SUDDIKSHANA KANNADA NEWS/ DAVANAGERE/ DATE:09-10-2023
ಗಿರೀಶ್ ಕೆ ಎಂ
ಕಳೆದ ವಾರ ಎರಡು ದಿನ ಏರಿಕೆ ಕಂಡಿದ್ದ ಭಾರತೀಯ ಷೇರುಪೇಟೆ (Stock market) ಇಂದು ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಋಣಾತ್ಮಕ ವಹಿವಾಟು, ಇಸ್ರೇಲ್ ಮತ್ತು ಹಮಾಸ್ ನಡುವೆ ಮಾಡುತ್ತಿರುವ ಯುದ್ಧವು ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದೆ.
Read Also This Story:

New Delhi: ಜನವಿರೋಧಿ ಬಿಜೆಪಿ ಸರ್ಕಾರಗಳ ಅಧಿಕಾರದಿಂದ ಕಿತ್ತೊಗೆಯಲು ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿ ಸಿಡಬ್ಲ್ಯೂಸಿಯಲ್ಲಿ ಯಾವೆಲ್ಲಾ ನಿರ್ಧಾರ ತೆಗೆದುಕೊಳ್ಳಲಾಯಿತು…?
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -141.16 (-0.72%) ಅಂಕ ಇಳಿಕೆ ಕಂಡು 19,512.35 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -483.24 (-0.73%) ಅಂಕ ಇಳಿಕೆ ಕಂಡು 65,512.39 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ DRREDDY, HCLTECH,TATACONSUM, ONGC, HINDUNILVR ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ ADANIPORTS, HDFCLIFE, HEROMOTOCO, M&M, TATASTEEL ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.28 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-997.76 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.2,661.27 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.