ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಭಿಷೇಕ್ ಆಚಾರ್ಯ ಸಾವಿಗೆ ರೋಚಕ ಟ್ವಿಸ್ಟ್: ಸ್ನೇಹಿತೆಯರು ಬಟ್ಟೆ ಬದಲಿಸುವ ದೃಶ್ಯ ಸೆರೆ ಹಿಡಿದಿದ್ದ ನರ್ಸ್ ನಿರೀಕ್ಷಾಳ “ನಿರೀಕ್ಷೆ” ಏನಿತ್ತು..?

On: October 20, 2025 11:40 AM
Follow Us:
ನರ್ಸ್
---Advertisement---

SUDDIKSHANA KANNADA NEWS/DAVANAGERE/DATE:20_10_2025

ಮಂಗಳೂರು: ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ನರ್ಸ್ ನಿರೀಕ್ಷಾಳ ಬಂಧನ ಆಗಿದೆ. ಈಕೆಯಿಂದ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭಿಸಿದೆ.

READ ALSO THIS STORY: “ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆತ್ತುಕೊಳ್ಳದಿದ್ದರೇ ಆರ್ ಎಸ್ ಎಸ್ ಗೆ ಉಳಿಗಾಲವಿಲ್ಲ”: ಬಿ. ಕೆ. ಹರಿಪ್ರಸಾದ್ ಕೆಂಡ!

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನು ನಿರೀಕ್ಷಾ ರೂಪಿಸಿದ್ದ ಸಂಚಿಗೆ ಬಲಿಯಾಗಿದ್ದ. ನಾಲ್ವರ ವಿರುದ್ಧ ಡೆತ್ ನೋಟ್ ನಲ್ಲಿ ಆರೋಪ ಮಾಡಿದ್ದ.

ಯುವತಿ ನಿರೀಕ್ಷಾ ಸೇರಿ ನಾಲ್ವರ ಹೆಸರು ಉಲ್ಲೇಖಿಸಿದ್ದ. ಲೇಡಿಗೋಷನ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ನಿರೀಕ್ಷಾಳ ಮೇಲೆ ಹೆಚ್ಚು ಆರೋಪ ಮಾಡಿದ್ದ. ಕದ್ರಿ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ.

ಕಾರ್ಕಳದ ನಿಟ್ಟೆ ಗ್ರಾಮದ ಯುವಕ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಆತನ ಬದುಕಲ್ಲಿ ಆಟವಾಡಿದ ಯುವತಿ ನಿರೀಕ್ಷಾಳನ್ನು ಕೊನೆಗೂ ಬಂಧಿಸಲಾಗಿದೆ.

ಅಭಿಷೇಕ್ ಆಚಾರ್ಯ ನನ್ನು ನಿರೀಕ್ಷಾ ಹನಿ ಟ್ರ್ಯಾಪ್ ಗೆ ಒಳಪಡಿಸಿ ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದಳು, ಇದರಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಡೆತ್ ನೋಟ್ ನಲ್ಲಿ ಯುವತಿ ನಿರೀಕ್ಷಾ ಸೇರಿ 4 ಹೆಸರುಗಳನ್ನು ಉಲ್ಲೇಖಿಸಿದ್ದು, ಇದೀಗ ಯುವತಿ ಬಂಧಿಸಿ ವಿಚಾರಣೆ ನಡೆಸಲಾಗಿದೆ.

ನಿರೀಕ್ಷಾ ತನ್ನ ಜೊತೆಗೆ ರೂಮಿನಲ್ಲಿದ್ದ ಬೇರೆ ಹುಡುಗಿಯರ ಫೋಟೊ, ವಿಡಿಯೋಗಳನ್ನೂ ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಅಭಿಷೇಕ್ ತನ್ನ ಡೆತ್ ನೋಟ್ ನಲ್ಲಿ ಬರೆದಿದ್ದ.

ಯುವತಿಯೊಬ್ಬಳು ಕದ್ರಿ ಠಾಣೆಯಲ್ಲಿ ದೂರು ನೀಡಿದ್ದು ತನ್ನ ಬಟ್ಟೆ ತೆಗೆಯುವ ವಿಡಿಯೋವನ್ನು ಚಿತ್ರೀಕರಿಸಿ ಜಾಲತಾಣದಲ್ಲಿ ಹಂಚಿದ್ದಾಳೆಂದು ನಿರೀಕ್ಷಾ ವಿರುದ್ಧ ದೂರು ನೀಡಿದ್ದಳು. ಪ್ರಕರಣ ಸಂಬಂಧಿಸಿ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ನಿರೀಕ್ಷಾಳನ್ನು ಅರೆಸ್ಟ್ ಮಾಡಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ
ವಿಧಿಸಿದ್ದಾರೆ.

ಇದೇ ವೇಳೆ, ಹನಿಟ್ರ್ಯಾಪ್ ಪ್ರಕರಣದಲ್ಲಿ ಅಭಿಷೇಕ್ ಸಾವಿಗೆ ಕಾರಣವಾದ ನಿರೀಕ್ಷಾ, ರಾಕೇಶ್, ತಸ್ಲೀಂ ಎಂಬವರನ್ನು ಒಳಗೊಂಡ ತಂಡವನ್ನು ಬಂಧಿಸಬೇಕೆಂದು ಜಾಲತಾಣದಲ್ಲಿ ಆಗ್ರಹ ಕೇಳಿಬರುತ್ತಿದೆ. ವಿಶ್ವಕರ್ಮ ಸಮಾಜದ ಮುಖಂಡರು ರಾಜ್ಯ ಗೃಹ ಸಚಿವರಿಗೂ ಮನವಿ ನೀಡಿದ್ದಾರೆ. ಅಲ್ಲದೆ, ಉಡುಪಿ ಎಸ್ಪಿ ಅವರನ್ನೂ ಭೇಟಿಯಾಗಿ ಮನವಿ ನೀಡಿದ್ದಾರೆ.

ಈ ಮಧ್ಯೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ ನೀಡಿದ್ದು, ಸೂಸೈಡ್ ನೋಟ್‌ನಲ್ಲಿರುವ ವಿಷಯಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಆತ್ಮಹತ್ಯೆ ಹಿಂದಿರುವ ನೈಜತೆಯನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಯಾವುದೇ ತೀರ್ಮಾನಕ್ಕೆ ಈಗಲೇ ಬರಲು ಸಾಧ್ಯವಿಲ್ಲ. ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕಾರ್ಕಳ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ನಾಲ್ವರ ಪೈಕಿ ಈಗಾಗಲೇ ಮೂವರನ್ನು ವಿಚಾರಣೆ ನಡೆಸಲಾಗಿದ್ದು, ಅವರ ಮೊಬೈಲ್ ಫೋನ್‌ ವಶಪಡಿಸಿ ತಾಂತ್ರಿಕ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಅಭಿಷೇಕ್​​ನ ಫೋನ್ ಕೂಡ ವಶಕ್ಕೆ ಪಡೆದಿದ್ದು, ಅದರಲ್ಲಿರುವ ಫೋಟೋಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಸಾಕ್ಷ್ಯವಾಗಿ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ವೈಜ್ಞಾನಿಕ ಸಾಕ್ಷ್ಯಗಳಿಗಾಗಿ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಸಿದ್ದರಾಮಯ್ಯ

ಆರ್ ಎಸ್ .ಎಸ್ ನಿಷೇಧಿಸಿಲ್ಲ, ಜಗದೀಶ್ ಶೆಟ್ಟರ್ ಅವಧಿಯಲ್ಲಿ ಹೊರಡಿಸಿದ್ದ ಆದೇಶವನ್ನೇ ನಾವೂ ಹೊರಡಿಸಿದ್ದೇವೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!

ರಾಹುಲ್ ಗಾಂಧಿ

“ಬೇಗ ಮದುವೆಯಾಗಿ, ಸಿಹಿತಿಂಡಿ ಆರ್ಡರ್ ಕೊಡ್ತಿರೆಂದು ಕಾಯ್ತಿದ್ದೇವೆ: ರಾಹುಲ್ ಗಾಂಧಿಗೆ ಶಾಕ್ ಕೊಟ್ಟ ಸಿಹಿತಿಂಡಿ ತಿನಿಸು ಮಾಲೀಕ!

ಪ್ರಿಯಾಂಕ್ ಖರ್ಗೆ

ಸರ್ಕಾರಿ ನೌಕರರು ಸಂಘಟನೆ, ಪಕ್ಷದ ಸದಸ್ಯರಂತಿರಬಾರದು, ಬಿಜೆಪಿ ಸಂಸದರೇ ಉಲ್ಲಂಘಿಸುವರ ಸಮರ್ಥನೆ ಎಷ್ಟು ಸರಿ: ಪ್ರಿಯಾಂಕ್ ಖರ್ಗೆ

ಜುಬಿಲಿ ಹಿಲ್ಸ್

ಜುಬಿಲಿ ಹಿಲ್ಸ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಸೈಯದ್ ಖಾಲಿದ್ ಅಹ್ಮದ್ ಮನೆ ಮನೆಗೆ ತೆರಳಿ ಮತಯಾಚನೆ

ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವ ಬದಲು ರೈತರೇ ಶಾಸಕರ ಕೊಂದು ಹಾಕಿ: ಮಾಜಿ ಸಚಿವನ ವಿಚಿತ್ರ ಸಲಹೆ!

ನರೇಂದ್ರ ಮೋದಿ

ಪಾಕಿಸ್ತಾನಕ್ಕೆ ಐಎನ್ಎಸ್ ವಿಕ್ರಾಂತ್ ನಿದ್ದೆಯಿಲ್ಲದ ರಾತ್ರಿಗಳನ್ನು ಕೊಟ್ಟಿತು: ದೀಪಾವಳಿಯಂದು ನೌಕಾಪಡೆಗೆ ನರೇಂದ್ರ ಮೋದಿ ಬಹುಪರಾಕ್!

Leave a Comment