ಪುಷ್ಪಾ 2 ವಿವಾದದ ಬಳಿಕ ನಟ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಹಿರಿಹ ರಾಜಕಾರಣಿಗಳು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಹೈದರಾಬಾದ್ನಲ್ಲಿರೋ ನಟ ಅಲ್ಲು ಅರ್ಜುನ್ ಜೂಬಿಲಿ ಹಿಲ್ಸ್ ನಿವಾಸದ ಮೇಲೆ ಉಸ್ಮಾನಿಯಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಈ ಸಂಬಂಧ ಮಾತಾಡಿದ ಹೈದರಾಬಾದ್ ಪೊಲೀಸ್ರು ಕೇಸ್ನಲ್ಲಿ ಉಸ್ಮಾನಿಯಾ ಯೂನಿವರ್ಸಿಟಿ ಅನ್ನೋ ಸಂಘಟನೆಗೆ ಸೇರಿದ 8 ಮಂದಿ ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸಲಾಗಿದೆ. ಇವರು ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದರು.
ಡಿಸೆಂಬರ್ 4ನೇ ತಾರೀಕು ಪುಷ್ಪಾ 2 ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಒರ್ವ ಮಹಿಳೆ ಮೃತಪಟ್ಟಿದ್ದರು. ಈಗ ಉಸ್ಮಾನಿಯಾ ವಿವಿ ವಿದ್ಯಾರ್ಥಿ ಹೋರಾಟಗಾರರು ಅಲ್ಲು ಅರ್ಜುನ್ ವಿರುದ್ಧ ಹೋರಾಟ ನಡೆಸಿದ್ದು. ಅಲ್ಲು ಅರ್ಜುನ್ ಮನೆ ಮೇಲೆ ಮೇಲೆ ಕಲ್ಲು ತೂರಾಟ ಮಾಡಿ ಧಾಂಧಲೆ ನಡೆಸಿದರು
ತೆಲಂಗಾಣ ವಿಧಾನಸಭೆಯಲ್ಲೂ ಪುಷ್ಪ 2 ಪ್ರಕರಣ ಪ್ರತಿಧ್ವನಿಸಿದೆ. ಸಿಎಂ ರೇವಂತ್ ರೆಡ್ಡಿ ಅವರೇ ಅಲ್ಲು ಅರ್ಜುನ್ ವಿರುದ್ಧ ಹೇಳಿಕೆ ನೀಡಿದ್ರು. ಸಿಎಂ ಹೇಳಿಕೆ ಬಳಿಕ ಅಲ್ಲು ಅರ್ಜುನ್ ಜುಬ್ಲಿ ಹಿಲ್ಸ್ನಲ್ಲಿರೋ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಕೌಂಟರ್ ನೀಡಿದ್ರು.