SUDDIKSHANA KANNADA NEWS/DAVANAGERE/DATE:02_11_2025
ಹೋಬಾರ್ಟ್: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಐದು ಟಿ-20 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇಂದಿಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ಐದು ವಿಕೆಟ್ ಕಳೆದುಕೊಂಡು ಭರ್ಜರಿ ಜಯ ಗಳಿಸಿದೆ.
READ ALSO THIS STORY: “ಎಲ್ಲೆಲ್ಲಿ ಆಸ್ತಿ ಮಾಡಿದ್ದೇನೆಂದು ನನಗೆೇ ಗೊತ್ತಿಲ್ಲ, ಕಾರ್ ಕೊಡ್ತೇನೆ ಹೋಗಿ ನೋಡ್ಕಂಡು ಬರಲಿ”: ಬಿ. ಪಿ. ಹರೀಶ್ ಗೆ ಎಸ್. ಎಸ್. ಮಲ್ಲಿಕಾರ್ಜುನ್ ಸವಾಲ್!
ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ನಿಗದಿತ 20 ಓವರ್ ಗಳಲ್ಲಿ 187 ರನ್ ಪೇರಿಸಿತು. ಆಸ್ಚ್ರೇಲಿಯಾ ತಂಡವು ಆರಂಭಿಕ ಆಘಾತ ಅನುಭವಿಸಿತು. ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಜೋಶ್ ಇಗ್ಲಿಸ್ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ, ಕೇವಲ 38 ಎಸೆತಗಳಲ್ಲಿ ಐದು ಸಿಕ್ಸರ್, ಎಂಟು ಬೌಂಡರಿಗಳೊಂದಿಗೆ ಟಿಮ್ ಡೆವಿಡ್ 74 ರನ್ ಬಾರಿಸಿದರು. ಮಾತ್ರವಲ್ಲ, ಮರ್ಕಸ್ ಸ್ಟಾನಿಸ್ 64 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಅಂತಿಮವಾಗಿ ಆರು ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು.
ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶುಭಮನ್ ಗಿಲ್ ಮತ್ತೊಮ್ಮೆ ವಿಫಲರಾದರು. ಅಭಿಷೇಕ್ ಶರ್ಮಾ ಕೇವಲ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 25 ರನ್ ಬಾರಿಸಿದರೆ, ಸೂರ್ಯಕುಮಾರ್ ಯಾದವ್ 24 ರನ್ ಗಳಿಸಿ ಔಟ್ ಆದರು.
ತಿಲಕ್ ವರ್ಮಾ 29, ಅಕ್ಷರ್ ಪಟೇಲ್ 17 ರನ್ ಗಳಿಸಿ ಔಟ್ ಆದರು. ನಂತರ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್ ಅಮೋಘ ಆಟವಾಡಿದರು. ಜೊತೆಗೆ ಜಿತೇಶ್ ಶರ್ಮಾ ಉತ್ತಮ ಬೆಂಬಲ ನೀಡಿದರು. ವಾಷಿಂಗ್ಟನ್ ಸುಂದರ್ ಗೆಲುವಿಗೆ ಕಾರಣರಾದರು.
ಭಾರತದ 187 ರನ್ ಚೇಸಿಂಗ್‌ನಲ್ಲಿ ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಬೇಗನೆ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ ತಂಡ ಗೆಲುವಿನ ದಡ ಸೇರಿಸುವಲ್ಲಿ ಯಶ ಕಾಣಲಿಲ್ಲ. ಕೇವಲ 18.3 ಓವರ್ ಗಳಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು.










