ತಾಲಿಪಟ್ಟು ಮಾಡಲು ಬೇಕಾಗುವ ವಸ್ತುಗಳು
ಜೋಳದ ಹಿಟ್ಟು – 1 ಬೌಲ್ (200 ಗ್ರಾಮ್)
ಗೋಧಿ ಹಿಟ್ಟು- 50 ಗ್ರಾಮ್
ಕಡಲೆ ಹಿಟ್ಟು- 50 ಗ್ರಾಮ್
ಜೀರಿಗೆ
ಅರಶಿಣ
ಬಿಳಿ ಎಳ್ಳು,
ಅಜ್ವೈನಾ
ಹಸಿಮೆಣಸಿನ ಕಾಯಿ – (ಚಿಕ್ಕದಾಗಿ ಹೆಚ್ಚಿಕೊಂಡಿರುವ 3)
ಖಾರದ ಪುಡಿ
ಈರುಳ್ಳಿ – 1
ಕ್ಯಾರೆಟ್
ಕರಿಬೇವು
ಕೊತ್ತಂಬರಿ
ಉಪ್ಪು
ಎಣ್ಣೆ
ತಾಲಿಪಟ್ಟು ಮಾಡುವ ವಿಧಾನ
ಒಂದು ಪಾತ್ರೆಗೆ ಬೌಲ್‌ನಲ್ಲಿ ಜೋಳದ ಹಿಟ್ಟು ಹಾಕಿ. ಇದಕ್ಕೆ ಗೋಧಿ ಹಿಟ್ಟು, ಕಡಲೆ ಹಿಟ್ಟು, ಜೀರಿಗೆ, ಅರಶಿಣ, ಬಿಳಿ ಎಳ್ಳು, ಅಜ್ವೈನಾ, ಉಪ್ಪು, ಹಸಿಮೆಣಸಿನ ಕಾಯಿ, ಖಾರದ ಪುಡಿ, ಈರುಳ್ಳಿ, ಕ್ಯಾರೆಟ್, ಕರಿಬೇವು, ಕೊತ್ತಂಬರಿ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಿಸಿಕೊಳ್ಳಿ. ಹಿಟ್ಟು ನೀರಾದರೆ ಗೋಧಿ ಹಿಟ್ಟು ಅಥವಾ ಜೋಳದ ಹಿಟ್ಟು ಹಾಕಿಕೊಂಡು ಗಟ್ಟಿಯಾಗಿ ಬರುವಂತೆ ಮಾಡಿ. ಹಿಟ್ಟು ಕಲಸಿದ ಬಳಿಕ 10 ನಿಮಿಷ ಹಾಗೆಯೇ ಇಡಿ.
ಇದಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ದೊಡ್ಡ ಗಾತ್ರದ ಉಂಡೆ ಮಾಡಿಕೊಳ್ಳಿ. ಈಗ ಪ್ಲಾಸ್ಟಿಕ್ ಮೇಲೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಉಂಡೆ ಇಟ್ಟು ಚೆನ್ನಾಗಿ ತಟ್ಟಿಕೊಳ್ಳಿ. ಕೈಗೆ ಎಣ್ಣೆ ಹಚ್ಚಿಕೊಳ್ಳುತ್ತಾ ತಾಲಿಪಟ್ಟು ತಟ್ಟಿಕೊಳ್ಳಿ. ರೊಟ್ಟಿ ತಟ್ಟಿದಂತೆಯೇ ಇದನ್ನೂ ಸಹ ತಟ್ಟಿಕೊಳ್ಳಿ.
ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಳ್ಳಿ. ಕಾವಲಿ ಕಾದ ಬಳಿಕ ಅದರ ಮೇಲೆ ತಾಲಿಪಟ್ಟು ಹಾಕಿ. ಎರಡೂ ಕಡೆ ತಾಲಿಪಟ್ಟು ಚೆನ್ನಾಗಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತಾಲಿಪಟ್ಟು ರೆಡಿಯಾಗುತ್ತದೆ. ಇದಕ್ಕೆ ಕಾಯಿ ಚಟ್ನಿ, ಕಡಲೆ ಚಟ್ನಿ, ಹುರಿಗಡಲೆ ಚಟ್ನಿ ಹಾಗೂ ಟೊಮೆಟೋ ಚಟ್ನಿ ಸಹ ರುಚಿ ಹೆಚ್ಚಿಸುತ್ತದೆ. ಇದನ್ನು ಬೆಳಗ್ಗೆಯ ನಾಷ್ಟಕ್ಕೆ ಸುಲಭವಾಗಿ ಮಾಡಿ ನೋಡಿ.
ಇದಕ್ಕೆ ಕಡಲೆ ಬೀಜದ ಚಟ್ನಿ ತುಂಬಾನೆ ರುಚಿ ನೀಡಲಿದೆ. ಈ ರೆಸಿಪಿಯನ್ನು ನಾವು ಮೊದಲೇ ನೀಡಿದ್ದೇವೆ. ಉದ್ದಿನ ಬೇಳೆ, ಕಡಲೆ ಬೀಜ, ಬೆಳ್ಳುಳ್ಳಿ, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 4 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ. ಈ ರೀತಿ ನೀರು ಹಾಕಿದ ಮೇಲೆ ಅದಕ್ಕೆ ಹುಣಸೆ ಹುಳಿ ಹಿಂಡುಕೊಳ್ಳಿ ಬಳಿಕ ಉಪ್ಪು ಹಾಕಿ ಕುದಿಯಲು ಬಿಡಿ. 5 ನಿಮಿಷ ಕುದಿಯಲು ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇದಾದ ಬಳಿಕ ತಣ್ಣಗಾಗಲು ಕೆಲ ಹೊತ್ತು ಬಿಡಿ. ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಹಾಕಿದರೆ ಚಟ್ನಿ ರೆಡಿಯಾಗಿರುತ್ತದೆ.