ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಸ್ತೆ ರಿಪೇರಿಗೆ ದಾವಣಗೆರೆಯ ಆಲೂರಿನಲ್ಲಿ ವಿದ್ಯಾರ್ಥಿನಿ ಏಕಾಂಗಿ ಧರಣಿ: ಇದು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿ!

On: August 22, 2025 2:58 PM
Follow Us:
Davanagere
---Advertisement---

SUDDIKSHANA KANNADA NEWS/ DAVANAGERE/DATE:22_08_2025

ದಾವಣಗೆರೆ: ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ಎದುರು ಆರನೇ ತರಗತಿ ವಿದ್ಯಾರ್ಥಿನಿ ಏಕಾಂಗಿ ಪ್ರತಿಭಟನೆ ನಡೆಸಿದ್ದು, ರಾಜ್ಯಾದ್ಯಂತ ಸುದ್ದಿಯಾಗಿದೆ.

ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಮಳೆಗಾಲ ಆದ್ದರಿಂದ ಶಾಲೆಗೆ ಬರಲು ಕಷ್ಟವಾಗುತಿತ್ತು. ನಿತ್ಯವೂ ವಿದ್ಯಾರ್ಥಿಗಳು ಕೆಸರುಗದ್ದೆಯಂತ ರಸ್ತೆಯಲ್ಲಿ ಬರುವುದಕ್ಕೆ ಕಷ್ಟವಾಗಿತ್ತು. ಇದನ್ನರಿತ ಆರನೇ ತರಗತಿ ವಿದ್ಯಾರ್ಥಿನಿ ಏಕಾಂಗಿಯಾಗಿ ಗ್ರಾಮ ಪಂಚಾಯಿತಿ ಮುಂದೆ ಧರಣಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

READ ALSO THIS STORY: ಪರ್ಸನಲ್ ಲೋನ್ ಮುಗಿದ ಬಳಿಕ ‘ಬಾಕಿಯಿಲ್ಲದ ಪ್ರಮಾಣ ಪತ್ರ’ ಪಡೆಯುವುದು ಹೇಗೆ: ತುಂಬಾನೇ ಅಗತ್ಯ ಏಕೆ?

ಆಲೂರು ಗ್ರಾಮದ ಪಿ. ಹೆಚ್. ಬಾಬು ಮತ್ತು ಎನ್. ಉಮಾ ದಂಪತಿ ಪುತ್ರಿ ಸುಶ್ಮಿತಾ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದ ವಿದ್ಯಾರ್ಥಿನಿ. ಕುರ್ಚಿಯೊಂದಕ್ಕೆ ಮೂಲಭೂತ ಸೌಲಭ್ಯಕ್ಕಾಗಿ ಹೋರಾಟ ಎಂಬ ಘೋಷವಾಕ್ಯದ ಭಿತ್ತಿ ಚಿತ್ರ ಅಂಟಿಸಿ ನೆಲದ ಮೇಲೆ ಕುಳಿತು ಹೋರಾಟ ನಡೆಸಿದ್ದಾಳೆ. ಶಾಲೆಗೆ ಸಂಪರ್ಕ ಕಲ್ಪಿಸಿದ್ದ ರಸ್ತೆ ಹಾಳಾಗಿದ್ದು, ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಬಿದ್ದಿರುವ ಘಟನೆಗಳು ನಡೆದಿದ್ದವು. ಈ ಬಗ್ಗೆ ಆಲೂರು ಗ್ರಾಮ ಪಂಚಾಯಿತಿ ಗಮನಕ್ಕೂ ತರಲಾಗಿತ್ತು. ಆದರೂ ಪ್ರಯೋಜನವಾಗಿರಲಿಲ್ಲ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ರಸ್ತೆಗಳು ಹಾಳಾಗಿವೆ. ಚರಂಡಿಗಳಲ್ಲಿ ಹೂಥು ತುಂಬಿಕೊಂಡು ಅನೈರ್ಮಲ್ಯ ತಾಂಡವಾಡುತ್ತಿದೆ ಎಂದು ವಿದ್ಯಾರ್ಥಿನಿ ಸುಶ್ಮಿತಾ ಆರೋಪಿಸಿದ್ದಳು. ಸುಶ್ಮಿತಾ ಧರಣಿ ನಡೆಸುತ್ತಿದ್ದ
ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರಣಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಕೇಳಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಚರಂಡಿಗಳಲ್ಲಿನ ಹೂಳು ತೆಗೆಯುವ
ಕೆಲಸ ಪ್ರಾರಂಭ ಆಯಿತು. ಆ ನಂತರ ರಸ್ತೆ ಸರಿಪಡಿಸುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿನಿ ಪ್ರತಿಭಟನೆ ವಾಪಸ್ ಪಡೆದಿದ್ದಾಳೆ. ನನ್ನ ಪುತ್ರಿ ಸ್ವಯಂಪ್ರೇರಿತಳಾಗಿ ಧರಣಿ ನಡೆಸಿದ್ದಾಳೆ. ನಾವು ಬೇಡವೆಂದರೂ ಕೇಳಿಲ್ಲ. ಆಕೆ ಹೋರಾಟ
ನಡೆಸಿದ್ದರಿಂದ ಚರಂಡಿ ಹೂಳು ತೆಗೆದಿದ್ದಾರೆ ಎಂದು ಪಿ. ಹೆಚ್. ಬಾಬು ತಿಳಿಸಿದ್ದಾರೆ.

ಗುಂಡಿ ಮುಚ್ಚಲು ವಿದ್ಯಾರ್ಥಿನಿ ಹೋರಾಟ:

ದಾವಣಗೆರೆಯ ಆಲೂರು ಗ್ರಾ.ಪಂ ಕಚೇರಿ ಎದುರು ವಿದ್ಯಾರ್ಥಿನಿಯೊಬ್ಬಳು ಶಾಲೆ ರಸ್ತೆ ಗುಂಡಿ ಮುಚ್ಚಲು ಏಕಾಂಗಿಯಾಗಿ ಪ್ರತಿಭಟನೆ ನಡೆಸಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಕಿಡಿಕಾರಿದೆ.

ರಾಜ್ಯದಲ್ಲಿ ಲೂಟಿಕೋರ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆಗಳು ಗುಂಡಿಮಯವಾಗಿವೆ, ಮೂಲಸೌಕರ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ನಿದ್ದೆಯಿಂದ ಎದ್ದೇಳಿ, ಜನಸಾಮಾನ್ಯರ ಸಂಕಷ್ಟ ಆಲಿಸಿ, ಪರಿಹಾರ ರೂಪಿಸಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ತೊಲಗಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment