SUDDIKSHANA KANNADA NEWS/ DAVANAGERE/ DATE:08-07-2023
ದಾವಣಗೆರೆ: ಸಬ್ ರಿಜಿಸ್ಟ್ರಾರ್ (Sub-Registrars) ಆಫೀಸ್ ನಲ್ಲಿ ಸರ್ಕಾರದ ಭೂಮಿಯನ್ನು ಹಣದಾಸೆಗೆ ಖಾಸಗಿಯವರಿಗೆ ಪರಭಾರೆ ಮಾಡಿರುವ ಪ್ರಕರಣಗಳು ವರದಿಯಾಗಿವೆ. ಇದು ಸಹ ತನಿಖೆಯ ಹಂತದಲ್ಲಿದೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಮಾಡಬಾರದೆಲ್ಲವನ್ನೂ ಮಾಡಿದ್ದಾರೆ. ಸಾಮಾನ್ಯ ಜನತೆ ಊರಿನಲ್ಲಿ ನೆಮ್ಮದಿಯಿಂದ ಜೀವನ ಮಾಡಬೇಕೆಂಬುದು ನಮ್ಮ ಆಶಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಘೋಷಿಸಿದರು.
ಮಾಧ್ಯಮವರ ಜೊತೆ ಮಾತನಾಡಿದ ಅವರು, ಸಬ್ ರಿಜಿಸ್ಟ್ರಾರ್ (Sub-Registrars) ಕಚೇರಿಯಲ್ಲಿ ಸರ್ಕಾರಿ ಜಾಗವನ್ನು ಹಣದ ಆಸೆಗಾಗಿ ಬೇರೆಯವರ ಹೆಸರಿಗೆ ಮಾಡಿಕೊಟ್ಟಿರುವಂಥ ಎರಡ್ಮೂರು ಪ್ರಕರಣಗಳು ನಡೆದಿರುವ ಕುರಿತಂತೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಯಾರದ್ದೋ ಆಸ್ತಿ ತೆಗೆದುಕೊಂಡು ಮಾರಾಟ ಮಾಡಿದೆ ಎಂದರೆ ಹೇಗೆ? ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ದಾವಣಗೆರೆಗೆ ಏನು ಸಿಕ್ಕಿಲ್ಲ ಎಂಬುದಾಗಿ ಯಾರು ಹೇಳಿದ್ದು ಯೋಜನೆ ಸಿಕ್ಕಿಲ್ಲ ಅಂತಾ. ಹಿಂದೆ ನಾವು ಅಧಿಕಾರದಲ್ಲಿದ್ದಾಗ ಮಾಡಿದ್ದ ಯೋಜನೆಗಳು ಸ್ಥಗಿತವಾಗಿದ್ದವು. ಅವುಗಳೆಲ್ಲವನ್ನೂ ಕಾರ್ಯರೂಪಕ್ಕೆ ತರುತ್ತೇವೆ. ಮುಖ್ಯವಾಗಿ ನೀರಾವರಿ ಯೋಜನೆ, ವಿವಿಧ ಯೋಜನೆಗಳು, ಗ್ರಾಮಾಂತರ ಪ್ರದೇಶಗಳಲ್ಲಿ ನೀರು ತುಂಬಿಸುವ ಯೋಜನೆ ಸೇರಿದಂತೆ ಎಲ್ಲವನ್ನೂ ಕಾರ್ಯರೂಪಕ್ಕೆ ತರುವ ಕೆಲಸವನ್ನು ಈ ಬಜೆಟ್ ನಲ್ಲಿ ಮಾಡಿದ್ದೇವೆ. ಈ ಹಿಂದೆ ಸಾಕಷ್ಟು ಯೋಜನೆ ಪ್ರಾರಂಭ ಆಗಿದ್ದವು. ಆಮೇಲೆ ಪೂರ್ಣ ಆಗಲಿಲ್ಲ. ಎಲ್ಲಾ ಯೋಜನೆಗಳನ್ನು ಈ ಬಜೆಟ್ ನಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದೇವೆ ಎಂದರು.

