SUDDIKSHANA KANNADA NEWS/ DAVANAGERE/ DATE:16-02-2024
ಭಾರತೀಯ ಷೇರುಪೇಟೆಯಲ್ಲಿ ಹೂಡಿಕೆದಾರರು ಖರಿದಿಯತ್ತ ಮುಖಮಾಡಿದ್ದು, ಇಂದು ಸಹಾ ಸೂಚ್ಯಂಕಗಳು ಏರಿಕೆ ಕಂಡಿವೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 129.96 (0.59%)
ಅಂಕ ಏರಿಕೆ ಕಂಡು 22,040.70 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 376.26 (0.52%) ಅಂಕ ಏರಿಕೆ ಕಂಡು 72,426.64 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ WIPRO, SBILIFE, M&M, ADANIPORTS, BAJAJ-AUTO
ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ POWERGRID, BRITANNIA, SBIN, RELIANCE , NTPC ನಕಾರಾತ್ಮಕ ವಹಿವಾಟು ನಡೆಸಿದವು.
FII ಮತ್ತು DII ನಗದು ವಹಿವಾಟು ವಿವರ
ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.253.28 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.1,571.00 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.
ಕರೆನ್ಸಿ ವಹಿವಾಟು
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.02 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.