ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಿಕ್ಷಕರ ಹುದ್ದೆಗೆ ಏ.11ಕ್ಕೆ ವಾಕ್ ಇನ್ ಇಂಟರ್‌ವ್ಯೂ

On: April 7, 2025 6:01 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:07-04-2025

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಕೊಳಗಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 2025-26ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಏ.11 ರಂದು ವಾಕ್ ಇನ್ ಇಂಟರ್‌ವ್ಯೂ ಗೆ ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

ಅರ್ಹ 21 ರಿಂದ 60 ವರ್ಷ ವಯೋಮಿತಿಗೊಳಪಟ್ಟ, ನವೋದಯ ಅಥವಾ ಕೇಂದ್ರಿಯ ವಿದ್ಯಾಲಯ ಶಾಲೆಗಳಲ್ಲಿ ಉಪನ್ಯಾಸ ಮಾಡಿದ ಅನುಭವವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ವಾಕ್ ಇನ್ ಇಂಟರ್‌ವ್ಯೂ ಅಂದು ಬೆಳಿಗ್ಗೆ 9 ಗಂಟೆಗೆ ಕೊಳಗಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಹುದ್ದೆಗಳು ತಾತ್ಕಾಲಿಕ ಆಗಿರುತ್ತವೆ.

ಸಂದರ್ಶನಕ್ಕೆ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ಶೈಕ್ಷಣಿಕ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಸಂದರ್ಶನ ಸಮಯದಲ್ಲಿ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ.

ಹುದ್ದೆಗಳು:

ಕನ್ನಡ ಶಿಕ್ಷಕ: ಹುದ್ದೆ 01, ಜೀವಶಾಸ್ತ್ರ ಶಿಕ್ಷಕ: ಹುದ್ದೆ 01, ಇಂಗ್ಲೀಷ್ ಭಾಷೆಯಲ್ಲಿ ತರಬೇತಿ ಪಡೆದ ಶಿಕ್ಷಕ-01, ಕನ್ನಡದಲ್ಲಿ ತರಬೇತಿ ಪಡೆದ ಪದವೀಧರ ಶಿಕ್ಷಕರು-02, ದೈಹಿಕ ಶಿಕ್ಷಕರು(ಪುರುಷ ಮತ್ತು ಮಹಿಳೆ)-01+01 ಮತ್ತು ಹಾಸ್ಟೆಲ್ ವಾರ್ಡನ್-01.

ವಿದ್ಯಾರ್ಹತೆ ಮತ್ತು ಹೆಚ್ಚಿನ ಮಾಹಿತಿಗಾಗಿ ನಗರದ ವಾಲ್ಮೀಕಿ ಭವನದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ದೂ.08392-242453 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment