SUDDIKSHANA KANNADA NEWS/ DAVANAGERE/DATE:22_09_2025
ದಾವಣಗೆರೆ: ಇಂದಿನಿಂದ ನವರಾತ್ರಿ ಹಬ್ಬ ಆರಂಭವಾಗಲಿದೆ. ಹಬ್ಬದ ಈ ಸಂಭ್ರಮದ ನಡುವೆ ನಮ್ಮೆಲ್ಲರ ನೆಚ್ಚಿನ ನಾಯಕರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನದ ಹಬ್ಬ ನಮಗೆಲ್ಲಾ ಸಂಭ್ರಮ ಮೂಡಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಸಾಕಷ್ಟು ಅಭಿವೃದ್ಧಿ ಕೈಗೊಂಡು ಮಾದರಿ ಜಿಲ್ಲೆಯನ್ನಾಗಿಸಿದ್ದಾರೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
READ ALSO THIS STORY: ನಿಮ್ಮ ಪ್ರೀತಿ, ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿ: ಎಸ್. ಎಸ್. ಮಲ್ಲಿಕಾರ್ಜುನ್
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನುಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಸ್ ಎಸ್ ಎಂ ನೇತೃತ್ವದಲ್ಲಿ ಇದೀಗ ದಾವಣಗೆರೆ ಐಟಿ ಹಬ್ ಆಗಿ ರೂಪುಗೊಳ್ಳುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿದ್ದನ್ನು ಸ್ವೀಕರಿಸಿದ ಎಲ್ಲರೂ ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹ ನಡೆಸುವ ಮೂಲಕ ಮಾದರಿಯಾಗಿದ್ದು ಎಲ್ಲರಿಗೂ ಧನ್ಯವಾದಗಳು ಎಂದರು.
ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿ ಆಚರಣೆ ಮಾಡಿದ್ದು ಸಂತಸ ತಂದಿದೆ. ಎಸ್ ಎಸ್ ಎಂ ಅವರು ನಿಮಗೆಲ್ಲಾ ತಿಳಿದಿರುವಂತೆ ದಾವಣಗೆರೆಗೆ ಉತ್ತಮ ಸಿಮೆಂಟ್ ರಸ್ತೆಗಳನ್ನು ನೀಡಿದ್ದಾರೆ. ಹಲವು ಕಡೆ ಜರ್ಮನ್ ಮಾದರಿಗಳು ಕಂಡು ಬರುತ್ತಿದೆ. ಇದಷ್ಟೇ ಅಲ್ಲದೇ ದಾವಣಗೆರೆಗೆ ಆಧುನಿಕ ಸ್ಪರ್ಶ ನೀಡಿ ಅಭಿವೃದ್ಧಿ ಪರ್ವ ಹರಿಸಿದ್ದಾರೆ. ಮುಖ್ಯವಾಗಿ ದಾವಣಗೆರೆ ಇಂದು ಧೂಳುಮುಕ್ತ ನಗರವಾಗಿದೆ. ದೇಶ, ರಾಜ್ಯದಲ್ಲೇ ವಾಸ ಯೋಗ್ಯ ಮಹಾ ನಗರಗಳಲ್ಲಿ ಪ್ರಮುಖವೆಂಬ ಶ್ರೇಯಕ್ಕೆ ದಾವಣಗೆರೆ ಪಾತ್ರವಾಗಿದೆ ಎಂದರೆ ಇದಕ್ಕೆ ಕಾರಣ ಎಸ್ ಎಸ್ ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯೇ ಕಾರಣ. ಮೂಲಸೌಕರ್ಯ, ಚರಂಡಿ, ಒಳ ಚರಂಡಿ, ಮುಖ್ಯವಾಗಿ ಕುಡಿಯುವ ನೀರು, ಬಡವರಿಗೆ ಸರ್ಕಾರದ ಮನೆಗಳನ್ನು ನೀಡುವಲ್ಲಿ ಮಲ್ಲಿಕಾರ್ಜುನ ಬದ್ಧತೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್, ದಿನೇಶ್ ಶೆಟ್ಟಿ, ಕೆ. ಜಿ. ಶಿವಕುಮಾರ್, ಬೂದಾಳ್ ಬಾಬು, ನಾಗರಾಜ್, ಆಯೂಬ್, ಶಾಮನೂರು ಬಸವರಾಜ್, ಮಾಗನೂರು ಪರಶುರಾಮ್, ಮುದ್ದೇಗೌಡ್ರು ಗಿರೀಶ್ ಮತ್ತಿತರರುಹಾಜರಿದ್ದರು.