇಕು. ಸರ್ಕಾರ ನೀಡಿರುವ ಸೂಚನೆಯಂತೆ ಕಾರ್ಯನಿರ್ವಹಿಸಬೇಕು. ಬೆಳಿಗ್ಗೆ ಮತ್ತು ಸಂಜೆ ಭಾರೀ ಟಿಪ್ಪರ್, ಲಾರಿಗಳು ನಗರದೊಳಗೆ ಬರುವಂತಿಲ್ಲ. ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಆರ್. ಪಿ. ಅನಿಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ವೇಳೆ ಮಾಲೀಕರ ಸಮಸ್ಯೆಗಳನ್ನು ಆಲಿಸಿದರು. ಲಾರಿ ಮಾಲೀಕರು ಸಹ ಸಹಕಾರ ನೀಡುವುದಾಗಿ ತಿಳಿಸಿದರು.
Traffic police, Traffic police News, Traffic Police Suddi, Traffic police News Updates