SUDDIKSHANA KANNADA NEWS/ DAVANAGERE/ DATE:05-02-2025
ದಾವಣಗೆರೆ (Davanagere): ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅತ್ತ ಪ್ರೊ. ಗಾಯತ್ರಿ ದೇವರಾಜ (Gayathri Devaraja) ಬಂಧನವಾಗುತ್ತಿದ್ದಂತೆ ಇತ್ತ ಸಿಬಿಐ ಅಧಿಕಾರಿಗಳ ತಂಡ ವಿವಿಗೆ ಭೇಟಿ ನೀಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ವಿಭಾಗಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಮಗ್ರ ಮಾಹಿತಿ ಪಡೆದಿದ್ದಾರೆ. ಕಾರಿನಲ್ಲಿ ಆಗಮಿಸಿದ್ದ ಅಧಿಕಾರಿಗಳು ಯಾರಿಗೂ ಮಾಹಿತಿ ನೀಡಿರಲಿಲ್ಲ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಗಾಯತ್ರಿ
ದೇವರಾಜ ಬಂಧನವಾದ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬಂದಿದ್ದರು ಎಂದು ತಿಳಿದು ಬಂದಿದೆ.
ಆದ್ರೆ, ಯಾರನ್ನೆಲ್ಲಾ ವಿಚಾರಣೆ ನಡೆಸಿದರು? ಏನೆಲ್ಲಾ ಮಾಹಿತಿ ಸಂಗ್ರಹಿಸಿದರು? ಇದಕ್ಕಿಂತ ಮೊದಲು ವಿವಿಯಲ್ಲಿ ಈ ರೀತಿಯಾದ ಆರೋಪಗಳು ಗಾಯತ್ರಿ ದೇವರಾಜ (Gayathri Devaraja) ಅವರ ಮೇಲೆ ಏನಾದರೂ ಇತ್ತಾ ಎಂಬ ಕುರಿತಂತೆಯೂ ಸಮಗ್ರ ಮಾಹಿತಿ ಕಲೆಹಾಕಿ ಸಿಬಿಐ ಅಧಿಕಾರಿಗಳು ಹೋಗಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ:
BIG EXCLUSIVE: ಸಿಬಿಐನಿಂದ ಬಂಧನಕ್ಕೊಳಗಾಗಿದ್ದರೂ ದಾವಣಗೆರೆ ವಿವಿ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ್ ಸಸ್ಪೆಂಡ್ ಆಗಿಲ್ಲ ಯಾಕೆ…?
ಇನ್ನು ಗಾಯತ್ರಿ ದೇವರಾಜ್ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಕುವೆಂಪು ವಿವಿ, ಬಳ್ಳಾರಿಯ ಕೃಷ್ಣ ದೇವರಾಯ ವಿವಿ, ಮಹಿಳಾ ವಿವಿಯ ಕುಲಪತಿಯಾಗುವ ಕನಸು ಕಂಡಿದ್ದ ಗಾಯತ್ರಿ ದೇವರಾಜ್ ಅವರು ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನವನ್ನೂ
ನಡೆಸಿದ್ದರು. ಹಿರಿತನ, ಸೇವಾವಧಿ ಮತ್ತು ಪ್ರಭಾವ ಬೀರಿಯಾದರೂ ವಿವಿ ಕುಲಪತಿಯಾಗುವ ನಿರೀಕ್ಷೆ ಹೊಂದಿದ್ದರು. ಆದ್ರೆ, ಸದ್ಯ ಬಂಧನದಲ್ಲಿರುವ ಕಾರಣ ಈ ಆಸೆಗೆ ತಣ್ಣೀರೆರಚಿದಂತಾಗಿದೆ.
ಗಾಯತ್ರಿ ದೇವರಾಜ್ ಅವರು ಹಲವಾರು ವರ್ಷಗಳಿಂದ ವಿವಿಯಲ್ಲಿ ಇದ್ದಾರೆ, ಅಧ್ಯಾಪಕಿಯಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಲಪತಿಯಾಗುವ ಗುರಿ ಹೊಂದಿದ್ದರು. ಸಿಬಿಐನಿಂದ ಬಂಧನಕ್ಕೊಳಗಾಗಿರುವುದರಿಂದ ವಿಚಾರಣೆ ಮುಗಿಯಬೇಕು. ಜಾಮೀನು ಸಿಗಬೇಕು. ಆಮೇಲೆ ಪ್ರಯತ್ನ ಪಡಬೇಕು. ಸದ್ಯದ ಪರಿಸ್ಥಿತಿ ನೋಡಿದರೆ ಗಾಯತ್ರಿ ದೇವರಾಜ್ ಅವರು ಕುಲಪತಿಯಾಗುವುದು ಅಷ್ಟು ಸುಲಭವಲ್ಲ.
ಈ ಸುದ್ದಿಯನ್ನೂ ಓದಿ:
EXCLUSIVE: ಲಂಚ ಕೇಸ್ ನಲ್ಲಿ ಸಿಬಿಐ ಬಲೆಗೆ ಬಿದ್ದ ಗಾಯತ್ರಿ ದೇವರಾಜರ ಬಗ್ಗೆ ನಿಮಗೆಷ್ಟು ಗೊತ್ತು..? ಡೀಟೈಲ್ಡ್ ಸ್ಟೋರಿ!
ಸಿಬಿಐ ತಂಡವು ಕೇವಲ ದಾವಣಗೆರೆ ವಿವಿ ಮಾತ್ರವಲ್ಲ, ಗಾಯತ್ರಿ ದೇವರಾಜ (Gayathri Devaraja) ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದೆ. ಎಷ್ಟು ಚಿನ್ನಾಭರಣ ಖರೀದಿಸಿದ್ದಾರೆ? ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ? ಏನೆಲ್ಲಾ ದೂರುಗಳಿವೆ? ಹುದ್ದೆ ಪಡೆದಾಗ ಏನೆಲ್ಲಾ ತೊಂದರೆ ಕೊಟ್ಟಿದ್ದಾರೆ? ಕಾರ್ಯವೈಖರಿ ಹೇಗಿತ್ತು? ವಿದ್ಯಾರ್ಥಿಗಳೊಂದಿಗೆ ಜೊತೆಗೆ ಹೇಗೆ ನಡೆದುಕೊಳ್ಳುತ್ತಿದ್ದರು? ವಿವಿಯಲ್ಲಿ ಅವರ ಬಗ್ಗೆ ಇರುವ ಅಭಿಪ್ರಾಯವೇನು? ಬೇರೆ ಯಾವೆಲ್ಲ ದೂರುಗಳು, ಆರೋಪಗಳು ಇವೆ ಎಂಬ ಕುರಿತಂತೆ ಮಾಹಿತಿ ಕಲೆ ಹಾಕಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.