SUDDIKSHANA KANNADA NEWS/ DAVANAGERE/ DATE:22-09-2023
– ಗಿರೀಶ್ ಕೆ ಎಂ
ಭಾರತೀಯ ಷೇರು ಮಾರುಕಟ್ಟೆ (Stock market) ಯಲ್ಲಿ ಕರಡಿಯ ಹಿಡಿತ ಇಂದೂ ಸಹಾ ಮುಂದುವರೆದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದು, ತಮ್ಮ ಲಾಭಾಂಶ ಹಿಂತೆಗೆತದ ಕಾರಣದಿಂದಾಗಿ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿವೆ.
ಈ ಸುದ್ದಿಯನ್ನೂ ಓದಿ:
Job fair: ನಿರುದ್ಯೋಗಿ ಯುವಕ-ಯುವತಿಯರಿಗೆ “ಬೃಹತ್ ಉದ್ಯೋಗ ಮೇಳ…? ಎಲ್ಲಿ ನಡೆಯುತ್ತೆ…?
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -68.10 (-0.34%) ಅಂಕ ಇಳಿಕೆ ಕಂಡು 19,674.25 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 221.09 (-0.33%) ಅಂಕ ಇಳಿಕೆ ಕಂಡು 66,009.15 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.ಇದರಿಂದಾಗಿ ಸತತ ನಾಲ್ಕನೇ ದಿನ ಮಾರುಕಟ್ಟೆ ಇಳಿಕೆ ದಾಖಲಿಸಿದಂತಾಗಿದೆ.
ಏರಿಕೆ ಕಂಡ ಷೇರುಗಳು:
ಇಂದು ನಿಟ್ಟಿಯಲ್ಲಿ INDUSINDBK, MARUTI, SBIN,M&M ASIANPAINT, ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ WIPRO, DRREDDY, UPL, CIPLA, BAJAJ-AUTO ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 82.94 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -1,326.74 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.+801.27 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.