SUDDIKSHANA KANNADA NEWS/ DAVANAGERE/ DATE:21-09-2023
– ಗಿರೀಶ್ ಕೆ. ಎಂ.
ಭಾರತೀಯ ಷೇರು ಮಾರುಕಟ್ಟೆ (Stock market)ಯಲ್ಲಿ ಕರಡಿಯ ಕುಣಿತ ಇಂದೂ ಸಹಾ ಮುಂದುವರೆದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟದ ಒತ್ತಡ ಹಾಗೂ ಲಾಭಾಂಶ ಹಿಂತೆಗೆತದ ಕಾರಣದಿಂದಾಗಿ ಮಾರಾಟದ ಒತ್ತಡಕ್ಕೆ ಒಳಗಾಗಿ ಸೂಚ್ಯಂಕಗಳು ನಕಾರಾತ್ಮಕ ವಹಿವಾಟು ನಡೆಸಿದವು. ಇದರಿಂದಾಗಿ ಸತತ ಮೂರನೇ ದಿನ ಮಾರುಕಟ್ಟೆ ಇಳಿಕೆ ದಾಖಲಿಸಿದೆ.
Read Also This Story:
ಹಳ್ಳಿಗಳಿಗೂ ಲಗ್ಗೆ ಇಡಲಿದೆ ಎಲೆಕ್ಟ್ರಿಕಲ್ ಪ್ಯಾಸೆಂಜರ್ ವಾಹನ: ಬೇಡಿಕೆ ಅಂದುಕೊಂಡಂತೆ ಟಾಟಾ ಮೋಟಾರ್ಸ್ (Tata Motors)ಗೆ ಬರುತ್ತದೆಯಾ…?
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -159.05 (-0.8%) ಅಂಕ ಇಳಿಕೆ ಕಂಡು19,742.35 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -570.60 (-0.85%) ಅಂಕ ಇಳಿಕೆ ಕಂಡು 66,230.24 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ADANIPORTS,TECHM, DRREDDY, ASIANPAINT, BHARTIARTL ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
M&M, ICICIBANK, CIPLA,SBIN,INDUSINDBK ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.06 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -3,007.36ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.+1,158.14 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.