ಈ ಸುದ್ದಿಯನ್ನೂ ಓದಿ:
S. S. Mallikarjun: ಮಾವ- ಅಳಿಯ ವಿಚಾರ ನನಗೆ ಗೊತ್ತಿಲ್ಲ, ಜಿ. ಎಂ. ಸಿದ್ದೇಶ್ವರ ಸೋಲಿಸುವುದೇ ನಮ್ಮ ಗುರಿ: ಎಸ್. ಎಸ್. ಮಲ್ಲಿಕಾರ್ಜುನ್
ಬಡವರು, ಮಧ್ಯಮ ವರ್ಗದವರಿಗೆ ಅನುಕೂಲವಾಗುವಂಥ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿದ್ದಾರೆ. ಅತ್ಯುತ್ತಮ ಆಯವ್ಯಯ ಇದು. ಐದು ಗ್ಯಾರಂಟಿ ಈಡೇರಿಸಲು ಮುಖ್ಯಮಂತ್ರಿ ಒಳ್ಳೆಯ ಬಜೆಟ್ ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ದಾವಣಗೆರೆಗೆ ಭರಪೂರ ಯೋಜನೆಗಳನ್ನು ಕೊಡೋನಾ ತಡೆಯಪ್ಪ, ಮೊದಲು ಹಸಿದವರಿಗೆ ಅನ್ನ ಕೊಡೋಣ. ಹಸಿದವರ ಹೊಟ್ಟೆ ತುಂಬಿಸೋಣ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಾವಣಗೆರೆಯಲ್ಲಿ ಕೈಗೊಳ್ಳಲಾದ ಯೋಜನೆಗಳ ಕುರಿತಾಗಿ ತನಿಖೆಗೆ ಹಾಕಿದ್ದೇವೆ. ಇನ್ನು ಎರಡರಿಂದ ಮೂರು ತಿಂಗಳಲ್ಲಿ ಎಲ್ಲವೂ ಹೊರಬರಲಿದೆ. ಏನೇನಾಗಿವೆ ಎಂಬ ಹಣೆಬರಹ ಗೊತ್ತಾಗಲಿದೆ. ಅದಾದ ಮೇಲೆ ಮತ್ತೆ ಹೊಸ ಬಜೆಟ್ ಮಾಡೋಣ. ಹೊಸ ಕೆಲಸ ಪ್ರಾರಂಭ ಮಾಡೋಣ. ಗ್ಯಾರಂಟಿಗೆ ಯಾವುದೇ ಕಾರಣಕ್ಕೂ ಸೀಮಿತ ಆಗಲ್ಲ. ಬಿಜೆಪಿಯವರಿಗೆ ಬೇರೆ ಏನು ಹೇಳಲು ಇಲ್ಲ. ಹಾಗಾಗಿ, ವಿನಾಕಾರಣ ಅಪಪ್ರಚಾರ ನಡೆಸುತ್ತಾರೆ ಎಂದು ಹೇಳಿದರು.
ಕುಂದುವಾಡ ಕೆರೆಯನ್ನು ನಾವು ಮೂರುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೆವು. ಆದ್ರೆ, ಬಿಜೆಪಿಯವರು ಹೂಳೆತ್ತುವುದು ಸೇರಿದಂತೆ ಇತರೆ ಕಾರ್ಯಗಳಿಗೆ 13 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಸರಿಯಾದ ಕೆಲಸಗಳು ಆಗಿಲ್ಲ. ಈ ರೀತಿ ಸಾಕಷ್ಟು ನಡೆದಿವೆ. ಈ ಎಲ್ಲಾ ಕುರಿತಂತೆ ಸಮಗ್ರ ತನಿಖೆಯಾಗಲಿ. ಏನು ಒಳ್ಳೆಯದಾಗಿದೆ, ಕೆಟ್ಟದಾಗಿದೆ ಎಂಬ ಕುರಿತಂತೆ ಮಾಹಿತಿ ಪಡೆಯುತ್ತೇನೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಎಲ್ಲೆಲ್ಲಿ ಕಳಪೆ ಕಾಮಗಾರಿಯಾಗಿದೆ ಎಂಬುದೂ ಸೇರಿದಂತೆ ಎಲ್ಲೆಲ್ಲಿ ಏನಾಗಿದೆ ಎಂಬ ಬಗ್ಗೆ ಮಾಹಿತಿ ಸಿಗಬೇಕು. ಆ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಲಂಚ ಪಡೆದಿರುವ ಕುರಿತಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಪೆನ್ ಡ್ರೈವ್ ನಲ್ಲಿದೆ ಎಂದು ಹೇಳಿದ್ದಾರೆ. ನಾವು ಅದನ್ನು ತೋರಿಸಿ ಎಂದೆವು. ಯಾಕೆ ಇದುವರೆಗೆ ತೋರಿಸಿಲ್ಲ ಎಂದು ಪ್ರಶ್ನಿಸಿದರು.
ಹಳೇ ಕುಂದುವಾಡದಲ್ಲಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ಬಡಾವಣೆ ಮಾಡಲು ಭೂಸ್ವಾಧೀನ ಮಾಡುವುದನ್ನು ಕೈ ಬಿಡುವಂತೆ ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದರು. ಈ ಕುರಿತಂತೆ ಈಗ ಸರ್ಕಾರದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೂಡಾ ಸಭೆ ಆಗಲಿ. ಈ ವಿಚಾರ ಪ್ರಸ್ತಾಪವಿಟ್ಟು ಅದೇನಾಗಿದೆ ಎಂಬುದನ್ನು ನೋಡೋಣ ಎಂದರು.
Sub-Registrars Enquiry, Sub-Registrars Enquiry In Davanagere, Sub-Registrars. Sub-Registrars Enquiry – SS Mallikarjun