SUDDIKSHANA KANNADA NEWS/ DAVANAGERE/ DATE:28-09-2023
ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು, ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ ಮತ್ತು ಅಮೆರಿಕದ ಡಾಲರ್ ಎದುರು ದೇಶೀಯ ರೂಪಾಯಿ ಮೌಲ್ಯ ದುರ್ಬಲ ಗೊಂಡಿರುವುದರಿಂದ ಭಾರತೀಯ ಷೇರು ಪೇಟೆ (Stock market) ಇಂದು ತೀವ್ರ ತರಹದ ಕುಸಿತಕ್ಕೆ ಒಳಗಾಯಿತು.
Read Also This Story:
ಭಾರತದಲ್ಲಿ ಯಾವಾಗ ರಿಯಲ್ ಎಸ್ಟೇಟ್ (Real estate)ನಲ್ಲಿ ಹೂಡಿಕೆ ಮಾಡಬಹುದು…? ಈ ಸಮಯದಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ…!
ವಲಯವಾರು ಸೂಚ್ಯಂಕಗಳ ಪೈಕಿ ಇಂದು ಬಹುತೇಕ ಎಲ್ಲಾ ವಲಯದ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ. IT ಸ್ಟಾಕ್‌ಗಳು 2.2 ಶೇಕಡಾ ಕುಸಿತದೊಂದಿಗೆ ನಷ್ಟವನ್ನು ಅನುಭವಿಸಿವೆ. ನಂತರ FMCG ಶೇಕಡಾ 1.9 ರಷ್ಟು ಕುಸಿತ ಮತ್ತು ಆಟೋ ವಲಯದ ಷೇರುಗಳು ಶೇ.1.2 ರಷ್ಟು ದೂರಸಂಪರ್ಕ ಮತ್ತು ಬಂಡವಾಳ ಸರಕುಗಳ ವಿಭಾಗದ ಷೇರುಗಳು ಏರಿಕೆ ಕಂಡಿದೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ -192.91 (-0.98%) ಅಂಕ ಇಳಿಕೆ ಕಂಡು 19,523.55 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -610.37 (-0.92%) ಅಂಕ ಇಳಿಕೆ ಕಂಡು 65,508.32 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ LT,BHARTIARTL,ONGC,COALINDIA,POWERGRID ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ TECHM,ASIANPAINT, LTIM, M&M, WIPRO ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.16 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -3,364.22 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.+2,711.48 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.
Comments 1