SUDDIKSHANA KANNADA NEWS/ DAVANAGERE/ DATE:11-03-2025
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ದರಿದ್ರ ಹಿಡಿದಿದೆ. ಲೂಟಿಯೊಂದನ್ನೇ ಅಜೆಂಡಾವಾಗಿರಿಸಿಕೊಂಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದ್ದು, ಇದೀಗ ಮಧ್ಯಾಹ್ನದ ಬಿಸಿಯೂಟಕ್ಕೆ ಅಡುಗೆ ಎಣ್ಣೆ, ಬೇಳೆಯನ್ನೇ ಸರ್ಕಾರ ಪೂರೈಕೆ ಮಾಡುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಳೆದ ಡಿಸೆಂಬರ್ ತಿಂಗಳಿನಿಂದ ಎಣ್ಣೆ, ಬೇಳೆ ಕಾಳು ಇಲ್ಲದೆ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವಂತಾಗಿದೆ. ಮಧ್ಯಾಹ್ನದ ಬಿಸಿಯೂಟ ತಯಾರು ಮಾಡಲು ಅಡುಗೆ ಎಣ್ಣೆ ಮತ್ತು ಬೇಳೆಯನ್ನು ಸರ್ಕಾರ 3 ತಿಂಗಳಿಂದ
ಕೊಡುತ್ತಿಲ್ಲ. ಮೊಟ್ಟೆಗೂ ಸರ್ಕಾರದ ಹಣ ಸಾಲುತ್ತಿಲ್ಲ ಎಂದು ಸ್ವಪಕ್ಷದ ಶಾಸಕರೇ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದರಿದ್ರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದೆ.
ರಾಜ್ಯಪಾಲರಿಗೆ ಸುಳ್ಳು ಅಂಕಿ-ಅಂಶಗಳ ಮಾಹಿತಿ ನೀಡಿ ಭಾಷಣ ಹೇಳಿಸುವ ಸಿದ್ದರಾಮಯ್ಯ ಅವರೇ, ಇದಕ್ಕೆ ಏನು ಹೇಳುವಿರಿ? ಶಾಲಾ ಮಕ್ಕಳಿಗೆ ಎಣ್ಣೆ – ಬೇಳೆಯನ್ನೇ ಸರಿಯಾಗಿ ಪೂರೈಕೆ ಮಾಡೋಕೆ ಸಾಧ್ಯವಾಗದವರು ರಾಜ್ಯವನ್ನು ಹೇಗೆ ಉದ್ದಾರ ಮಾಡುವಿರಿ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪ್ರಶ್ನಿಸಿದೆ.