ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪಕ್ಷ ನಿಷ್ಠೆ, ಶ್ರಮಕ್ಕೆ ಪ್ರತಿಫಲ: ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಪಡೆದ “ಯುವನಾಯಕ”ನಿಗೆ ಪ್ರಮುಖ ಹುದ್ದೆ ಜವಾಬ್ದಾರಿ

On: July 30, 2025 10:25 PM
Follow Us:
ಪಕ್ಷ
---Advertisement---

ದಾವಣಗೆರೆ: ಪಕ್ಷ ಸಂಘಟನೆ, ಪಕ್ಷ ನಿಷ್ಠೆ, ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ಛಾತಿ ಹೊಂದಿರುವ ಸೈಯದ್ ಖಾಲಿದ್ ಅಹ್ಮದ್ ಅವರು ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಪಡೆಯುತ್ತಿರುವ ಯುವ ನಾಯಕ. ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಸೈಯದ್ ಖಾಲಿದ್ ಅಹ್ಮದ್ ಅವರು, ತೆಲಂಗಾಣ, ತಮಿಳುನಾಡು, ಹರಿಯಾಣ, ದೆಹಲಿ, ಕೇರಳ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿರುವ ನೇತಾರ.

ಈಗ  ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ.
ಈ ಮೂಲಕ ಪಕ್ಷಕ್ಕೆ ನೀಡಿದ ಕೊಡುಗೆ, ಸಂಘಟನೆಗೆ ವಹಿಸಿದ ಶ್ರಮ, ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ, ಚುನಾವಣೆಗಳಲ್ಲಿ ಹಗಲಿರುಳು ಪ್ರಚಾರ, ಯುವಕರ ಸಂಘಟನೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ರಾಜ್ಯ ಮಾತ್ರವಲ್ಲ, ಕೇಂದ್ರದ ನಾಯಕರ ಗಮನ ಸೆಳೆಯುವ ಜೊತೆಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಾವಣಗೆರೆಯಿಂದ ದೆಹಲಿಯವರೆಗೆ:

ಸೈಯದ್ ಖಾಲಿದ್ ಅಹ್ಮದ್ ಅವರು 1988ರ ಏಪ್ರಿಲ್ 4ರಂದು ದಾವಣಗೆರೆಯಲ್ಲಿ ಜನಿಸಿದರು. ದಾವಣಗೆರೆಯ ರಾಜಕೀಯ ಪ್ರಭಾವಶಾಲಿ ಕುಟುಂಬದಿಂದ ಬಂದವರು.

ಈ ಸುದ್ದಿಯನ್ನೂ ಓದಿ: SPECIAL STORY: ಚಾಣಾಕ್ಷ ನಾಯಕ ಕಾಂಗ್ರೆಸ್ ಕಟ್ಟಾಳು “ಗಜೇಂದ್ರ” ಜಗನ್ನಾಥ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸೈಯದ್ ಸೈಫುಲ್ಲಾ ಅವರ ಪುತ್ರ ಸೈಯದ್ ಖಾಲಿದ್ ಅಹ್ಮದ್. ತಂದೆ ನೆರಳಿನಲ್ಲಿ,

ಆಶಯ ಹಾಗೂ ನಡೆದು ಬಂದ ಹಾದಿಯಂತೆ ಮುಂದುವರಿಯುತ್ತಿರುವವರು. ಕಾನೂನಿನಲ್ಲಿತೀವ್ರ ಆಸಕ್ತಿ ಹೊಂದಿ ಪದವಿ ಪಡೆದರೂ, ಎಂಜಿನಿಯರಿಂಗ್ ಮುಗಿಸಿ ಪದವೀಧರರಾದವರು.

ದೇಶಾದ್ಯಂತ ಯುವಕರಿಗೆ ಸ್ಫೂರ್ತಿ ಚಿಲುಮೆ: ಪಕ್ಷ ನಿಷ್ಠೆಗೆ ಮಣೆ

ಭರವಸೆ ಮತ್ತು ಪ್ರಗತಿಯ ಸಂಕೇತವಾಗಿರುವ ಸೈಯದ್ ಖಾಲಿದ್ ಅಹ್ಮದ್ ಅವರು, ಪ್ರಸ್ತುತ ಭಾರತೀಯ ಯುವ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದವರು. ಕಳೆದ ಮೂರು ವರ್ಷಗಳಿಂದ ಸಲ್ಲಿಸಿದ ಸೇವೆ ಗುರುತಿಸಿ ಕಾಂಗ್ರೆಸ್ ಹೈಕಮಾಂಡ್ ಮುಂದುವರಿಸಲು ಇಚ್ಚಿಸಿ, ಆದೇಶ ಹೊರಡಿಸಿದೆ. ತೆಲಂಗಾಣ ರಾಜ್ಯದ ಯುವ ಕಾಂಗ್ರೆಸ್ ಉಸ್ತುವಾರಿಯಾಗಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾವಣಗೆರೆಯಿಂದ ದೆಹಲಿಯವರೆಗಿನ ಅವರ ಪ್ರಯಾಣವು ಬದ್ಧತೆ, ಕ್ರಿಯಾತ್ಮಕ ನಾಯಕತ್ವ ಮತ್ತು ಸಾಮಾಜಿಕ ಸೇವೆಯ ಉತ್ಸಾಹಕ್ಕೆ ಸಾಕ್ಷಿ ಎಂದರೆ ಅತಿಶಯೋಕ್ತಿಯಲ್ಲ.

ರಾಜಕೀಯ ಜೀವನ:

ಖಾಲಿದ್ ಅವರ ರಾಜಕೀಯ ಪ್ರಯಾಣವು ವಿದ್ಯಾರ್ಥಿ ಜೀವನದ ದಿನಗಳಲ್ಲಿ ಪ್ರಾರಂಭವಾಯಿತು. ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ವಿದ್ಯಾರ್ಥಿ ನಾಯಕರಾದವರು. ಪ್ರಜಾಪ್ರಭುತ್ವ
ಪ್ರಕ್ರಿಯೆಯಿಂದ ಪ್ರೇರಿತರಾಗಿ ಯುವ ಕಾಂಗ್ರೆಸ್‌ಗೆ ತತ್ವ, ಸಿದ್ಧಾಂತಗಳಡಿ ಕೆಲಸ ಮಾಡಿದವರು. ವಿದ್ಯಾರ್ಥಿ ಮತ್ತು ಯುವ ರಾಜಕೀಯದಲ್ಲಿ ಪ್ರೇರಕ ಶಕ್ತಿಯಾದರು. ಅನುಭವ ಪಡೆದ ಅವರು ಕಿಸ್ಮಾ ಫೌಂಡೇಶನ್ ಅನ್ನು ಸ್ಥಾಪಿಸಿದರು. ಮಿಲ್ಲತ್ ಶೈಕ್ಷಣಿಕ ಮತ್ತು ಕಲ್ಯಾಣ ಸಂಘ ದ ಜಂಟಿ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

ಸಾಮಾಜಿಕ ಸೇವೆ:
ರಾಜಕೀಯೇತರ ಎನ್‌ಜಿಒ “ಕೆಎಸ್‌ಎಸ್ ಫೌಂಡೇಶನ್” ಅನ್ನು ಸ್ಥಾಪಿಸಿದರು. ಈ ಸಂಸ್ಥೆಯು ಅವರ ಆಪ್ತರೊಂದಿಗೆ, ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮತ್ತು ವಿವಿಧ ಸಾಮಾಜಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ಈ ಅತ್ಯುತ್ತಮ ಕಾರ್ಯಕ್ಕೆ 2017 ರಲ್ಲಿ ಅತ್ಯುತ್ತಮ ಸಮಾಜ ಸೇವಕ ಎಂಬ ಬಿರುದು ಬಂದಿತ್ತಲ್ಲದೇ, ಮನ್ನಣೆಗೆ ಪಾತ್ರವಾಗಿತ್ತು.

2010 ರಲ್ಲಿ ಖಾಲಿದ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರಾಗುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಬೇಗನೇ ಪ್ರವರ್ಧಮಾನಕ್ಕೆ ಬಂದರು. 2017 ರ ಗೋವಾ ಚುನಾವಣೆಯನ್ನು ಸಂಘಟಿಸುವುದು ಮತ್ತು ನಂತರ ತೆಲಂಗಾಣ, ತಮಿಳುನಾಡು, ಹರಿಯಾಣ, ದೆಹಲಿ, ಕೇರಳ ಮತ್ತು ಗುಜರಾತ್‌ನಂತಹ ವಿವಿಧ ರಾಜ್ಯಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿ ಸೈ ಎನಿಸಿಕೊಂಡರು.

ದಾವಣಗೆರೆಯಲ್ಲಿ ನಾಯಕತ್ವ:

2017ರಲ್ಲಿ, ಖಾಲಿದ್ ಅವರು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. ಈ ವೇಳೆ ಸಂಘಟಿಸಿದ ಪರಿ ಎಲ್ಲರ ಗಮನ ಸೆಳೆಯಿತು. ಜಿಲ್ಲೆಯಾದ್ಯಂತ ಯುವ ನಾಯಕರ ಸೃಷ್ಟಿಸಿದರು. ರ್ಯಾಲಿಗಳು, ಪ್ರತಿಭಟನೆಗಳು, ರಕ್ತದಾನ ಶಿಬಿರಗಳು, ಮತದಾರರ ದಾಖಲಾತಿ ಅಭಿಯಾನಗಳು ಮತ್ತು ಜಾಗೃತಿ ಅಭಿಯಾನಗಳನ್ನೂ ಯಶಸ್ವಿಯಾಗಿ ಕಾರ್ಯಗತಗೊಳಿಸಲು ಶ್ರಮಿಸಿದರು.

