SUDDIKSHANA KANNADA NEWS/ DAVANAGERE/ DATE:13-09-2023
– ಗಿರೀಶ್ ಕೆ ಎಂ
ಸತತ ಏರುಗತಿಯಲ್ಲಿದ್ದ ಷೇರು ಮಾರುಕಟ್ಟೆ (Stock market) ಯಲ್ಲಿ ನೆನ್ನೆ ಲಾಭಂಶ ಹಿಂತೆಗೆತ ಕಂಡುಬಂದಿತ್ತು. ಇಂದು ಸಹಾ ಆರಂಭದಿಂದಲೂ ಮಾರಾಟದ ಒತ್ತಡಕ್ಕೆ ಒಳಗಾಗಿ ಇಳಿಮುಖವಾಗಿ ಮಾರುಕಟ್ಟೆ ಪ್ರಾರಂಭವಾಗಿ ತಡ ನಂತರ ಚೇತರಿಸಿ ಕೊಂಡಿತು.
ಈ ಸುದ್ದಿಯನ್ನೂ ಓದಿ:
Life Insurance Corporation ಆದಾಯಲ್ಲಿ ಎಷ್ಟು ಇಳಿಕೆ ಆಗಿದೆ ಗೊತ್ತಾ….? ಖಾಸಗಿ ವಲಯದ ಉದ್ಯಮದ ಪ್ರೀಮಿಯಂ ಆದಾಯದಲ್ಲಿ ಹೆಚ್ಚಳ
ನಿಫ್ಟಿಯಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಕೋಲ್ ಇಂಡಿಯಾ, ಭಾರ್ತಿ ಏರ್ಟೆಲ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಮತ್ತು ಟೈಟಾನ್ ಕಂಪನಿಗಳ ಷೇರುಗಳಲ್ಲಿ ಹೆಚ್ಚಾಗಿ ಖರೀದಿ ಕಂಡುಬಂದಿತು. ಎಚ್ಡಿಎಫ್ಸಿ ಲೈಫ್, ಜಿಯೋ ಫೈನಾನ್ಶಿಯಲ್, ಎಲ್ & ಟಿ, ಎಂ & ಎಂ ಮತ್ತು ಅದಾನಿ ಪೋರ್ಟ್ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು .
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ76.80 (0.38%) ಅಂಕ ಏರಿಕೆ ಕಂಡು 20,070 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 245.86 (0.36%) ಅಂಕ ಏರಿಕೆ ಕಂಡು 67,466.99 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು COALINDIA, GRASIM, TATACONSUM, BHARTIARTL, TITAN ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
HDFCLIFE, M&M, ADANIPORTS, LT, CIPLA ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 82.98 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ -1,631.63 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ. +849.86 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.