SUDDIKSHANA KANNADA NEWS/ DAVANAGERE/ DATE:13-10-2023
ಗಿರೀಶ್ ಕೆ. ಎಂ.
ಭಾರತೀಯ ಷೇರು ಮಾರುಕಟ್ಟೆ (Stock market)ಯಲ್ಲಿ ಏರಿಳಿತ ಮುಂದುವರೆದಿದ್ದು, ದಿನದ ಅಂತ್ಯಕ್ಕೆ ಅಲ್ಪ ಕುಸಿತ ಕಂಡಿದೆ. ಆರಂಭದಿಂದಲೂ ಸೂಚ್ಯಂಕಗಳು ಏರಿಕೆಯಲ್ಲಿದ್ದವು. ವಹಿವಾಟಿನ ನಡುವೆ ತೀವ್ರ ತರಹದ ಮಾರಾಟಕ್ಕೆ ಒಳಗಾಯಿತು. ತದನಂತರ ದಿನದ ಅಂತ್ಯದಲ್ಲಿ ಚೇತರಿಕೆಯ ಹಾದಿ ಹಿಡಿದು ಅಲ್ಪ ಇಳಿಕೆ ದಾಖಲಿಸಿದೆ.
Read Also This Story:
ಸುರಂಗಗಳಲ್ಲಿ ಅಡಗಿ ಕೂತಿರುವ ಹಮಾಸ್ ಉಗ್ರರು: ಉತ್ತರ ಗಾಜಾ ಪ್ರದೇಶದ 1.1 ಮಿಲಿಯನ್ ಜನರ ಸ್ಥಳಾಂತರಕ್ಕೆ ಇಸ್ರೇಲ್ (Israel)ಮಿಲಿಟರಿ ಸೂಚನೆ..?
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -42.96 (-0.22%) ಅಂಕ ಇಳಿಕೆ ಕಂಡು19,751.05 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -125.65 (-0.18%) ಅಂಕ ಇಳಿಕೆ ಕಂಡು 66,282.74 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ TATAMOTORS, HCLTECH, INDUSINDBK, TATACONSUM, NESTLEIND ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ AXISBANK, ADANIENT,INFY SBIN,WIPRO ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.25 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.317.01 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.-102.88 ಕೋಟಿ ನಿವ್ವಳ ಮಾರಾಟ ಮಾಡಿದ್ದಾರೆ.