ರಾಷ್ಟ್ರೀಯ ಮನ್ನಣೆ ಮತ್ತು ಜವಾಬ್ದಾರಿಗಳು:

ಅನುಕರಣೀಯ ದಕ್ಷತೆ ಮತ್ತು ಪಕ್ಷದ ನಿಷ್ಠೆಯಿಂದ ಯುವ ಕಾಂಗ್ರೆಸ್ಸಿಗ ಎಂದು ಗುರುತಿಸಲ್ಪಟ್ಟ ಖಾಲಿದ್ ಅವರನ್ನು 2019 ರಲ್ಲಿ ತಮಿಳುನಾಡಿನ ಭಾರತೀಯ ಯುವ ಕಾಂಗ್ರೆಸ್ ಉಸ್ತುವಾರಿಯ ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಲಾಯಿತು. ಅವರ ಕ್ರಿಯಾತ್ಮಕ ನಾಯಕತ್ವ ಮುಂದುವರೆಯಿತು.

2021 ರ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅಗತ್ಯವಿರುವವರಿಗೆ ಅಗತ್ಯ ಸಾಮಗ್ರಿಗಳು, ಕಷ್ಟದಲ್ಲಿದ್ದವರಿಗೆ ನೆರವು, ಬಡವರಿಗೆ ಆಹಾರ ವ್ಯವಸ್ಥೆ, ಲಸಿಕೆ ಸೇರಿದಂತೆ ಕಷ್ಟಕ್ಕೆ ಸ್ಪಂದಿಸುವ ಮೂಲಕ ಜನರ ಮನ ಗೆದ್ದವರು.

ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮರು ಆಯ್ಕೆ:

ಪಕ್ಷ ನಿಷ್ಟೆ, ಹಗಲಿರುಳು ಶ್ರಮ, ಜವಾಬ್ದಾರಿ ನಿಭಾಯಿಸಿದ ಪರಿ ಖಾಲಿದ್ ಅಹ್ಮದ್ ಅವರಿಗೆ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ಅರಸಿ ಬಂದಿತು. ಈ ಜವಾಬ್ದಾರಿ ತೆಲಂಗಾಣ ರಾಜ್ಯದ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ವಿಸ್ತರಿಸಿತು. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾಲಿದ್ ಅವರು ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.

ಜನರ ಆಶೀರ್ವಾದ ಮತ್ತು ಬೆಂಬಲದೊಂದಿಗೆ, ಖಾಲಿದ್ ತಮ್ಮ ಸಾಮಾಜಿಕ ಮತ್ತು ರಾಜಕೀಯ ಕೆಲಸವನ್ನು ಮುಂದುವರಿಸುವ ಮೂಲಕ ಜನರ ಸುಧಾರಣೆಗಾಗಿ ಕೆಲಸ ಮಾಡುವ ಗುರಿ ಹೊಂದಿದ್ದಾರೆ. ಅವಕಾಶಕ್ಕೆ ಕಾಯುತ್ತಿದ್ದು, ಪಕ್ಷ ಏನೇ ಜವಾಬ್ದಾರಿ ವಹಿಸಿದರೂ ಇಲ್ಲ ಎನ್ನದೇ ಕೆಲಸ ಮಾಡುವ ಗುಣ ಎಲ್ಲರಿಗೂ ಅಚ್ಚುಮೆಚ್ಚು.

ದಾವಣಗೆರೆಯಿಂದ ದೆಹಲಿಗೆ ಸೈಯದ್ ಖಾಲಿದ್ ಅಹ್ಮದ್ ಅವರ ಪ್ರಯಾಣವು ಅಚ್ಚರಿ ಜೊತೆಗೆ ಕಷ್ಟಪಟ್ಟರೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೊಂದು ಉದಾಹರಣೆ. ಸಾಮಾಜಿಕ ಕಾರ್ಯಗಳ ಬಗ್ಗೆ ಅವರಿಗಿರುವ ಬದ್ಧತೆ, ಸಂಘಟನಾ ಕೌಶಲ್ಯ ಮತ್ತು ನಾಯಕತ್ವ ಕೌಶಲ್ಯಗಳು ಅವರಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆಯನ್ನು ಗಳಿಸಿಕೊಟ್ಟಿವೆ. 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment