ಶಿವಣ್ಣ ಕೇವಲ ಒಬ್ಬ ನಟ ಅಷ್ಟೇ ಅಲ್ಲ ಅದೇಷ್ಟೋ ಮಂದಿಗೆ ಆಶಾದೀಪ ಅಭಿಮಾನಿಗಳ ಪಾಲಿನ ದೇವತ ಮನುಷ್ಯ ಲೆಕ್ಕವಿಲ್ಲದಷ್ಟು ಜನಗಳಿಗೆ ಇಂಡಸ್ಟ್ರಿಯಲ್ಲಿ ಬೆಳೆಸಿದ ಮಹಾನ್ ಕಲಾವಿದ, ಇಂದು ಅದೇ ಶಿವಣ್ಣನಿಗೆ ಅಮೇರಿಕಾದಲ್ಲಿ ಸರ್ಜರಿ ನಡೆಯುತ್ತಿದೆ, ಇದಕ್ಕಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ಹೌದು, ರಾಜ್ಯಾದ್ಯಂತ ಅಲ್ಲದೇ ದೇಶದ ನಾನಾ ಕಡೆಗಳಲ್ಲಿ ಇಂದು ಶಿವಣ್ಣನಿಗೊಸ್ಕರ ದೇವಸ್ಥಾನದಲ್ಲಿ ಡಾ.ಶಿವರಾಜ್ ಕುಮಾರ್ ಅವರ ಹೆಸರಿನಲ್ಲಿ ಹೋಮ, ಪೂಜೆ ನೆರವೆರುತ್ತಿದ್ದು ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲೆಂದು ಆಭಿಮಾನಿಗಳು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಒಂದು ವಾರದ ಹಿಂದೆಯೇ ಅಮೇರಿಕಾಗೆ ಪತ್ನಿ ಹಾಗೂ ಮಗಳ ಜೊತೆ ತೆರಳಿದ್ದ ಶಿವಣ್ಣ ಇಂದು ಸರ್ಜರಿಗೆ ಒಳಗಾಗುತ್ತಿದ್ದಾರೆ, ಫ್ಲೋರಿಡಾ ರಾಜ್ಯದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್ ಅವರಿಗೆ ಸರ್ಜರಿ ನಡೆಸಲು ಹೀಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಸಚಿನ್
ಡಾಕ್ಟರ್ ಮುರುಗೇಶ್ ನೇತೃತ್ವದಲ್ಲಿ ಈ ಸರ್ಜರಿ ನಡೆಯುತ್ತದೆ ಎಂದು ಮಾಹಿತಿ ಸಿಕ್ಕಿದ್ದು, ಕರುನಾಡಿನ ದೊರೆಯ ಸರ್ಜರಿ ಯಶಸ್ವಿಯಾಗಿ ನಡೆದು ಆರೋಗ್ಯಕರವಾಗಿ ಮರಳಿ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.