SUDDIKSHANA KANNADA NEWS/ DAVANAGERE/ DATE:05-10-2023
ಗಿರೀಶ್ ಕೆ ಎಂ
ಸತತ ಎರಡು ದಿನಗಳ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಪೇಟೆ (Stock market) ಇಂದು ಚೇತರಿಕೆ ಕಂಡಿದೆ. ಮಾರುಕಟ್ಟೆ ಆರಂಭದಿಂದಲೂ ಏರುಗತಿಯಲ್ಲಿ ಸಾಗಿತ್ತು. ವಲಯವಾರು ಷೇರುಗಳಲ್ಲಿ ಮಾಧ್ಯಮ ವಲಯ, ಐಟಿ ವಲಯ, ಆಟೋ ವಲಯ,ಬ್ಯಾಂಕಿಂಗ್ ವಲಯವು ಏರಿಕೆ ದಾಖಲಿಸಿದವು.
Read Also This Story:
ಎಲ್ಐಸಿ(Life Insurance Corporation)ಗೆ ಆದಾಯ ತೆರಿಗೆ ಇಲಾಖೆಯು ಅಷ್ಟೊಂದು ದಂಡ ವಿಧಿಸಿದ್ಯಾಕೆ…?
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 109.66 (0.56%) ಅಂಕ ಏರಿಕೆ ಕಂಡು 19,545.75 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 405.53 (0.62%) ಅಂಕ ಏರಿಕೆ ಕಂಡು 65,631.57 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ BAJAJ-AUTO, LT, M&M, TITAN,TCS ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ POWERGRID, HINDALCO, NTPC, CIPLA, NESTLEIND ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.26 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -1,864.20 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.521.41 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.