SUDDIKSHANA KANNADA NEWS/ DAVANAGERE/ DATE:18-12-2024
ಬ್ರಿಸ್ಟೇನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಯಿಂದ ಪಾರಾಗಿದೆ. ಮಳೆ ಬಂದ ಕಾರಣ ಐದನೇ ದಿನದ ಆಟ ಸ್ಥಗಿತಗೊಳಿಸಲಾಗಿದೆ. ಈ ಪಂದ್ಯವು ಡ್ರಾನಲ್ಲಿ ಅಂತ್ಯಕಂಡಿತು.
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಾಣುವ ಮೂಲಕ ಸರಣಿಯಲ್ಲಿ ಉಭಯ ತಂಡಗಳು 1-1 ರ ಸಮಬಲ ಸಾಧಿಸಿವೆ. ಜಸ್ಪ್ರೀತ್ ಬೂಮ್ರಾ ಹಾಗೂ ಆಕಾಶ್ ದೀಪ್ ಹತ್ತನೇ ವಿಕೆಟ್ ಜೊತೆಯಾಟ ನೀಡಿದ ಕಾರಣ ಫಾಲೋ ಆನ್ ನಿಂದ ಪಾರಾಗಿತ್ತು. ಇಂದು ಬ್ಯಾಟ್ ಮಾಡಲು ಬಂದ ಈ ಜೋಡಿಯು ಕೇವಲ ಎಂಟು ರನ್ ಪೇರಿಸಿತು. ಇದರೊಂದಿಗೆ ಭಾರತ ತಂಡವು 260 ರನ್ ಗಳಿಗೆ ಸರ್ವಪತನ ಕಂಡಿತು.
ಎರಡನೇ ಇನ್ಸಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 89 ರನ್ ಗೆ ಏಳು ವಿಕೆಟ್ ಕಳೆದುಕೊಂಡಾಗ ಡಿಕ್ಲೇರ್ ಘೋಷಿಸಿತು. ಟೀಂ ಇಂಡಿಯಾಕ್ಕೆ 275 ರನ್ ಗಳ ಗುರಿ ನೀಡಿತು. ಭಾರತೀಯ ಬೌಲರ್ ಗಳ ಕರಾರುವಕ್ ದಾಳಿಗೆ ಆಸೀಸ್ ಪಡೆ ಧೂಳೀಪಟವಾಯಿತು. ಬೂರ್ಮಾ 3, ಸಿರಾಜ್ ಅಹ್ಮದ್ 2, ಆಕಾಶ್ ದೀಪ್ 2 ವಿಕೆಟ್ ಪಡೆದರು.
ಭಾರತಕ್ಕೆ ಗೆಲ್ಲಲು 275 ರನ್ ಗುರಿಯನ್ನು ನೀಡಿತು. ಭಾರತ ಗುರಿ ಬೆನ್ನಟ್ಟಿದ್ದು ಕೇವಲ 8 ರನ್ ಗಳಿಸಿದ್ದಾಗ ಮಳೆ ಶುರುವಾಯಿತು. ಆಟವಾಡಲು ಸಾಧ್ಯವಾಗದ ಕಾರಣ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.