SUDDIKSHANA KANNADA NEWS/ DAVANAGERE/ DATE:03-01-2025
ಸಿಡ್ನಿ: ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಬ್ಯಾಟ್ಸಮನ್ ಗಳು ಕಳಪೆ ಪ್ರದರ್ಶನ ತೋರಿದ್ದಾರೆ. ಆಸೀಸ್ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 185 ರನ್ ಗಳಿಗೆ ಭಾರತ ತಂಡವು ಸರ್ವಪತನ ಕಂಡಿದೆ.
ಇನ್ನು ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡದ ಮೊದಲ ವಿಕೆಟ್ ಪತನವಾಗಿದೆ. ಜಸ್ಪ್ರೀತ್ ಬೂಮ್ರಾ ಮೊದಲ ವಿಕೆಟ್ ಪಡೆದಿದ್ದು, ಆಸೀಸ್ ನ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಔಟ್ ಆಗಿ ಪೆವಿಲಿಯನ್ ಗೆ ಮರಳಿದರು.

ಟೀಂ ಇಂಡಿಯಾ ಪರ ಬ್ಯಾಟಿಂಗ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಕೇವಲ 10 ರನ್ ಗಳಿಸಿ ಔಟಾದರೆ, ಕರ್ನಾಟಕದ ಕೆ. ಎಲ್. ರಾಹುಲ್ ಕೊಡುಗೆ ಕೇವಲ 4 ರನ್. ಶುಭಮನ್ ಗಿಲ್ 20 ಹಾಗೂ ವಿರಾಟ್ ಕೊಹ್ಲಿ 17 ರನ್ ಗಳಿಸಿ ಮತ್ತೆ ವೈಫಲ್ಯ ಅನುಭವಿಸಿದರು.
ರಿಷಬ್ ಪಂತ್ ಮಾತ್ರ 40 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. ಆದ್ರೆ, ಸ್ಕಾಟ್ ಬೊಲಾಂಡ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಗೆ ಮರಳಿದರು. ರವೀಂದ್ರ ಜಡೇಜಾ ಕೊಡುಗೆ ಕೇವಲ 26 ರನ್.
ಕಳೆದ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ ಸೆಂಚುರಿ ಬಾರಿಸಿದ್ದ ನಿತೀಶ್ ಕುಮಾರ್ ರೆಡ್ಡಿ ಎದುರಿಸಿದ ಮೊದಲೇ ಬಾಲ್ ನಲ್ಲಿಯೇ ಡಕೌಟ್ ಆದರು. ವಾಷಿಂಗ್ಟನ್ ಸುಂದರ್ 14ರನ್ ಬಾರಿಸಿದರೆ, ಪ್ರಸಿದ್ಧ ಕೃಷ್ಣ 3 ರನ್ ಗಳಿಸಿದರೆ ಮೊಹಮ್ಮದ್
ಸಿರಾಜ್ ಮೂರು ರನ್ ಗಳಿಸಿ ಔಟಾಗದೇ ಉಳಿದರು. ನಾಯಕ ಜಸ್ಟ್ರೀತ್ ಬೂಮ್ರಾ 22 ರನ್ ಬಾರಿಸಿ ಗಮನ ಸೆಳೆದರು. ಆಸ್ಟ್ರೇಲಿಯಾ ತಂಡದ ಪರ ಬೊಲಾಂಡ್ 4, ಮಿಚಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರೆ. ಕಮ್ಮಿನ್ಸ್ 2. ಲಿಯಾನ್ ಒಂದು
ವಿಕೆಟ್ ಪಡೆದರು.
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕೋಕ್ ನೀಡಲಾಗಿದ್ದು, ಗೌತಮ್ ಗಂಭೀರ್ ಕೈ ಮೇಲುಗೈಯಾಗಿದೆ. ಇನ್ನು ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ. ಎಲ್. ರಾಹುಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಬೇಗನೇ ಔಟಾಗಿದ್ದು ತಂಡಕ್ಕೆ
ಮುಳುವಾಗಿ ಪರಿಣಮಿಸಿತು.