Home ಕ್ರೈಂ ನ್ಯೂಸ್ ಸ್ನೇಹಿತೆ ಭೇಟಿ ಮಾಡಿ ಬರುತ್ತೇನೆಂದು ಹೇಳಿ ಹೋದ ಬಿ. ಎಡ್. ಓದುತ್ತಿದ್ದ ಯುವತಿ ಹೋಗಿದ್ದೆಲ್ಲಿಗೆ?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಸ್ನೇಹಿತೆ ಭೇಟಿ ಮಾಡಿ ಬರುತ್ತೇನೆಂದು ಹೇಳಿ ಹೋದ ಬಿ. ಎಡ್. ಓದುತ್ತಿದ್ದ ಯುವತಿ ಹೋಗಿದ್ದೆಲ್ಲಿಗೆ?

Share
Share

ಶಿವಮೊಗ್ಗ: ಅಲ್ಮಾಸ್ ಪರ್ವೀನ್ ಎನ್. ಆರ್. ಈಕೆಯು ಭದ್ರಾವತಿಯ ಸಿಗೇಬಾಗಿಯಲ್ಲಿರುವ ರಾಜೀವ್‌ಗಾಂಧಿ ಬಿ.ಎಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಜ.6 ರಂದು ಸ್ನೇಹಿತೆಯನ್ನು ಭೇಟಿ ಮಾಡಿ ಬರುವುದಾಗಿ ಮನೆಯಿಂದ ಹೋದವಳು ಹಿಂದುರುಗಿ ಬಂದಿಲ್ಲ.

ಕಾಣೆಯಾದ ಅಲ್ಮಾಸ್ ಪರ್ವೀನ್ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆ ಮಾತಾನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್, ಪಿಂಕ್ ಬಣ್ಣದ ಲೆಗಿನ್ಸ್ ಪ್ಯಾಂಟು, ಬಿಳಿ ಗೆರೆಗಳಿರುವ ಕಪ್ಪು ಬಣ್ಣದ ಬುರ್ಖಾ, ಕಾಫಿ ಬಣ್ಣದ ವೇಲ್ ಧರಿಸಿರುತ್ತಾಳೆ.

ಈಕೆಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆ, ಭದ್ರಾವತಿ ಇಲ್ಲಿಗೆ ಮಾಹಿತಿ ನೀಡಬೇಕೆಂದು ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles