ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೃದಯ ದುರ್ಬಲ – ಶಸ್ತ್ರಚಿಕಿತ್ಸೆ ಅಸಾಧ್ಯ ಎನಿಸಿತ್ತು: ವೈದ್ಯರ ಪ್ರಯತ್ನ ಯಶಸ್ವಿ

On: September 8, 2025 8:13 PM
Follow Us:
ಹೃದಯ
---Advertisement---

ಬೆಂಗಳೂರು, ವೈಟ್‌ಫೀಲ್ಡ್, : 5ನೇ ವಯಸ್ಸಿನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ 28 ವರ್ಷದ ಯುವಕನು ಜೀವನವಿಡೀ ದುರ್ಬಲ ಹೃದಯದೊಂದಿಗೆ ಬದುಕುತ್ತಿದ್ದು, ಕಳೆದ ಮೂರು ತಿಂಗಳಿಂದ ಹೊಟ್ಟೆನೋವು ಕಾಡುತ್ತಿದ್ದಾಗ, ಪರೀಕ್ಷೆ ನಡೆಸಿದಾಗ ಪಿತ್ತಕೋಶದ ಕ್ಯಾನ್ಸರ್ ಇರೋದು ದೃಢಪಟ್ಟಿತು.

ಹೊಟ್ಟೆನೋವೆಂದು ಮೆಡಿಕವರ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಕೌಶಿಕ್ ಸುಬ್ರಮನಿಯನ್ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಶುರು ಮಾಡಿದಾಗ ಪಿತ್ತಕೋಶದ ಕ್ಯಾನ್ಸರ್‌ ಇರೋದು ಧೃಢಪಟ್ಟಿತ್ತು. ಆದರೆ ರೋಬೋಟಿಕ್ ರ್ಯಾಡಿಕಲ್ ಕೊಲೆಸಿಸ್ಟೆಕ್ಟಮಿ ಶಸ್ತ್ರಚಿಕಿತ್ಸೆ ಮಾಡೋದು ಸ್ವಲ್ಪ ರಿಸ್ಕಿ ಇತ್ತು

ಯಾಕೆಂದರೆ ಯುವಕನಿಗೆ 5 ವರ್ಷ ಇರುವಾಗ ಹೃದಯದ ಸರ್ಜರಿ ನಡೆದಿತ್ತು. ರೋಗಿಯ ಹೃದಯ ಸ್ಥಿತಿ ದುರ್ಬಲವಾಗಿದ್ದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೃದಯ ವೈಫಲ್ಯ, ಅಧಿಕ ರಕ್ತಸ್ರಾವ ,ಹೃದಯಾಘಾತ ಮತ್ತು ಜೀವಕ್ಕೆ ಅಪಾಯ ಉಂಟಾಗುವ ಭೀತಿ ತೀವ್ರವಾಗಿತ್ತು.

ಆದರೂ ಮೆಡಿಕವರ್ ಆಸ್ಪತ್ರೆಯ ಡಾ. ಕೌಶಿಕ್ ಸುಬ್ರಮನಿಯನ್ ನೇತೃತ್ವದ ವೈದ್ಯರ ತಂಡ ಸವಾಲನ್ನು ಸ್ವೀಕರಿಸಿತು. ರೋಬೋಟಿಕ್ ರ್ಯಾಡಿಕಲ್ ಕೊಲೆಸಿಸ್ಟೆಕ್ಟಮಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರತಿಯೊಂದು ಕ್ಷಣವೂ ಒತ್ತಡದಿಂದ ಕೂಡಿತ್ತು. ಆದರೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಮತ್ತು ವೈದ್ಯರ ಅನುಭವದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿತು.

ಡಾ. ಕೌಶಿಕ್ ಸುಬ್ರಮನಿಯನ್ ಹೇಳಿದರು:
“ಇದು ಕೇವಲ ಪಿತ್ತಕೋಶದ ಶಸ್ತ್ರಚಿಕಿತ್ಸೆಯಲ್ಲ, ದುರ್ಬಲ ಹೃದಯದ ಭಯದೊಂದಿಗೆ ಬದುಕುತ್ತಿದ್ದ ಯುವಕನಿಗೆ ಹೊಸ ಭರವಸೆ ನೀಡಿದ ಶಸ್ತ್ರಚಿಕಿತ್ಸೆ. ರೋಬೋಟಿಕ್ ತಂತ್ರಜ್ಞಾನದಿಂದ ಇದು ಸುರಕ್ಷಿತವಾಗಿ ನೆರವೇರಿತು.”

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment