SUDDIKSHANA KANNADA NEWS/ DAVANAGERE/DATE:18_08_2025
ದಾವಣಗೆರೆ: ದಾವಣಗೆರೆ ಕೆಲವು ಗ್ರಾಮಗಳು ಮತ್ತು ಬಡಾವಣೆಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
READ ALSO THIS STORY: ಪ್ರಿಯತಮೆ ಆಜ್ಞೆ ಮೇರೆಗೆ ಪತ್ನಿ ಕೊಂದ ಬಿಜೆಪಿ ನಾಯಕ: ದರೋಡೆಯಂತೆ ಬಿಂಬಿಸಲು ಯತ್ನಿಸಿದ ಹಂತಕರ ನಾಟಕ ಬಯಲು!
ನಗರದ 66/11 ಕೆವಿ ಹಿರೇಮಲ್ಲನಹೊಳೆ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫೀಡರ್ಗಳ ಜಂಗಲ್ ಕಟಿಂಗ್ ಮತ್ತು ಫೀಡರ್ ಗಳ ಕಾರ್ಯನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ 66/11 ಕೆವಿ ಹಿರೇಮಲ್ಲನಹೊಳೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಎನ್ಜೆವೈ ಮತ್ತು ಐ.ಪಿ 66 ಕೆವಿ ಮಾರ್ಗಗಳಲ್ಲಿ ಆಗಸ್ಟ್ 18 ಮತ್ತು 19 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.