SUDDIKSHANA KANNADA NEWS/ DAVANAGERE/ DATE:14-10-2023
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.
Read Also This Story:
ದಾವಣಗೆರೆ (Davanagere) ಯ ಬಸವರಾಜಪೇಟೆ ಗಣೇಶ ಗದ್ದಲ ವಿಚಾರ, ಎರಡೂ ಕಡೆ ಪರಿಶೀಲಿಸಿ ಕಾನೂನು ಕ್ರಮ, ಲಾಠಿ ಚಾರ್ಜ್ ಆಗಿಲ್ಲ: ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟನೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.
ಮೇಷ ರಾಶಿ (Rashi):
ಮೇಷ ರಾಶಿಯವರಿಗೆ ಆಂಜನೇಯ ಸ್ವಾಮಿ ಅನುಗ್ರಹ ಇದೆ. ಹನುಮಪ್ಪನನ್ನು ಆರಾಧಿಸಿ, ಅಂದುಕೊಂಡ ಕೆಲಸಗಳು ಈಡೇರುತ್ತವೆ.
ಮಿಥುನ ರಾಶಿ (Rashi):
ಪತ್ನಿಯೊಡನೆ ಸಂಮಯದಿಂದ ವರ್ತಿಸಿ. ವೈವಾಹಿಕ ಜೀವನದ ಬಗ್ಗೆ ಎಚ್ಚರ ವಹಿಸಿ. ಅಪ್ಪಿ ತಪ್ಪಿಯೂ ಪತ್ನಿ ಮನಸ್ಸು ನೋಯಿಸಬೇಡಿ.
ವೃಷಭ ರಾಶಿ (Rashi):
ವೃಷಭ ರಾಶಿಯವರು ದೂರದ ಪ್ರಯಾಣ ಮುಂದೂಡಿ. ಮನೆಯಿಂದ ಹೊರಡುವ ಮುನ್ನ ದೇವರನ್ನು ಪ್ರಾರ್ಥಿಸಿ.
ಮಿಥುನ ರಾಶಿ (Rashi):
ಮಿಥುನ ರಾಶಿಯವರ ಮೇಲೂ ಆಂಜನೇಯ ಸ್ವಾಮಿಯು ಕೃಪೆ ತೋರಲಿದ್ದು, ಆಂಜನೇಯ ಸ್ವಾಮಿ ಪ್ರಾರ್ಥಿಸಿ. ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ. ಹನುಮಪ್ಪ ನೀವಂದುಕೊಂಡ ಕೆಲಸ ಆಗಲೆಂದು ಆಶೀರ್ವದಿಸಲಿದ್ದಾನೆ.
ಕರ್ಕ ರಾಶಿ (Rashi):
ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಇರುತ್ತದೆ. ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ.
ಸಿಂಹ ರಾಶಿ (Rashi):
ಸಿಂಹ ರಾಶಿಯವರು ತಾಳ್ಮೆ ವಹಿಸಬೇಕು. ಕೌಟುಂಬಿಕ ವಿಚಾರದಲ್ಲಿ ಸಮಸ್ಯೆ ತಲೆದೋರುವ ಸಾಧ್ಯತೆ ಇರುತ್ತದೆ. ಏನೇ ಸಮಸ್ಯೆ ಬಂದರೂ ಶಾಂತರೀತಿಯಲ್ಲಿ ಯೋಚಿಸಿ ವರ್ತನೆ ಮಾಡಿ. ಆತುರಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಸಿಟ್ಟಾಗಬೇಡಿ.
ಕನ್ಯಾ ರಾಶಿ (Rashi):
ಕನ್ಯಾ ರಾಶಿಯ ಇಂದಿನ ಜಾತಕದಲ್ಲಿ ಅಂದುಕೊಂಡ ಕೆಲಸಗಳು ಆಗುವ ಸಾಧ್ಯತೆ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಅನುಗ್ರಹ ಪಡೆಯಿರಿ.
ತುಲಾ ರಾಶಿ (Rashi):
ಇಂದಿನ ತುಲಾ ರಾಶಿಯವರು ಹೊಸ ಯೋಜನೆಗಳು, ಹೊಸ ಕೆಲಸ, ಅಂಗಡಿ ತೆರೆಯುವ ಆಲೋಚನೆ ಇದ್ದರೆ ಸಕಾಲ. ಇಂದು ನೀವಂದುಕೊಂಡ ಕೆಲಸಗಳು ಆಗಲಿವೆ.
ವೃಶ್ಚಿಕ ರಾಶಿ (Rashi):
ವೃಶ್ಚಿಕ ರಾಶಿಯವರಿಗೆ ಹನುಮಪ್ಪನ ಆಶೀರ್ವಾದವಿದ್ದು, ನೀವು ನಿರೀಕ್ಷಿಸಿದ್ದ ಹಣ ಬರಲಿದೆ. ಬಹಳ ದಿನಗಳಿಂದ ಬರಬೇಕಿದ್ದ ಬಾಕಿ ಹಣವೂ ಸಂದಾಯವಾಗುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿ ಆರಾಧಿಸಿ.
ಧನು ರಾಶಿ (Rashi):
ಧನು ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಸಮಸ್ಯೆಗಳು ಎದುರಾಗುವುದನ್ನು ಹೇಳುತ್ತದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಬೇಡಿ.
ಮಕರ ರಾಶಿ (Rashi):
ಮಕರ ರಾಶಿಯ ಇಂದಿನ ರಾಶಿಭವಿಷ್ಯದಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ ಇರುತ್ತದೆ. ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದ್ದು, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.
ಕುಂಭ ರಾಶಿ (Rashi):
ಕುಂಭ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯದಲ್ಲಿ ಸಂಕಷ್ಟಗಳು ಎದುರಾಗುವ ಸೂಚನೆಗಳು ಇವೆ. ಕೋರ್ಟ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಬೇಡಿ. ನೀವು ತುಂಬಾ ಶ್ರಮ ಪಟ್ಟರೆ ತೀರ್ಪು ನಿಮ್ಮ ಪರ ಬರಲಿದೆ. ಈ
ವಿಚಾರದಲ್ಲಿ ಓಡಾಟ ಹೆಚ್ಚಿರುತ್ತದೆ.
ಮೀನ ರಾಶಿ (Rashi):
ಮೀನ ರಾಶಿಯವರಿಗೆ ಇಂದಿನ ಜಾತಕದಲ್ಲಿ ಒಳ್ಳೆಯದಾಗುವ ಸೂಚನೆ ತೋರಿಸುತ್ತಿದೆ. ಶನಿವಾರ ಶುಭ ಸಂದೇಶ ತರುವ ಸಾಧ್ಯತೆ ಇದೆ. ಬಹಳ ವರ್ಷಗಳಿಂದ ಆಗಬೇಕು ಎಂದುಕೊಂಡಿದ್ದ ಕೆಲಸ ಆಗುವ ದಿನಗಳ ಹತ್ತಿರವಾಗಲಿವೆ.