ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ ಹಾಗೂ ಗ್ರಹಿಕೆಯ ಕುರಿತು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಗುರುವಾರ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ನಡೆದ ‘ಮೈನಾರಿಟೀಸ್ ಎಕ್ಸಲೆನ್ಸ್ ಸಮ್ಮಿಟ್’ (ಅಲ್ಪಸಂಖ್ಯಾತರ ಶ್ರೇಷ್ಠತಾ ಶೃಂಗಸಭೆ) ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, “ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಕೌಶಲ ಹೊಂದಿರುವ ಕಾರ್ಮಿಕರಿದ್ದಂತೆ. ಅವರಿಗೆ ಅವಕಾಶ ನೀಡಿದರೆ ರಫೇಲ್ ಯುದ್ಧವಿಮಾನವನ್ನೇ ಬಿಚ್ಚಿ ಮತ್ತೆ ಜೋಡಿಸುವಷ್ಟು ತಾಂತ್ರಿಕ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಪುಸ್ತಕದಲ್ಲಿ ಓದಿದ ಪಾಠಗಳನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುತ್ತಾರೆ” ಎಂದು ಹೇಳಿದರು.
ಉಚಿತ ವಿದ್ಯುತ್ ಹಾಗೂ ಕಲ್ಯಾಣ ಯೋಜನೆಗಳು:
ಹೈದರಾಬಾದ್‌ನ ಹಳೆಯ ನಗರ (ಓಲ್ಡ್ ಸಿಟಿ) ಪ್ರದೇಶದಲ್ಲಿ ವಿದ್ಯುತ್ ಬಿಲ್ ಪಾವತಿಸದಿರುವ ಮತ್ತು ಕಳ್ಳತನದ ಆರೋಪಗಳ ಕುರಿತು ಪ್ರಸ್ತಾಪಿಸಿದ ಅವರು, “ಕಾಂಗ್ರೆಸ್ ಸರ್ಕಾರ ನೀಡುತ್ತಿರುವ 200 ಯೂನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ) ಯೋಜನೆಯು ಅಲ್ಪಸಂಖ್ಯಾತ ಸಮುದಾಯಕ್ಕೆ ಅತ್ಯಂತ ಉಪಯುಕ್ತವಾಗಿದೆ” ಎಂದು ಸಮರ್ಥಿಸಿಕೊಂಡರು. ಇದರೊಂದಿಗೆ ಶಾದಿ ಮುಬಾರಕ್, ಇಂದಿರಮ್ಮ ಇಂಡ್ಲು, ಮಹಾಲಕ್ಷ್ಮಿ ಉಚಿತ ಬಸ್ ಪ್ರಯಾಣ ಸೇರಿದಂತೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಉಲ್ಲೇಖಿಸಿದರು.
“ಹಿಂದೂ ಮತ್ತು ಮುಸ್ಲಿಮರು ನನ್ನೆರಡು ಕಣ್ಣುಗಳು”:
ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವನ್ನು ಪ್ರತಿಪಾದಿಸಿದ ರೇವಂತ್ ರೆಡ್ಡಿ, “ನನಗೆ ಹಿಂದೂ ಮತ್ತು ಮುಸ್ಲಿಂ ಬೇರೆಯಲ್ಲ, ಇಬ್ಬರೂ ನನ್ನ ಎರಡು ಕಣ್ಣುಗಳಿದ್ದಂತೆ. ಅಲ್ಪಸಂಖ್ಯಾತರನ್ನು ಭಾರತ ವಿರೋಧಿಗಳು ಎಂದು ಚಿತ್ರಿಸುವ ಹುನ್ನಾರ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಸಮಾನ ಹಕ್ಕು ಮತ್ತು ಕಲ್ಯಾಣ ತಲುಪಿಸಲು ಬದ್ಧವಾಗಿದೆ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ತೀವ್ರ ಆಕ್ಷೇಪ:
ರೇವಂತ್ ರೆಡ್ಡಿ ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ತೆಲಂಗಾಣ ಕಾರ್ಯದರ್ಶಿ ತುಲ್ಲಾ ವೀರೇಂದರ್ ಗೌಡ್ ಮಾತನಾಡಿ, “ವಿದ್ಯುತ್ ಬಿಲ್ ಪಾವತಿಸದಿದ್ದಾಗ ಉಚಿತ ಯೋಜನೆಗಳ ಹೆಸರಿನಲ್ಲಿ ಅದನ್ನು ಮನ್ನಾ ಮಾಡುವುದು ಅಸಂವಿಧಾನಿಕ. ಸರ್ಕಾರ ಕಾನೂನು ಜಾರಿಗೊಳಿಸುವುದನ್ನು ಬಿಟ್ಟು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
- BJP Appeasement Allegation
- Congress Welfare Schemes
- Gruha Jyothi Scheme
- Hyderabad News
- Minorities Excellence Summit
- Minority Students Rafale Remark
- Old City Electricity Dues
- Revanth Reddy
- Telangana CM
- Telangana politics
- ಅಲ್ಪಸಂಖ್ಯಾತರ ಶೃಂಗಸಭೆ
- ಉಚಿತ ವಿದ್ಯುತ್
- ಕಾಂಗ್ರೆಸ್ ಸರ್ಕಾರ
- ಗೃಹ ಜ್ಯೋತಿ ಯೋಜನೆ
- ತೆಲಂಗಾಣ ರಾಜಕೀಯ
- ತೆಲಂಗಾಣ ಸಿಎಂ
- ಬಿಜೆಪಿ ಆಕ್ಷೇಪ
- ರಫೇಲ್ ಯುದ್ಧವಿಮಾನ
- ರೇವಂತ್ ರೆಡ್ಡಿ
- ಹೈದರಾಬಾದ್ ಓಲ್ಡ್ ಸಿಟಿ





Leave a comment