SUDDIKSHANA KANNADA NEWS/DAVANAGERE/DATE:31_10_2025
ದಾವಣಗೆರೆ: ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ನಡೆದ 7 ನೇ ವಲಯ ಪೊಲೀಸ್ ಕರ್ತವ್ಯಕೂಟದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಜಯಭೇರಿ ಬಾರಿಸಿದವರಿಗೆ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ರವಿಕಾಂತೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.
7 ನೇ ವಲಯ ಪೊಲೀಸ್ ಕರ್ತವ್ಯಕೂಟದಲ್ಲಿ ಎರಡು ದಿನಗಳ ಕೂಟದಲ್ಲಿ 23 ಪ್ರಶಸ್ತಿಗಳನ್ನು ಪಡೆದುಕೊಂಡ ದಾವಣಗೆರೆ ಪೊಲೀಸ್ ತಂಡ ಸರ್ವೋತ್ತಮ ಪ್ರಶಸ್ತಿಗೆ ಭಾಜನವಾಯಿತು. ದಾವಣಗೆರೆ ಜಿಲ್ಲೆಯ ಶ್ವಾನದಳದ ‘ತಾರಾ’ ಬೆಸ್ಟ್ ಡಾಗ್ ಪ್ರಶಸ್ತಿ ಪಡೆಯಿತು.
READ ALSO THIS STORY: ಭವಿಷ್ಯದಲ್ಲಿ ಪೊಲೀಸ್ ವೃತ್ತಿ ಮತ್ತಷ್ಟು ಕಠಿಣ: ಐಜಿಪಿ ಡಾ. ರವಿಕಾಂತೇಗೌಡ ಆತಂಕ ವ್ಯಕ್ತಪಡಿಸಿದ್ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
ಪೊಲೀಸ್ ಪೋಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ವಿಡಿಯೋಗ್ರಾಫಿಯಲ್ಲಿ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ಪೋಟೋಗ್ರಾಫರ್ ಪ್ರಶಾಂತ್ ಕುಮಾರ ಭಾಜನರಾದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ಪೊಲೀಸ್ ಅಧೀಕ್ಷಕಿಉಮಾ ಪ್ರಶಾಂತ್, ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕಿ ಯಶೋಧಾ ವಂಟಗೋಡಿ, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ದಾವಣಗೆರೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ವಲಯ ಮಟ್ಟದ ಕ್ರೀಡಾಕೂಟದ ನೋಡಲ್ ಅಧಿಕಾರಿ ಡಿವೈಎಸ್ಪಿ ರುದ್ರೇಶ್ ಎ. ಕೆ., ಡಿವೈಎಸ್ಪಿ ಪಿ. ಬಿ. ಪ್ರಕಾಶ್ ಮತ್ತಿತರರು ಹಾಜರಿದ್ದರು.







