ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆಯಲ್ಲಿ 40 ವರ್ಷಗಳ ಬಳಿಕ ಪಂಚಪೀಠಾಧ್ಯಕ್ಷರು, ಶಿವಾಚಾರ್ಯರ ಶೃಂಗ ಸಮ್ಮೇಳನ ಜುಲೈ 21,22ಕ್ಕೆ: ಉದ್ದೇಶ ಬಹಿರಂಗಪಡಿಸಿದ ರಂಭಾಪುರಿ ಶ್ರೀ!

On: July 1, 2025 6:20 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/ DATE-01-07-2025

ದಾವಣಗೆರೆ: ಜುಲೈ 21 ಮತ್ತು 22 ರಂದು ನಗರದ ಶ್ರೀ ರೇಣುಕಾ ಮಂದಿರದ ಭವ್ಯ ಸಭಾಂಗಣದಲ್ಲಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 21 ರಂದು ಪಂಚ ಪೀಠಾಚಾರ್ಯರ ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನ ಉದ್ಘಾಟನೆ ಆಗಲಿದೆ. ಒಬ್ಬರಿಗೆ ಅಥವಾ ಇಬ್ಬರು ಶಿವಾಚಾರ್ಯರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗುವುದು. ಪಂಚಪೀಠಾಧ್ಯಕ್ಷರು ಸಾಮರಸ್ಯ, ಭಾವೈಕ್ಯತೆಯ ಸಂದೇಶ ನೀಡಲಿದ್ದಾರೆ. 22 ರಂದು ಸಮಾಜದ ಉತ್ಕೃಷ್ಟತೆ ಧರ್ಮ ಸಂಸ್ಕೃತಿಯ ವಾರಸುದಾರರಾಗಿ ಬೆಳೆಯುವ ಯುವಜನಾಂಗಕ್ಕೆ ಹೊಸ ಚೈತನ್ಯ ತಂದುಕೊಡುವ, ಪ್ರೇರೇಪಿಸುವ ಸಮಾರಂಭ ಆಗಲಿದೆ. ಕೆಲವು ಧಾರ್ಮಿಕ, ಸಾಮಾಜಿಕ, ಆಂತರಿಕವಾದ ಅನೇಕ ವಿಚಾರಗಳ ಸಮಾಲೋಚಿಸಿ ಸಮಾಜಕ್ಕೆ ಸಮಗ್ರತೆ, ಭಾವೈಕ್ಯತೆ, ವಿಶ್ವ ಬಂಧುತ್ವ ಸಂದೇಶ ನೀಡುವ ಉದ್ದೇಶ ಸಮ್ಮೇಳನದ್ದು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಪ್ರಯೋಜನ ಮತ್ತು ಲಾಭದ ಬಗ್ಗೆ ತಿಳಿಯಿರಿ

ಎರಡು ದಿನಗಳ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶರು ಸಾನಿಧ್ಯ ವಹಿಸಲಿದ್ದಾರೆ. ಹಲವಾರು ಧಾರ್ಮಿಕ, ಸಾಮಾಜಿಕ ಚಿಂತನೆಗಳನ್ನೊಳಗೊಂಡ ಸವಿವಿಸ್ತಾರವಾದ ಸಮಾಲೋಚನಾ ಸಮಾರಂಭ ನಡೆಯಲಿದೆ. ಪಂಚಾಪೀಠಾಧೀಶರ ಸಾನಿಧ್ಯದಲ್ಲಿ ನಡೆಯುವ ಈ ಶೃಂಗ ಸಮ್ಮೇಳನದಲ್ಲಿ ಕರ್ನಾಟಕ, ಮಹಾರಾಷ್ಟ್ರ. ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಂದ ವೀರಶೈವ ಧರ್ಮ ಪರಂಪರೆ, ಗುರುಪರಂಪರೆಯ ಎಲ್ಲಾ ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಇದೇ ದಾವಣಗೆರೆ ನಗರದಲ್ಲಿ ಪೀಠಾಚಾರ್ಯರ ಮತ್ತು ಶಿವಾಚಾರ್ಯರ ಬೃಹತ್ ಸಮ್ಮೇಳನ ನಡೆದಿತ್ತು ಎಂದು ತಿಳಿಸಿದರು.

ಕಳೆದ ಹತ್ತರಿಂದ 15 ವರ್ಷಗಳಿಂದ ವೀರಶೈವ ಪಂಚಪೀಠಗಳಲ್ಲಿ ಕೆಲವು ಗೊಂದಲಗಳು, ಆಂತರಿಕ ಸಮಸ್ಯೆಗಳು ಇವೆ ಎಂಬ ತಪ್ಪು ಕಲ್ಪನೆ ಹೊಂದಿ ಕೆಲ ಪೀಠಗಳು ದೂರ ದೂರದಲ್ಲಿ ಇರುವಂಥದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲವುಗಳನ್ನೂ ಬದಿಗಿರಿಸಿ ವೀರಶೈವ ಧರ್ಮ ಸಂಸ್ಕೃತಿ ಜಾತಿ ಜಾತಿಗಳಾಗಿ ಹಂಚಿ ಹೋಗುತ್ತಿದ್ದು, ಎಲ್ಲಾ ರಂಗಗಳಲ್ಲಿ ಜನರು ತಿಳುವಳಿಕೆಯಲ್ಲದೇ ಕವಲು ದಾರಿಯತ್ತ ಹೆಜ್ಜೆ ಇಡುತ್ತಿದ್ದಾರೆ. ಭಿನ್ನ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ವೀರಶೈವ ಧರ್ಮ ಸಂಸ್ಕೃತಿಯನ್ನು ಮತ್ತೊಮ್ಮೆ ಪುನಶ್ಚೇತನ ಮಾಡುವ ಸತ್ಯ ಸಂಕಲ್ಪ ತೊಟ್ಟಿದ್ದೇವೆ. ಪಂಚಪೀಠಾಧ್ಯಕ್ಷರು ಈ ನಿಟ್ಟಿನಲ್ಲಿ ಗಟ್ಟಿಯಾದ ಹೆಜ್ಜೆ ಮುಂದಿಟ್ಟಿದ್ದೇವೆ. ಶ್ರೀಮದ್ ರಂಭಾಪುರಿ ವೀರ ಗಂಗಾಧರ ಜಗದ್ಗುರು ತಪಗೈದ ಸ್ಥಳದಲ್ಲಿ ಮೊದಲ ಸಮ್ಮೇಳನ ನಡೆದಿತ್ತು. ಹಲವು ವಿಚಾರಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೆವು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಬೆಂಗಳೂರಿನ ನಿವಾಸದಲ್ಲಿ ಪೀಠಾಚಾರ್ಯರು ಒಂದೆಡೆ ಕುಳಿತು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಸಮಾಜದ ಬಾಂಧವರಿಗೆ
ತೊಂದರೆ ತಾಪತ್ರಯಗಳ ಕುರಿತು ಚರ್ಚಿಸಿದ್ದೇವೆ. ಇದನ್ನು ಪರಾಮರ್ಶಿಸಿ ಇವೆಲ್ಲವುಗಳಿಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವ ಭಾವನೆ ಪೀಠಾಚಾರ್ಯರಿಗೆ ಇದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: ದಾವಣಗೆರೆ ಕಾಯಿಪೇಟೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ತಾಯಿ – ಮಗ ಸಾವು, ನಾಲ್ವರಿಗೆ ಗಾಯ!

ರಾಜ್ಯದ ಉದ್ದಗಲಕ್ಕೂ ಇರುವ ಧರ್ಮಾಭಿಮಾನಿಗಳ ಅಪೇಕ್ಷೆಯೂ ಹೌದು. ಈ ಕಾರಣದಿಂದ ದಾವಣಗೆರೆ ಮಹಾನಗರದಲ್ಲಿ ಪ್ರತಿ ವರ್ಷ ರೇಣುಕಾ ಮಂದಿರದಲ್ಲಿ ಐದು ದಿನಗಳ ಕಾಲ ಆಷಾಢ ಮಾಸದ ಪೂಜೆ, ಧರ್ಮ ಸಮಾರಂಭ ನಡೆದುಕೊಂಡು ಬಂದಿದೆ. ಐದು ದಿನಗಳಲ್ಲಿ ಮೂರು ದಿನ ಜಗದ್ಗುರುಗಳ ಪೂಜೆ,
ಧರ್ಮ ಸಮಾರಂಭಕ್ಕೆ ಮೀಸಲಿಟ್ಟು, ಜುಲೈ 21 ಮತ್ತು 22ರಂದು ಎರಡು ದಿನಗಳ ಕಾಲ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ನಡೆಸುವ ಉದ್ದೇಶ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment