SUDDIKSHANA KANNADA NEWS/ DAVANAGERE/ DATE-06-05-2025
ದಾವಣಗೆರೆ: ರೌಡಿಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಬಳಿಕ ಒಂದೊಂದೇ ವಿಡಿಯೋಗಳು ಹೊರ ಬರುತ್ತಿವೆ. ಹದಡಿ ರಸ್ತೆಯ ಕ್ಲಬ್ ವೊಂದರಲ್ಲಿ ಹತ್ಯೆಗೀಡಾದ ಬಳಿಕ ಹತ್ಯೆ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ಇಸ್ಪೀಟ್ ಆಡುತ್ತಾ ಟೇಬಲ್ ನಲ್ಲಿ ಕುಳಿತಿದ್ದ ಹಾಗೂ ಹಂತಕರು ಲಾಂಗ್, ಮಚ್ಚು ಹಿಡಿದು ಅಟ್ಟಾಡಿಸಿಕೊಂಡು ಹೋಗುವ ವಿಡಿಯೋಗಳು ವೈರಲ್ ಆಗಿವೆ.
ಮಂಗಳವಾರ ಸಂಜೆ ಹದಡಿ ರಸ್ತೆಯ ಕ್ಲಬ್ ನಲ್ಲಿ ಸ್ನೇಹಿತರೊಟ್ಟಿಗೆ ಇಸ್ಪೀಟ್ ಆಡುತ್ತಾ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಕುಳಿತಿದ್ದರು. ಟೇಬಲ್ ಸುತ್ತಮುತ್ತಲೂ ಜನರಿದ್ದರು. ಕಣುಮಾ ಸೇರಿದಂತೆ ಒಂಬತ್ತು
ಜನರು ಕುರ್ಚಿಯಲ್ಲಿ ಕುಳಿತು ಆಟವಾಡುತ್ತಿದ್ದರು. ಹೊರಗಡೆ ಇಬ್ಬರು ನಿಂತಿದ್ದರು. ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಖುಷಿಖುಷಿಯಾಗಿ ಇಸ್ಪೀಟ್ ಆಡುತ್ತಾ ಕುಳಿತಿದ್ದರು. ಸುತ್ತಮುತ್ತ, ಹೊರಗಡೆಯೂ ಜನರು ಇದ್ದರು.
ಆದ್ರೆ, ಇದ್ದಕ್ಕಿದ್ದಂತೆ ಐದರಿಂದ ಆರು ಮಂದಿ ಲಾಂಗು, ಮಚ್ಚು ಹಿಡಿದು ಕಣುಮಾ ಕುಳಿತಿದ್ದ ಕಡೆಗೆ ಓಡೋಡಿ ಬಂದಿದ್ದಾರೆ. ಬಂದವರೇ ಕಣುಮಾ ಟಾರ್ಗೆಟ್ ಮಾಡಿ ಮಚ್ಚು, ಲಾಂಗು ಬೀಸಿದ್ದಾರೆ. ಎದ್ನೋ, ಬಿದ್ನೋ ಎಂದು ಓಡಲು ಶುರು ಮಾಡಿದರೂ ಬಿಡದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಓಡಿ ಹೋಗುವ, ಟೇಬಲ್ ನಲ್ಲಿ ಕುಳಿತಿದ್ದವರು ಎದ್ನೋ ಬಿದ್ನೋ ಓಡಿ ಹೋಗಿದ್ದಾರೆ. ಬೇರೆ ಯಾರ ಮೇಲೂ ಹಲ್ಲೆ ನಡೆಸಿಲ್ಲ. ಮತ್ತೊಂದು ವಿಪರ್ಯಾಸ ಎಂದರೆ ಅಷ್ಟೊಂದು ಜನರಿದ್ದರೂ ಯಾರೂ ಸಹ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಸಹಾಯಕ್ಕೆ ಬಾರದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕಣುಮಾ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ. ತಲೆಗೆ ಬಲವಾದ ಹೊಡೆತ ಬಿದ್ದ ಕಾರಣ ಸ್ವಲ್ಪ ದೂರ ಓಡಿ ಹೋಗಿ ಕೆಳಗೆ ಬಿದ್ದಿದ್ದಾರೆ. ಸೊಪ್ಪು ಕತ್ತರಿಸುವಂತೆ ಹಂತಕರು ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಇನ್ನು ಲಾಂಗ್ ಹಾಗೂ ಮಚ್ಚು ಹಿಡಿದವರು ಒಳಗೆ ನುಗ್ಗುತ್ತಿದ್ದಂತೆ ಆಟ ಆಡುತ್ತಿದ್ದವರು, ಅಲ್ಲಿ ನೆರೆದಿದ್ದವರೆಲ್ಲರೂ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಈಗ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಬೆಂಬಲಿಗರು, ಕುಟುಂಬಸ್ಥರು, ಪತ್ನಿ ಮತ್ತು ಮಕ್ಕಳು ಆರೋಪಿಗಳಿಗೆ ಶಿಕ್ಷೆಯಾಗಬೇಕು. ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು. ಈ ನಿಟ್ಟಿನಲ್ಲಿ ಆರೋಪಿಗಳೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.