ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜುಬಿಲಿ ಹಿಲ್ಸ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಸೈಯದ್ ಖಾಲಿದ್ ಅಹ್ಮದ್ ಮನೆ ಮನೆಗೆ ತೆರಳಿ ಮತಯಾಚನೆ

On: October 20, 2025 5:27 PM
Follow Us:
ಜುಬಿಲಿ ಹಿಲ್ಸ್
---Advertisement---

SUDDIKSHANA KANNADA NEWS/DAVANAGERE/DATE:20_10_2025

ದಾವಣಗೆರೆ: ಹೈದರಾಬಾದ್ ನ ಜುಬಿಲಿ ಹಿಲ್ಸ್ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ನವೀನ್ ಯಾದವ್ ಪರ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ತೆಲಂಗಾಣ ಯುವ ಕಾಂಗ್ರೆಸ್ ಕಾಂಗ್ರೆಸ್ ಉಸ್ತುವಾರಿ ಸೈಯದ್ ಖಾಲಿದ್ ಅಹ್ಮದ್ ಅವರು ಭರ್ಜರಿ ಪ್ರಚಾರ ನಡೆಸಿದರು.

READ ALSO THIS STORY: ಅಭಿಷೇಕ್ ಆಚಾರ್ಯ ಸಾವಿಗೆ ರೋಚಕ ಟ್ವಿಸ್ಟ್: ಸ್ನೇಹಿತೆಯರು ಬಟ್ಟೆ ಬದಲಿಸುವ ದೃಶ್ಯ ಸೆರೆ ಹಿಡಿದಿದ್ದ ನರ್ಸ್ ನಿರೀಕ್ಷಾಳ “ನಿರೀಕ್ಷೆ” ಏನಿತ್ತು..?
ಮನೆ ಮನೆಗೆ ತೆರಳಿ ಜುಬಿಲಿ ಹಿಲ್ಸ್ ನ ಎರ್ರಗಡ್ಡ ಸೇರಿದಂತೆ ವಿವಿಧೆಡೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.

ಮತಯಾಚನೆ ವೇಳೆ ಮಾತನಾಡಿದ ಸೈಯದ್ ಖಾಲಿದ್ ಅಹ್ಮದ್ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳನ್ನು ನೀಡಿ ಚುನಾವಣೆಗೆ ಮುನ್ನ ಕೊಟ್ಟ ಭರವಸೆಯಂತೆ ನಡೆದುಕೊಂಡಿದೆ. ಜನರ ಹಿತಕ್ಕಾಗಿ ಆರ್ಥಿಕ ಹೊರೆ ನಡುವೆ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಜನಪ್ರಿಯ ಯೋಜನೆ ನೀಡಿ ಜನಮನ್ನಣೆ ಗಳಿಸಿದೆ. ಸಿಎಂ ರೇವಂತ್ ರೆಡ್ಡಿ ಅವರ ಜನೋಪಯೋಗಿ ಕಾರ್ಯಗಳನ್ನು ನೋಡಿ ಮತ ನೀಡುವಂತೆ ಮನವಿ ಮಾಡಿದರು.

ಬಿಜೆಪಿ ವೋಟ್ ಚೋರಿ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಬಾರಿಯು ಗೆಲುವಿಗೆ ವಾಮಮಾರ್ಗ ಅನುಸರಿಸುತ್ತದೆ. ಇಂಥ ಪಕ್ಷ ಹಾಗೂ ಬಿಆರ್ ಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಅಧಿಕಾರ ನಡೆಸಿದರೂ ಜನಪರ ಕಾರ್ಯಕ್ರಮ ನೀಡದೇ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಹಾಗಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ಮತ ನೀಡಿ ಬಹುಮತ ಕೊಟ್ಟು ಅಧಿಕಾರಕ್ಕೇರಿಸಿದ್ದಾರೆ. ನವೀನ್ ಯಾದವ್ ಅವರನ್ನು ಗೆಲ್ಲಿಸಿದರೆ ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಜೊತೆಗೆ ಜನರ ಆಶೋತ್ತರಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದರೆ ಅಭಿವೃದ್ಧಿ ಭಾಗ್ಯ ಸಿಗಲಿದೆ ಎಂದು ತಿಳಿಸಿದರು.

ಬಿಆರ್‌ಎಸ್ ಶಾಸಕರು ಜುಬಿಲಿ ಹಿಲ್ಸ್‌ನಿಂದ ಎರಡು ಬಾರಿ ಜಯ ಗಳಿಸಿದ್ದರೂ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸ ಆಗಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನವನ್ನೇ ಹರಿಸಿಲ್ಲ. ಕ್ಷೇತ್ರದಲ್ಲಿ ಅನೇಕ ಕೊಳೆಗೇರಿ ಪ್ರದೇಶಗಳಿವೆ. ಎಲ್ಲಾ ವಾರ್ಡ್‌ಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಸುಧಾರಿಸಬೇಕಾಗಿದೆ. ಹಾಗಾಗಿ “ಈ ಉಪಚುನಾವಣೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಒಂದು ಅವಕಾಶ” ಇದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಮನವಿ ಮಾಡಿದರು.

