ಜಾರ್ಖಂಡ್ ರಾಜ್ಯದ ಧನಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ತಮ್ಮ ಶರ್ಟ್ ಮೇಲೆ ಸಂದೇಶಗಳನ್ನು ಬರೆದಿದ್ದುದ್ದಕ್ಕೆ 80 ಮಂದಿ ಶಾಲಾ ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿದ ಮಹಿಳಾ ಪ್ರಾಂಶುಪಾಲರು, ಮೈಮೇಲೆ ಶರ್ಟ್ ಇಲ್ಲದೆ ಬ್ಲೇಝರ್‌ನಲ್ಲೇ ಮನೆಗೆ ಮರಳುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನಬಾದ್ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಅವರು, ಈ ಘಟನೆಯು ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಗಾವಡಿಹ್‌ನಲ್ಲಿರುವ ಪ್ರತಿಷ್ಠಿತ ಶಾಲೆಯೊಂದರಲ್ಲಿ ಶುಕ್ರವಾರ ನಡೆದಿದೆ ಎಂದು ತಿಳಿಸಿದ್ದಾರೆ. 10 ತರಗತಿಯ ವಿದ್ಯಾರ್ಥಿನಿಯರು ತಮ್ಮ ಪರೀಕ್ಷೆಗಳು ಮುಕ್ತಾಯಗೊಂಡ ಸಂಭ್ರಮವನ್ನು ಆಚರಿಸಲು ಪರಸ್ಪರ ತಮ್ಮ ಶರ್ಟ್‌ಗಳ ಮೇಲೆ ಸಂದೇಶಗಳನ್ನು ಬರೆದುಕೊಳ್ಳುತ್ತಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿನಿಯರ ಪೋಷಕರು ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಾರ ತಮ್ಮ ಶಾಲೆಯ ಕೊನೆಯ ದಿನದಂದು ‘ಪೆನ್ ಡೇ’ ಆಚರಿಸುವಾಗ ಹತ್ತನೇ ತರಗತಿಯ ವಿದ್ಯಾರ್ಥಿನಿಯರು ತಮ್ಮ ಶರ್ಟ್‌ಗಳ ಮೇಲೆ ಸಂದೇಶಗಳನ್ನು ಬರೆದು ಸಂಭ್ರಮಾಚರಣೆ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳಾ ಪ್ರಾಂಶುಪಾಲರು, ಅವರು ಕ್ಷಮಾಪಣೆ ಕೋರಿದರೂ ಶರ್ಟ್‌ಗಳನ್ನು ಕಳಚುವಂತೆ ಸೂಚಿಸಿದ್ದಾರೆ. ನಂತರ ಎಲ್ಲ ವಿದ್ಯಾರ್ಥಿನಿಯರನ್ನು ಶರ್ಟ್ ಇಲ್ಲದೆ ಕೇವಲ ಬ್ಲೇಝರ್‌ನಲ್ಲಿ ಮನೆಗೆ ವಾಪಸ್ ಕಳಿಸಿದ್ದಾರೆ ಎಂದು ಪೋಷಕರು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡಿದ್ದಾರೆ
ಆದರೆ, ಶಾಲೆಯ ಪ್ರಾಂಶುಪಾಲರು ಅಂತಹ ಆರೋಪವನ್ನು ನಿರಾಕರಿಸಿದ್ದು, “ಅವರ ಶರ್ಟ್‌ಗಳನ್ನು ತೆಗೆದು ಹೋಗುವಂತೆ ನಾನು ಅವರಿಗೆ ಹೇಳಿಲ್ಲ. ಸರಿಯಾದ ಸಮವಸ್ತ್ರದಲ್ಲಿ ಮಾತ್ರ ಹೋಗಬೇಕು ಮತ್ತು ಇಲ್ಲಿ ಕಾಲಹರಣ ಮಾಡಬಾರದು ಎಂದು ನಾನು ಅವರಿಗೆ ಹೇಳಿದ್ದೇನೆ ಎಂದು ಅವರು ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಈ ಕುರಿತು ಪೋಷಕರು ಹಾಗೂ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದ್ದೇನೆ. ಇದು ಗಂಭೀರ ಕಾಳಜಿಯ ವಿಷಯವಾಗಿದೆ. ಸಮಿತಿಯ ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ, ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದರು.