ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಅಫ್ಜಲ್ ಗುರು ವಧೆ ಮಾಡುವ ಶಿವಾಜಿ ಮಹಾರಾಜರ ಪೋಸ್ಟರ್”: ತೆರವಿಗೆ ಪೊಲೀಸರು ಬರುತ್ತಿದ್ದಂತೆ ಮಟಿಕಲ್ ನಲ್ಲಿ ಉದ್ವಿಗ್ನ ವಾತಾವರಣ!

On: August 29, 2025 8:55 AM
Follow Us:
ಶಿವಾಜಿ
---Advertisement---

SUDDIKSHANA KANNADA NEWS/ DAVANAGERE/DATE:29_08_2025

ದಾವಣಗೆರೆ: ಧರ್ಮ ರಕ್ಷಣೆಗೆ ಸದಾ ಎಚ್ಚರಿಕೆಯಿಂದಿರಿ. ಶಕ್ತಿಯಲ್ಲ, ಯುಕ್ತಿಯಿಂದ ಹೋರಾಡಿ ಅಫ್ಜಲ್ ಖಾನ್ ವಧೆ ಇದು ಕಲಿಸುತ್ತದೆ. ಶಿವಾಜಿ ಮಹಾರಾಜರಂತೆ ರಾಷ್ಟ್ರರಕ್ಷಣೆಗೆ ಸಿದ್ಧರಾಗಿ. ಈ ಪೋಸ್ಟರ್ ಈಗ ನಗರದ ಮಟಿಕಲ್ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. ಇಂದು ಬೆಳಿಗ್ಗೆ ಹಿಂದೂ ಸಂಘಟನೆಗಳು ಸಭೆಗೆ ಕರೆ ನೀಡಿದ್ದು, ಮತ್ತಷ್ಟು ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ.

ಈ ಸುದ್ದಿಯನ್ನೂ ಓದಿ: “ಕಪ್ಪಗಿದ್ದೆಯಾ ಮಗನಿಗೆ ಒಳ್ಳೆಯ ಜೋಡಿಯಲ್ಲ, ಬೇರೆ ಮದ್ವೆ ಮಾಡ್ತೀವಿ ಬಿಟ್ಬಿಡು”: ಟೆಕ್ಕಿ ಸೂಸೈಡ್ ಸ್ಫೋಟಕ ಕಾರಣ ಬಹಿರಂಗ!

ಮಟ್ಟಿಕಲ್ ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪ್ರಯುಕ್ತ ಸ್ಥಳದಲ್ಲಿ ಅಳವಡಿಸಿದ್ದ ಆಕ್ಷೇಪಾರ್ಹ ಚಿತ್ರವೊಂದನ್ನು ತೆರವುಗೊಳಿಸುವಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಚನೆ ನೀಡುತ್ತಿದ್ದಂತೆ ಹಿಂದೂ ಸಂಘಟನೆಗಳ
ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಸಂಘಪರಿವಾರದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಗುರುವಾರ ರಾತ್ರಿ ವಾಗ್ವಾದ, ತಳ್ಳಾಟಕ್ಕೂ ಕಾರಣವಾಗಿದೆ. ಸ್ಥಳದಲ್ಲಿ ಈಗಲೂ ಬೂದಿ ಮುಚ್ಚಿದ ಕೆಂಡಂದಂತಿದೆ.

ನಗರದ ಮಟಿಕಲ್ ನ ವೀರ ಸಾವರ್ಕರ್ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಸಮೀಪದ ರಸ್ತೆಯಲ್ಲಿ ಇತಿಹಾಸದ ಮಹನೀಯರ ಬೃಹತ್ ಗಾತ್ರದ ಪೋಸ್ಟರ್ ಅಳವಡಿಸಿದ್ದಾರೆ. ಇದರಲ್ಲಿ ವೀರ್ ಸಾವರ್ಕರ್ ಸೇರಿದಂತೆ
ಹಲವು ಮಹನೀಯರ ಫೋಟೋಗಳು ರಾರಾಜಿಸುತ್ತಿವೆ. ಶಿವಾಜಿ ಮಹಾರಾಜ್ ಹಾಗೂ ಅಫ್ಜಲ್ ಖಾನ್ ನಡುವಿನ ವಿವಾದದ ಪೋಸ್ಟರ್ ವಿವಾದ ಭುಗಿಲೇಳುವಂತೆ ಮಾಡಿದೆ.

ಈ ಪೋಸ್ಟರ್ ಕಂಡ ಅನ್ಯ ಧರ್ಮದ ಕೆಲವರು ಪೊಲೀಸರಿಗೆ ದೂರು ನೀಡಿದ್ದರು. ಪೋಸ್ಟರ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಇದು ಎರಡು ಕೋಮುಗಳ ನಡುವೆ ವೈಷಮ್ಯ ಉಂಟು ಮಾಡುತ್ತದೆ. ಹಾಗಾಗಿ, ತೆರವುಗೊಳಿಸಿ ಎಂದು ಮನವಿ ಮಾಡಿದ್ದರು. ರಾತ್ರಿ 10.30ಕ್ಕೆ ಆಕ್ಷೇಪಾರ್ಹ ಚಿತ್ರಗಳನ್ನು ತೆರವುಗೊಳಿಸಲು ಪೊಲೀಸರು ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು, ಆರ್ ಎಸ್ ಎಸ್ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆಯ
ಸತೀಶ್ ಪೂಜಾರಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಸೇರಿದಂತೆ ಬಿಜೆಪಿ ನಾಯಕರು ಆಗಮಿಸಿದರು. ಇದು ಐತಿಹಾಸಿಕ ಘಟನೆ. ಅಫ್ಜಲ್ ಗುರುವನ್ನು ವಧೆ ಮಾಡಿದ ಶಿವಾಜಿ ಮಹಾರಾಜರ ಪೋಸ್ಟರ್ ತೆರವುಗೊಳಿಸಲು ಅಸಾಧ್ಯ ಎಂದು ವಾದಿಸಿದರು. ಈ ವೇಳೆ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿ ನಡೆಯಿತು.

ಸ್ಛಳದಲ್ಲಿ ಜಮಾಯಿಸಿದ ಯುವಕರ ಗುಂಪು ಷೋಷಣೆ ಹಾಕಿ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದರು. ಸತೀಶ್ ಪೂಜಾರಿ ಸೇರಿದಂತೆ ನಾಯಕರ ಮನವೊಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಮಧ್ಯಾಹ್ನದವರೆಗೆ ಕಾಲಾವಕಾಶ ಕೇಳಿರುವ ಹಿಂದೂ ಸಂಘಟನೆ ನಾಯಕರು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸ್ಥಳದಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತುಕಡಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment