SUDDIKSHANA.COM KANNADA NEWS
DATE: 18-03-2023
ದಾವಣಗೆರೆ: ಜಿಲ್ಲೆಯ ಎಲ್ಲಾ ಬಿತ್ತನೆ ಬೀಜ, ಕ್ರಿಮಿನಾಶಕ ಹಾಗೂ ರಸಗೊಬ್ಬರ ಮಾರಾಟಗಾರರು, ಅಂಗಡಿಯ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಕಂಪೆನಿಗಳ ಪ್ರತಿನಿಧಿಗಳ ಟೆನಿಸ್ ಬಾಲ್ ಕ್ರಿಕೆಟ್ (CRICKET) ಕ್ರೀಡಾಕೂಟವು ಮಾರ್ಚ್ 19ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಬಿತ್ತನೆ ಬೀಜ, ಕ್ರಿಮಿನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಲೋಕಿಕೆರೆ ನಾಗರಾಜ್ (LOKIKERE NAGARAJ) ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿತ್ತನೆ ಶುರುವಾಗುವ ಮುನ್ನ ಮನರಂಜನೆಗಾಗಿ ಈ ಕ್ರೀಡಾಕೂಟ ಆಯೋಜಿಸಲಾಗಿದ್ದು, ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಈ ಕ್ರೀಡಾಕೂಟದಲ್ಲಿ ಸುಮಾರು 12 ತಂಡಗಳು (TEAM) ಪಾಲ್ಗೊಳ್ಳಲಿವೆ. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಶಿವಮೂರ್ತ್ಯಪ್ಪ ಅಗಸನಕಟ್ಟೆ ವಹಿಸುವರು. ಮುಖ್ಯ ಅತಿಥಿಗಳಾಗಿ ಟಿ. ಎಂ. ಉಮಾಪತಯ್ಯ, ಆರ್. ಜಿ. ಶ್ರೀನಿವಾಸ್ ಮೂರ್ತಿ, ಶ್ರೀಧರ ಮೂರ್ತಿ, ತಿಪ್ಪೇಸ್ವಾಮಿ ಮತ್ತಿತರರು
ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದ್ದು, ಎಸ್. ಜೆ. ಶ್ರೀಧರ್ ಅಧ್ಯಕ್ಷತೆ ವಹಿಸುವರು. ಎಸ್. ವಿ. ವೀರೇಶ್, ಖಜಾಂಚಿ ಬಿ. ಶಾಂತರಾಜ್ ಉಪಸ್ಥಿತರಿರುವರು. ಪ್ರಥಮ, ದ್ವಿತೀಯ, ತೃತೀಯ
ಬಹುಮಾನ ನೀಡಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಸಂಘದ ಟಿ. ಎಂ. ಉಮಾಪತಯ್ಯ, ಕಿರಣ್, ಪ್ರಮೋದ್, ಪ್ರತೀಕ್, ಶಿವಣ್ಣ, ಶಿವು, ಕೃಷ್ಣಮೂರ್ತಿ ಹಾಜರಿದ್ದರು.