ಈ ವರ್ಷದ ಜೂನ್‌ನಲ್ಲಿ ಶಾಸಕರಾಗಿದ್ದ ಗೋಪಿನಾಥ್ ಅವರ ನಿಧನದಿಂದ ಉಪಚುನಾವಣೆ ಎದುರಾಗಿದೆ. ಬಿಆರ್‌ಎಸ್ ಗೋಪಿನಾಥ್ ಅವರ ಪತ್ನಿ ಸುನೀತಾ ಅವರನ್ನು ಕಣಕ್ಕಿಳಿಸಿದೆ, ಆದರೆ ಕಾಂಗ್ರೆಸ್ ಪಕ್ಷವು ಕಡಿಮೆ ಮತಗಳ ಅಂತರದಿಂದ ಈ ಹಿಂದೆ ಪರಾಜಯ ಕಂಡಿದ್ದ ನವೀನ್ ಯಾದವ್ ಅವರಿಗೆ ಜುಬಿಲಿ ಹಿಲ್ಸ್‌ನಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ. ಸಿಕಂದರಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕ್ಷೇತ್ರಗಳಲ್ಲಿ ಒಂದಾದ ಜುಬಿಲಿ ಹಿಲ್ಸ್‌ನಲ್ಲಿ ಬಿಜೆಪಿಯು ವಾಮಮಾರ್ಗ ಅನುಸರಿಸುವ ಸಾಧ್ಯತೆ ತಳ್ಳಿ ಹಾಕದು. ಮತದಾರರು ಎಚ್ಚೆತ್ತು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಹೇಳಿದರು.

ನವೀನ್ ಯಾದವ್ ಪರ ಮತಯಾಚನೆ ವೇಳೆ ಕಾಂಗ್ರೆಸ್ ರಾಜ್ಯ ಮುಖಂಡರಾದ ಜಿ. ಎಸ್. ಮಜೀದ್ ಖಾನ್, ಚಂದ್ರಿಕಾ, ಕ್ವಿಜರ್, ರಮ್ಯಾ, ಶಮಿಲಿ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶೇಕ್ ಖಲೀದ್, ವಿಭಾಗೀಯ ಅಧ್ಯಕ್ಷ ಗೌಸ್ ಮತ್ತಿತರರು ಈ ವೇಳೆ ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಸಿದ್ದರಾಮಯ್ಯ

ಆರ್ ಎಸ್ .ಎಸ್ ನಿಷೇಧಿಸಿಲ್ಲ, ಜಗದೀಶ್ ಶೆಟ್ಟರ್ ಅವಧಿಯಲ್ಲಿ ಹೊರಡಿಸಿದ್ದ ಆದೇಶವನ್ನೇ ನಾವೂ ಹೊರಡಿಸಿದ್ದೇವೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!

ರಾಹುಲ್ ಗಾಂಧಿ

“ಬೇಗ ಮದುವೆಯಾಗಿ, ಸಿಹಿತಿಂಡಿ ಆರ್ಡರ್ ಕೊಡ್ತಿರೆಂದು ಕಾಯ್ತಿದ್ದೇವೆ: ರಾಹುಲ್ ಗಾಂಧಿಗೆ ಶಾಕ್ ಕೊಟ್ಟ ಸಿಹಿತಿಂಡಿ ತಿನಿಸು ಮಾಲೀಕ!

ಪ್ರಿಯಾಂಕ್ ಖರ್ಗೆ

ಸರ್ಕಾರಿ ನೌಕರರು ಸಂಘಟನೆ, ಪಕ್ಷದ ಸದಸ್ಯರಂತಿರಬಾರದು, ಬಿಜೆಪಿ ಸಂಸದರೇ ಉಲ್ಲಂಘಿಸುವರ ಸಮರ್ಥನೆ ಎಷ್ಟು ಸರಿ: ಪ್ರಿಯಾಂಕ್ ಖರ್ಗೆ

ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವ ಬದಲು ರೈತರೇ ಶಾಸಕರ ಕೊಂದು ಹಾಕಿ: ಮಾಜಿ ಸಚಿವನ ವಿಚಿತ್ರ ಸಲಹೆ!

ನರೇಂದ್ರ ಮೋದಿ

ಪಾಕಿಸ್ತಾನಕ್ಕೆ ಐಎನ್ಎಸ್ ವಿಕ್ರಾಂತ್ ನಿದ್ದೆಯಿಲ್ಲದ ರಾತ್ರಿಗಳನ್ನು ಕೊಟ್ಟಿತು: ದೀಪಾವಳಿಯಂದು ನೌಕಾಪಡೆಗೆ ನರೇಂದ್ರ ಮೋದಿ ಬಹುಪರಾಕ್!

ನರ್ಸ್

ಅಭಿಷೇಕ್ ಆಚಾರ್ಯ ಸಾವಿಗೆ ರೋಚಕ ಟ್ವಿಸ್ಟ್: ಸ್ನೇಹಿತೆಯರು ಬಟ್ಟೆ ಬದಲಿಸುವ ದೃಶ್ಯ ಸೆರೆ ಹಿಡಿದಿದ್ದ ನರ್ಸ್ ನಿರೀಕ್ಷಾಳ “ನಿರೀಕ್ಷೆ” ಏನಿತ್ತು..?

Leave a Comment