– ಗಿರೀಶ್ ಕೆ ಎಂ
ಇಂದು ಷೇರು ಮಾರುಕಟ್ಟೆ (Stock market)ಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ಮಾರುಕಟ್ಟೆಯಲ್ಲಿ ಆರಂಭದಿಂದಲೂ ಖರೀದಿದಾರರ ಭರಾಟೆ ಜೋರಾಗಿತ್ತು.ಇಂದು ನಿಫ್ಟಿ ತನ್ನ ವಹಿವಾಟಿನ ಅವಧಿಯಲ್ಲಿ 20000 ರ ಗಡಿದಾಟಿ ಸಾರ್ವಕಾಲಿಕ ಎತ್ತರ 20,008.15 ಕ್ಕೆ ತಲುಪಿತ್ತು. ಇದರಿಂದಾಗಿ ಸತತ ಏಳು ದಿನಗಳಿಂದಲೂ ಷೇರು ಮಾರುಕಟ್ಟೆ ಧನಾತ್ಮಕವಾಗಿ ಮುಕ್ತಾಯಗೊಂಡಂತಾಗಿದೆ.
ನಿಫ್ಟಿಯಲ್ಲಿ ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್, ಅಪೊಲೊ ಹಾಸ್ಪಿಟಲ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಷೇರುಗಳಲ್ಲಿ ಹೆಚ್ಚಾಗಿ ಖರೀದಿ ಕಂಡುಬಂದಿತು. ಉಳಿದಂತೆ ಜಿಯೋ ಫೈನಾನ್ಶಿಯಲ್, ಕೋಲ್ ಇಂಡಿಯಾ, ಒಎನ್‌ಜಿಸಿ, ಬಜಾಜ್ ಫೈನಾನ್ಸ್ ಮತ್ತು ಎಲ್‌ಅಂಡ್‌ಟಿ ಷೇರುಗಳಲ್ಲಿ ಮಾರಾಟದ ಒತ್ತಡಕ್ಕೆ ಒಳಗಾದವು.
ಈ ಸುದ್ದಿಯನ್ನೂ ಓದಿ:
ಅಬ್ಬರಿಸಿ ಬೊಬ್ಬಿರಿದ ವಿರಾಟ್ ಕೊಹ್ಲಿ(Virat Kohli),ರಾಹುಲ್: ಸಿಕ್ಸರ್, ಬೌಂಡರಿಗೆ ಪಾಕ್ ಬೌಲಿಂಗ್ ಪಡೆ ಉಡೀಸ್.. 13 ಸಾವಿರ ರನ್ ಗಳ ಸರದಾರ ವಿರಾಟ್ ..!
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ176.40 (0.89%) ಅಂಕ ಏರಿಕೆ ಕಂಡು 19,996.35 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 528.17 (0.79%) ಅಂಕ ಏರಿಕೆ ಕಂಡು 67,127.08 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
STOCK MARKET (ಷೇರು ಮಾರುಕಟ್ಟೆ) ನಲ್ಲಿ ಏರಿಕೆ ಕಂಡ ಷೇರುಗಳು:
ಇಂದು ADANIPORTS, ADANIENT, AXISBANK, APOLLOHOSP, POWERGRID ಷೇರುಗಳು ಜಿಗಿತ ಕಂಡವು.
STOCK MARKET ನಲ್ಲಿ (ಷೇರು ಮಾರುಕಟ್ಟೆ) ಇಳಿಕೆ ಕಂಡ ಷೇರುಗಳು:
COALINDIA, BAJFINANCE, ONGC, LT, ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.03 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ +1,473.09 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ. +366.24 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.