SUDDIKSHANA KANNADA NEWS/ DAVANAGERE/ DATE:10-11-2023
ಭಾರತೀಯ ಷೇರುಪೇಟೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಜಾಗತಿಕ ಮಾರುಕಟ್ಟೆಯ ಕುಸಿತದ ನಡುವೆಯೂ ಭಾರತೀಯ ಷೇರುಪೇಟೆ ಚೇತರಿಕೆ ಕಂಡಿದೆ. ಆರಂಭದಿಂದಲೂ ಕುಸಿತ ಕಂಡ ಸೂಚ್ಯಂಕಗಳು ದಿನದ ಮಧ್ಯೆ ತೀವ್ರ ತರಹದ ಏರಿಳಿತ ಕಂಡಿತು. ಅಂತಿಮವಾಗಿ ಮುಕ್ತಾಯದ ವೇಳೆಗೆ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.
ಯುಎಸ್ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೊಮ್ ಪೋವೆಲ್ ಅವರು ಬಡ್ಡಿದರ ಹೆಚ್ಚಳ ವಿಚಾರದಲ್ಲಿ ನೆನ್ನೆ ನೀಡಿದ ಹೇಳಕೆಯು ಎಸ್ಅಂಡ್ಪಿ ಹಾಗೂ ನಾಸ್ಡಾಕ್ ಮಾರುಕಟ್ಟೆಯಲ್ಲಿ ಷೇರುಗಳು ಭಾರಿ ಕುಸಿತ ಕಂಡವು. ಇದು ಏಷ್ಯಾ ಸೇರಿದಂತೆ ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತ್ತು. ಆದ ಕಾರಣದಿಂದ ಇಂದು ಭಾರತೀಯ ಮಾರುಕಟ್ಟೆ ಆರಂಭದ ವೇಳೆಗೆ ಕುಸಿತಕಂಡು ತದನಂತರ ಚೇತರಿಕೆ ಕಂಡಿದೆ
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 30.05 (0.15%) ಅಂಕ ಏರಿಕೆ ಕಂಡು 19,425.35 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 72.48 (0.11%) ಅಂಕ ಏರಿಕೆ ಕಂಡು 64,904.68 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ NTPC, ONGC, TATACONSUM, TECHM, ULTRACEMCO ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ HEROMOTOCO, M&M, HCLTECH, TITAN, HINDALCO ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.34 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-261.81 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.822.64 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.