SUDDIKSHANA KANNADA NEWS/ DAVANAGERE/ DATE:27-05-2023
ದಾವಣಗೆರೆ: Sulekere Story-ರಾಷ್ಟ್ರಮಟ್ಟದಲ್ಲಿ ಚನ್ನಗಿರಿ ಫೇಮಸ್. ಯಾಕೆಂದರೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಜೈಲು ಸೇರಿದ್ದ ಕಾರಣಕ್ಕೆ. ಲೋಕಾಯುಕ್ತ ದಾಳಿ ವೇಳೆ ಕೋಟ್ಯಂತರ ರೂಪಾಯಿ ಕಂತೆ ಕಂತೆ ಹಣದ ವಿಚಾರ ಜಿಲ್ಲೆ, ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸದ್ದು ಮಾಡಿತ್ತು. ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದಾಗ ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಪ್ರಶಾಂತ್ ಅವರು ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದರು. ಆ ಬಳಿಕ ಚನ್ನಗಿರಿ ಎಲ್ಲರಿಗೂ ಚೆನ್ನಾಗಿಯೇ ಗೊತ್ತು.
ಈ ಭ್ರಷ್ಟಾಚಾರ ಕಾಂಗ್ರೆಸ್ ಗೆ ಅಸ್ತ್ರವಾಗಿತ್ತು. ದೇಶಾದ್ಯಂತ ಎಲ್ಲಾ ರಾಜಕಾರಣಿಗಳು ಬಿಜೆಪಿ ಶಾಸಕನ ಪುತ್ರನ ಲಂಚಾವತಾರದ ಬಗ್ಗೆ ಮಾತನಾಡಿದ್ದರು. ಬಿಜೆಪಿಗೂ ಇರಿಸು ಮುರಿಸು ತಂದಿತ್ತು. ಈ ಕಾರಣಕ್ಕಾಗಿ ಮಾಡಾಳ್
ಮಲ್ಲಿಕಾರ್ಜುನ್ ಗೆ ಟಿಕೆಟ್ ಸಿಗಲಿಲ್ಲ. ಹಾಗಾಗಿ, ಪಕ್ಷೇತರರಾಗಿ ಬಿಜೆಪಿಗೆ ಬಂಡಾಯ ಎದ್ದು ಚುನಾವಣಾ ಕಣದಲ್ಲಿ ನಿಂತು ಸೆಡ್ಡು ಹೊಡೆದು ಸೋತರು.
Read Also: ಮೇಲ್ಸೇತುವೆಯಿಂದ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಜಿಗಿದಿದ್ಯಾಕೆ…? ಮುಂದೇನಾಯ್ತು…?
ಸೂಳೆಕೆರೆ ಏಷ್ಯಾಖಂಡದ ಎರಡನೇ ಅತಿದೊಡ್ಡ ಕೆರೆ (Sulekere Lake)
ಚನ್ನಗಿರಿ ತಾಲೂಕಿನಲ್ಲಿರುವ ಸೂಳೆಕೆರೆ (Sulekere Lake) ಏಷ್ಯಾಖಂಡದ ಎರಡನೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಈಗಲೂ ಹೊಂದಿದೆ. ಶಾಂತಿಸಾಗರ ಎಂದು ನಾಮಕರಣವಾಗಿದ್ದರೂ, ಸೂಳೆಕೆರೆ ಎಂಬ ಹೆಸರು ಇಂದಿಗೂ ಚಾಲ್ತಿಯಲ್ಲಿದೆ. ಸೂಳೆಕೆರೆ ಬಳಿ ಇರುವ ಬೋರ್ಡ್ ನಲ್ಲಿ ಇಂದಿಗೂ ಸೂಳೆಕೆರೆ ಎಂದೇ ಇದೆ. ಇದನ್ನು ತೆಗೆಯುವ ಗೋಜಿಗೆ ಯಾರೂ ಹೋಗಿಲ್ಲ.
ಇನ್ನು ಸೂಳೆಕೆರೆ ಎಂಬ ಹೆಸರು ಬದಲಿಸಿ ಶಾಂತಿಸಾಗರ ಎಂಬ ಹೆಸರು ಇಡಲಾಗಿದೆ. ಈ ಹೆಸರು ನಾಮಕರಣ ಮಾಡುವ ವೇಳೆ ಮಾಜಿ ಸಿಎಂ ಜೆ. ಹೆಚ್. ಪಟೇಲ್ ಅವರು ತುಂಬಾನೇ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಸೂಳೆಕೆರೆ ಎಂದೇ ಇರಲಿ ಎಂಬ ಒತ್ತಾಸೆ ಅವರದ್ದಾಗಿತ್ತು.
ಆಗಿನ ಸಿಎಂ ಜೆ. ಹೆಚ್. ಪಟೇಲ್ ಸೂಳೆಕೆರೆ (Sulekere Lake) ಹೆಸರು ಬದಲಿಸಬೇಕೆಂಬ ಪ್ರಸ್ತಾಪ ಒಪ್ಪದಿರಲು ಕಾರಣವೇನು..?
ಮಾಜಿ ಸಿಎಂ ಜೆ. ಹೆಚ್. ಪಟೇಲ್ ರ ಹೆಸರು ರಾಜಕಾರಣದಲ್ಲಿ ಚಿರಪರಿಚಿತ ಹೆಸರು. ಸಮಾಜವಾದಿ ಹೋರಾಟದಿಂದ ಬಂದ ಪಟೇಲರ ಆಡಳಿತ ಯಾರೂ ಮರೆಯುವುದಿಲ್ಲ. ಅವರು ಒಮ್ಮೆ ಹೇಳಿದರೆ ಮುಗಿಯಿತು. ಅಷ್ಟು ಖಡಕ್ ಆಗಿದ್ದ ರಾಜಕಾರಣಿ. ಆಡಳಿತವನ್ನೂ ಹಾಗೆ ನಡೆಸಿದರು. ಆನೆ ನಡೆದಿದ್ದೇ ಹಾದಿ ಎಂಬಂತೆ ಪಟೇಲರು ರಾಜಕಾರಣದ ಹಾದಿ ಸಾಗಿತ್ತು. ಸೂಳೆಕೆರೆ ಎಂದರೆ ಮುಜುಗರವಾಗುತ್ತದೆ. ಈ ಕಾರಣಕ್ಕಾಗಿ ಹೆಸರು ಬದಲಿಸಬೇಕೆಂಬ ಪ್ರಸ್ತಾಪ ಬಂದಿತ್ತು. ಈ ಕೆರೆಯನ್ನು ಶಾಂತಿಸಾಗರ ಎಂದು ಬದಲಿಸೋಣ ಎಂದಾಗ ಪಟೇಲರ ಒಪ್ಪಿರಲಿಲ್ಲ. ಇದಕ್ಕೆ ಕಾರಣ ಶಾಂತಮ್ಮ ಓರ್ವ ಹೆಣ್ಣು ಮಗಳು ಕಟ್ಟಿಸಿದ ಕೆರೆಯು ಇಂದಿಗೂ ಲಕ್ಷಾಂತರ ಮಂದಿಗೆ ಉಪಯೋಗವಾಗಿದೆ. ಆ ಹೆಸರು ಹಾಗೆಯೇ ಇರಬೇಕು ಎಂದು ಪಟೇಲ್ ರು ಕಡ್ಡಿ ತುಂಡಾದಂತೆ ಹೇಳಿದ್ರು. ಈ ಕಾರಣಕ್ಕೆ ಹೆಸರು ಬದಲಾಯಿಸಲು ಆಗಲಿಲ್ಲ. ಸರ್ಕಾರಿ ದಾಖಲೆ ಪ್ರಕಾರ ಶಾಂತಿಸಾಗರ ಎಂದಿದೆ. ಆದ್ರೆ, ಜನರು ಇಂದಿಗೂ ಸೂಳೆಕೆರೆ ಅಂತಾನೇ ಕರೆಯುತ್ತಾರೆ.
ಸೂಳೆಕೆರೆ (Sulekere History) ಅನ್ನೋ ಹೆಸರು ಯಾಕೆ ಬಂತು…?
ಸೂಳೆಕೆರೆ (Sulekere History-Shanti Sagara) ಕಟ್ಟಿರುವ ಕುರಿತಂತೆ ಅಚ್ಚರಿ ಸಂಗತಿಯೂ ಇದೆ. ಈ ಪ್ರದೇಶದಲ್ಲಿ ಈ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂದು ಇತಿಹಾಸ ಹೇಳುತ್ತದೆ. ಈ ಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದ ವಿಕ್ರಮರಾಯ ಮತ್ತು ಆತನ ಪತ್ನಿ ನೂತನಾದೇವಿಗೆ ಶಾಂತಲಾದೇವಿ ಒಬ್ಬಳೇ ಮಗಳು. ಈಕೆಯನ್ನು ಶಾಂತಮ್ಮನೆಂದೂ ಕರೆಯುತ್ತಿದ್ದರು. ಈಕೆ ಯೌವ್ವನಾವಸ್ಥೆಗೆ ಬಂದಾಗ ತಂದೆ ಅನುಮತಿ ಪಡೆಯದೆ ಪಕ್ಕದ ಊರಿಗೆ ಯಾವುದೋ ಕೆಲಸಕ್ಕೆ ಹೋಗಿ ಮುಗಿಸಿಕೊಂಡು ಮತ್ತೆ ಅರಮನೆ ಬರುವಾಗ ಆಕೆ ನಡವಳಿಕೆಯಲ್ಲಿ ಬದಲಾಗಿತ್ತಂತೆ. ಇದಕ್ಕೆ ತಂದೆ ವಿಕ್ರಮರಾಯ ಆಕ್ಷೇಪಿಸಿ ಶಾಂತಮ್ಮಳನ್ನ ನಿಂದಿಸಿ, ನಡತೆಗೆಟ್ಟ ನೀನು ಸೂಳೆ ಎಂದು ಬೈಯುತ್ತಾನಂತೆ.
ತಂದೆ ಬೈಗುಳದಿಂದ ಬೇಸತ್ತ ಶಾಂತಮ್ಮ ಆರೋಪದಿಂದ ಮುಕ್ತಳಾಗಲು ಕೆರೆ ನಿರ್ಮಾಣಕ್ಕೆ ಸಂಕಲ್ಪ ಮಾಡ್ತಾಳೆ. ಸ್ವರ್ಗವತಿ ಪಟ್ಟಣದ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದು, ಜಾಗ ಬಿಟ್ಟುಕೊಡುವಂತೆ ವೇಶ್ಯೆಯರಲ್ಲಿ ಮನವಿ ಮಾಡ್ತಾಳೆ. ಆಗ ಇಲ್ಲಿ ವಾಸಿಸುತ್ತಿದ್ದ ವೇಶ್ಯೆಯರು ಒಪ್ಪಿ ಒಂದು ಷರತ್ತು ಹಾಕ್ತಾರೆ. ಈ ಕೆರೆಗೆ ಸೂಳೆಕೆರೆ ಎಂಬ ಹೆಸರಿಟ್ಟರೆ ಜಾಗ ಬಿಟ್ಟುಕೊಡುವುದಾಗಿ ಹೇಳಿದಾಗ ಇದಕ್ಕೆ ಒಪ್ಪಿ ರಾಜಪುತ್ರಿ ಇಲ್ಲಿ ಕೆರೆ ನಿರ್ಮಾಣ ಮಾಡಿದರು. ಬಳಿಕ ಇದಕ್ಕೆ ಸೂಳೆಕೆರೆ ಎಂಬ ಹೆಸರು ನಾಮಕರಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಆದ್ರೆ, ಈ ಬಗ್ಗೆ ಏನೇ ಇದ್ದರೂ ಇಲ್ಲಿನ ಜನರು ಮಾತ್ರ ವೇಶ್ಯೆ ಒಬ್ಬ ಶುಭ್ರ ಮನಸ್ಸಿನ ಶ್ರೇಷ್ಠಳು. ತ್ಯಾಗ ಸಂಕೇತದ ಸಮಾನಳೆಂಬ ಪೂಜ್ಯ ಭಾವನೆ ಈ ಭಾಗದ ಜನರಲ್ಲಿ ಈಗಲೂ ಇದೆ.
ಏಷ್ಯಾ ಖಂಡದ 2ನೇ ದೊಡ್ಡ ಕೆರೆ ಸೂಳೆಕೆರೆ ( Sulekere, is the second largest built lake in Asia)
ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ (Sulekere, is the second largest built lake in Asi) ಎಂಬ ಪ್ರಖ್ಯಾತಿ ಗಳಿಸಿದೆ. ಆಂಧ್ರ ಪ್ರದೇಶದ ಕಂಭಕೆರೆ ಹೊರತುಪಡಿಸಿದರೆ ದಕ್ಷಿಣ ಭಾರತದ ಎರಡನೆಯ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಜೊತೆಗೆ ಕರ್ನಾಟಕದ ಪ್ರಾಚೀನ ತಂತ್ರಜ್ಞಾನ ಬಳಸಿ ರೂಪಿಸಿರುವ ಈ ಕೆರೆ ನಿರ್ಮಾಣದ ಹಿಂದಿದೆ ಒಂದು ರೋಚಕ ಕಥೆ.
ಅಂದ ಹಾಗೆ, ಈ ಕೆರೆ ಸುಮಾರು 15 ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನು ಇಲ್ಲಿಂದ ಪೂರೈಸಲಾಗುವುದು. ಲಕ್ಷಾಂತರ ಮಂದಿ ಈ ಕೆರೆಯನ್ನು ನಂಬಿಕೊಂಡೇ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಚನ್ನಗಿರಿ ತಾಲೂಕಿನ ರೈತರ ಪಾಲಿಗೂ ಈ ಕೆರೆಯೇ ಆಧಾರ. ಮಾತ್ರವಲ್ಲ, ಪ್ರವಾಸಿಗರ ಹಾಟ್ ಫೇವರಿಟ್ ತಾಣವೂ ಹೌದು.
ಸೂಳೆಕೆರೆ ವಿಸ್ತಾರ (Sulekere distance) ಮತ್ತು ವೈಶಿಷ್ಟ್ಯತೆ ಏನು…?
Sulekere distance: ಹಿರೇಹಳ್ಳಕ್ಕೆ ಎರಡು ಗುಡ್ಡಗಳ ಮಧ್ಯೆ ಬೃಹತ್ ಒಡ್ಡು ಹಾಕಿ ನೀರು ನಿಲ್ಲಿಸಿರುವ ಈ ಕೆರೆ ಸುತ್ತಳತೆ 65 ಕಿಲೋಮೀಟರ್. ಅಚ್ಚುಕಟ್ಟು ಪ್ರದೇಶ ಎರಡು ಸಾವಿರ ಹೆಕ್ಟೇರ್. ಈ ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿಯನ್ನು ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗಿದೆ. ಏರಿಯ ಅಗಲ ಒಂದೆಡೆ 60 ಅಡಿಯಾದ್ರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ. ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿ ಕೆರೆ ಇದೆ. ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಈ ಕೆರೆಗೆ ಬಂದು ಸೇರುತ್ತದೆ.
ಹಳೇ ಮೈಸೂರು ರಾಜ್ಯದ ಬ್ರಿಟೀಷ್ ಇಂಜಿನಿಯರ್ ಸ್ಯಾಂಕಿ ಈ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಹೇಳಿದ್ದರೂ, ಹಿಂದಿನ ಕಾಲದ ನೀರಾವರಿ ತಂತ್ರಜ್ಞರ ಚಾಣಾಕ್ಷತೆಯಿಂದ ಈ ಕೆರೆ ನಿರ್ಮಾಣ ಮಾಡಲಾಗಿತ್ತು. ಬಳಿಕ ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರಂತೆ ಸ್ಯಾಂಕಿ. ಕೆರೆಯ ಉತ್ತರದಲ್ಲಿ ಸಿದ್ಧನ ತೂಬು ಹಾಗೂ ಬಸವ ತೂಬು ಎಂಬ ಎರಡು ನಾಲೆಗಳಿವೆ. ಈ ಮೂಲಕ ನೀರು ಹರಿಸಲಾಗುತ್ತದೆ.
Primary inflows Water sources | ಹರಿದ್ರಾ, ಭದ್ರಾ ಅಣೆಕಟ್ಟೆಯ ಬಲದಂಡೆ ನಾಲೆ |
---|---|
Primary outflows | ಸಿದ್ದ ನಾಲೆ, ಬಸವ ನಾಲೆ |
ಗರಿಷ್ಠ ಉದ್ದ | 8.1 km (5.0 mi) |
ಗರಿಷ್ಠ ಅಗಲ | 4.6 km (2.9 mi) |
ಗರಿಷ್ಠ ಆಳ | 27 ft (8 m) |
ಸಮಸ್ಯೆ ಏನು..?
ಸೂಳೆಕೆರೆ ರೈತರ ಜಮೀನುಗಳಿಗೆ ನೀರು ಒದಗಿಸಲು ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು, ನೀರಾವರಿ ಸೌಲಭ್ಯಕ್ಕೆ ಅವಲಂಬನೆಯೂ ಹೆಚ್ಚಾಗುತ್ತಿದೆ. ಆದ್ರೆ, ಇಲ್ಲಿನ ಸಾವಿರಾರು ರೈತರಿಗೆ ನೀರು ಸಿಗುತ್ತಿಲ್ಲ. ಗೇಟ್ ಗಳು ಮುರಿದು ಹೋಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾಲೆಯ ಕೊನೆ ಭಾಗದ ರೈತರಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.