ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸುಳ್ಳು ಕೇಸ್ ದಾಖಲಿಸಿರುವ ಚನ್ನಗಿರಿ ಇನ್ ಸ್ಪೆಕ್ಟರ್ ರವೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕು: ಹೊನ್ನೆಮರದಹಳ್ಳಿ ಗ್ರಾಮಸ್ಥರ ಒಕ್ಕೊರಲ ಒತ್ತಾಯ!

On: October 24, 2025 2:35 PM
Follow Us:
ಚನ್ನಗಿರಿ
---Advertisement---

SUDDIKSHANA KANNADA NEWS/DAVANAGERE/DATE:24_10_2025

ದಾವಣಗೆರೆ: ಚನ್ನಗಿರಿ ತಾಲೂಕಿನ ಹೊನ್ನೇಮರದಹಳ್ಳಿ ಬೊಮ್ಮೇನಹಳ್ಳಿ ಮುಖ್ಯ ರಸ್ತೆಯ ದೇವರ ಹೊಲದ ಬಳಿ ಇರುವ ಸೇತುವೆಯ ಬಳಿ ನಾಲ್ಕು ಅಡಿ ಮಳೆ ನೀರು ಹೋಗಲು ಪೈಪುಗಳನ್ನು ಹಾಕಲಾಗುತ್ತಿದೆ. ಈ ಯೋಜನೆಯ ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆಯಾಗಿದೆ. ಇದನ್ನು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಕ್ಕೆ ಸರ್ಕಲ್ ಇನ್ಸೆಕ್ಟರ್ ರವೀಶ್ ಅವರು ಕೆಲಸ ಮಾಡಲು ಬಿಡದಿದ್ದರೆ ನುಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮೂಲಕ ಅಟ್ರಾಸಿಟಿ ಕೇಸ್ ದಾಖಲಿಸುವವಾಗಿ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

READ ALSO THIS STORY: ನನಗೆ ಮತ್ತು ಹಲವರಿಗೆ ನೊಟೀಸ್ ಬಂದಿದೆ, ಸಿಎಂ ಪುತ್ರನಿಗೆ ಯಾಕಿಲ್ಲ: ಇದ್ಯಾವ ಧರ್ಮ ಎಂದ್ರು ಶಾಸಕ ಬಸವರಾಜ್ ಶಿವಗಂಗಾ?

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನುಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಯಾವುದೇ ಆಟ್ರಾಸಿಟಿ ಕೇಸ್ ಅನ್ನು ಗ್ರಾಮಸ್ಥರ ವಿರುದ್ಧ ಹಾಕಿಲ್ಲ. ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಸರ್ಕಲ್ ಇನ್ ಸ್ಪೆಕ್ಟರ್ ರವೀಶ್ ಅವರು ಸಿವಿಲ್ ಡ್ರೆಸ್ ನಲ್ಲಿ ಬಂದಿದ್ದಾರೆ. ಆಗ ಗ್ರಾಮಸ್ಥರು ರವೀಶ್ ಅವರಿಗೆ ಅಟ್ರಾಸಿಟಿ ಕೇಸ್ ಯಾವ ಕಾರಣಕ್ಕೆ ಹಾಕುತ್ತಿದ್ದೀರಿ ಎಂದು ಕೇಳಿದ್ದಾರೆ. ಆದರೆ ಪೊಲೀಸ್ ವಾಹನದಿಂದ ಕೆಳಗೆ ಇಳಿಯದೆ ನಮ್ಮ ಮೇಲೆ ವಾಹನವನ್ನು ಹತ್ತಿಸುವ ಹಾಗೆ ವರ್ತಿಸಿದ್ದಾರೆ ಎಂದು ದೂರಿದರು.

ಗ್ರಾಮಸ್ಥರು ಬೇರೆ ಆಯ್ಕೆ ಇಲ್ಲದೆ ರಸ್ತೆಯಲ್ಲಿ ಕೂತು ರವೀಶ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ಸಮಯದಲ್ಲಿ ರವೀಶ್ ಅವರು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಸಿಬ್ಬಂದಿಗಳು ಬಂದ ಕೂಡಲೇ ತಾವು ಜೀಪ್ ಇಂದ ಇಳಿದು ಅವಾಚ್ಯ ಶಬ್ದಗಳಿಂದ ರಸ್ತೆಯಲ್ಲಿ ಕುಳಿತಿದ್ದ ಗ್ರಾಮಸ್ಥರ ನಿಂದಿಸಿದ್ದೂ ಅಲ್ಲದೇ, ಎಳೆದುಕೊಂಡು ಪೊಲೀಸ್ ವಾಹನದಲ್ಲಿ ಕೂರಿಸಿದ್ದಾರೆ. ಸಿವಿಲ್ ಕಾಮಗಾರಿಯಲ್ಲಿ ಪೊಲೀಸರು ತಲೆ ಹಾಕುವುದು ಕಾನೂನು ಬಾಹಿರವಾಗಿದ್ದರೂ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ದೂರು ಅಥವಾ ಅನುಮತಿ ಪಡೆಯದೆ ಕಾಮಗಾರಿಯ ಸ್ಥಳಕ್ಕೆ ಬಂದು ಪುರುಷರು ಮತ್ತು ಮಹಿಳೆಯರ ಮೇಲೆ ದೈಹಿಕವಾಗಿ ಮತ್ತು ಅವಾಚ್ಯ ಪದಗಳಿಂದ ನಿಂದಿಸಿ ತಾವೇ ದೌರ್ಜನ್ಯ ಎಸಗಿದ್ದರೂ ಸಹ ಗ್ರಾಮಸ್ಥರನ್ನು ತಪ್ಪಿತಸ್ಥರನ್ನಾಗಿ ಮಾಡಿ ಕಾನೂನು ತಮ್ಮ ಕೈಯಲ್ಲಿ ಇದೆ ಎಂದು ತಮಗೆ ಇಷ್ಟ ಬಂದಂತೆ ಬಳಸಿರುವುದು ಈ ದೇಶದ ಸಂವಿಧಾನಕ್ಕೆ ಮಾಡಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೃದ್ಧೆಯೊಬ್ಬರು ಈ ವೇಳೆ ಮೂರ್ಛೆ ಬಿದ್ದು ರಸ್ತೆಯಲ್ಲಿ ಬಿದ್ದಾಗ ಅವರನ್ನು ಗಮನಿಸಿದೆ ಮಾತನಾಡಿಸದೆ ಅಕ್ಕಪಕ್ಕ ನಿಲ್ಲಿಸಿದ್ದ ಬೈಕ್ ಗಳನ್ನು ಚರಂಡಿಗೆ ತಳ್ಳಿ ಹೆಣ್ಣು ಮಕ್ಕಳಿಗೆ ತುಚ್ಚ ಪದಗಳಿಂದ ನಿಂದಿಸಿ ತರಾತುರಿಯಲ್ಲಿ ಹೋಗಿದ್ದಾರೆ. ಅರ್ಧ ಗಂಟೆ ಬಿಟ್ಟು ವಾಪಾಸು ಕಾಮಗಾರಿ
ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ಯೂನಿಫಾರ್ಮ್ ನಲ್ಲಿ ಬಂದು ಪೊಲೀಸ್ ಸಿಬ್ಬಂದಿಗಳನ್ನು ರಸ್ತೆಯ ಅಕ್ಕಪಕ್ಕ ನಿಲ್ಲಿಸಿ ಈಗ ಬಂದ್ರು ತಾಕತ್ತಿದ್ರೆ ನಾನೇನು ಅಂತ ತೋರಿಸ್ತೀನಿ ಎಂದು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ಕಳಪೆ ಕಾಮಗಾರಿಯನ್ನು ಪ್ರಶ್ನಿಸುವುದು ಅಪರಾಧವಾದರೆ ದೇಶದ ಭವಿಷ್ಯವನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಈ ಘಟನೆ ನಡೆದು 10 ದಿನಗಳ ಕಳೆದರೂ ಇಲ್ಲಿಯವರೆಗೂ ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಅಚ್ಚರಿಯ ಸಂಗತಿ. ಸಂವಿಧಾನದ ಅಡಿಯಲ್ಲಿ ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆಯೋ ಇಲ್ಲವೋ ಇನ್ನು ಬ್ರಿಟೀಷರ ಆಳ್ವಿಕೆಯಲ್ಲಿ ಬದುಕುತ್ತಿದ್ದೇವೋ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಲ್ ಇನ್ ಸ್ಪೆಕ್ಟರ್ ರವೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಮತ್ತು ಹೆಣ್ಣು ಮಕ್ಕಳ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ತಹಶೀಲ್ದಾರ್ ಕೋರ್ಟ್ ನಲ್ಲಿ ಗ್ರಾಮಸ್ಥರ ಮೇಲೆ ಮತ್ತೊಂದು ಕೇಸ್ ಅನ್ನು ದೀಪಾವಳಿ ಹಬ್ಬದಂದು ಹಾಕಲಾಗಿದೆ. ಇಂತಹ ಅಧಿಕಾರಿಗಳ ಬಳಿ ಸಾಮಾನ್ಯ ಜನರು ಬದುಕುವುದಾದರೂ ಹೇಗೆ? ಸಾಮಾನ್ಯ ಜನ ಠಾಣೆಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಈ ಹೋರಾಟ ಪೊಲೀಸ್ ಇಲಾಖೆಯ ವಿರುದ್ಧ ಅಲ್ಲ. ದೌರ್ಜನ್ಯ ಎಸಗಿದ ಅಧಿಕಾರಿ ರವೀಶ್ ಅವರ ವಿರುದ್ಧ. ಮುಂದಿನ ದಿನಗಳಲ್ಲಿ ನಮ್ಮ ಗ್ರಾಮಸ್ಥರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾದಲ್ಲಿ ಅದಕ್ಕೆ ಜವಾಬ್ದಾರಿಯು ಸರ್ಕಲ್ ಇನ್ ಸ್ಪೆಕ್ಟರ್ ಅವರೇ ಆಗಿರುತ್ತಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಹೊನ್ನೆಮರದಹಳ್ಳಿ ಗ್ರಾಮದ ಮುಖಂಡರಾದ ಉಮಾಪತಿ, ರಘು, ಪ್ರಸನ್ನಕುಮಾರ್, ಶಾಂತವೀರಪ್ಪ, ರುದ್ರೇಶ, ಶಶಿಕುಮಾರ್, ಲೋಕೇಶಪ್ಪ, ಚಂದ್ರಪ್ಪ, ಚಂದನಾ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment