SUDDIKSHANA KANNADA NEWS/ DAVANAGERE/ DATE:17_07_2025
ದಾವಣಗೆರೆ: ಮೆಟ್ಟಿಲ ಮೇಲೆ ಕುಳಿತಿದ್ದ ಶಿಕ್ಷಕರೊಬ್ಬರು ಹೃದಯಾಘಾತಕ್ಕೊಳಗಾಗಿ ಬಿದ್ದು ಸಾವನ್ನಪ್ಪಿದ ಘಟನೆ ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆ ಶಾಲೆಯ ಆವರಣದಲ್ಲಿ ನಡೆದಿದೆ.
ಭಾರತೀಯ ವಿದ್ಯಾ ಸಂಸ್ಥೆಯ ಮುಖ್ಯ ದೈಹಿಕ ಶಿಕ್ಷಕ ಸಿ. ಹೆಚ್. ರವಿಕುಮಾರ್ (42) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಶಾಲೆಯು ಬಿಡುವ ಹೊತ್ತಿಗೆ ವಿದ್ಯಾರ್ಥಿಗಳನ್ನ ಆವರಣದಲ್ಲಿ ಆಟವಾಡಲು ಬಿಟ್ಟಿದ್ದರು. ಈ ವೇಳೆ ಮೆಟ್ಟಿಲ ಮೇಲೆ ಕುಳಿತಿದ್ದ ರವಿಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಮೆಟ್ಟಿಲಿನಿಂದ ಕೆಳಗಡೆ ಬಿದ್ದಿದ್ದಾರೆ. ಆಗ ಸಹಪಾಠಿಗಳು, ಮಕ್ಕಳು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರೊಳಗೆ ರವಿಕುಮಾರ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
READ ALSO THIS STORY: ದಾವಣಗೆರೆ: ಬೈಕ್ ರಿಪೇರಿ ಮತ್ತು ಸೇವೆ ಕುರಿತು 30 ದಿನಗಳ ಉಚಿತ ತರಬೇತಿ: ಯಾವೆಲ್ಲಾ ದಾಖಲಾತಿ ಬೇಕು?
ಹೊನ್ನಾಳಿಯ ದುರ್ಗಿಗುಡಿ ನಿವಾಸಿಯಾಗಿದ್ದ ರವಿಕುಮಾರ್ ಅವರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಶಿಕ್ಷಕರು ಸಾವನ್ನಪ್ಪುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಕಣ್ಣೀರಿಟ್ಟರು.