SUDDIKSHANA KANNADA NEWS/ DAVANAGERE/ DATE:12-01-2024
ಭಾರತೀಯ ಷೇರುಪೇಟೆಯಲ್ಲಿ ಗೂಳಿಯ ಓಟ ಮುಂದುವರೆದಿದ್ದು, ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೆ ಜಿಗಿದಿವೆ. ವಹಿವಾಟಿನ ಮಧ್ಯೆ ನಿಫ್ಟಿ ಸಾರ್ವಕಾಲಿಕ ಎತ್ತರ 21,928.25 ದಾಖಲಿಸಿದರೆ, ಸೆನ್ಸೆಕ್ಸ್ 72,720.96 ತಲುಪಿತ್ತು.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 247.35 (1.14%) ಅಂಕ ಏರಿಕೆ ಕಂಡು 21,894.55 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 847.27 (1.18%) ಅಂಕ ಏರಿಕೆ ಕಂಡು 72,568.45 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ INFY, ONGC, TECHM, HCLTECH, LTIM ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು
ನಿಫ್ಟಿಯಲ್ಲಿ CIPLA, APOLLOHOSP, BAJAJFINSV, ULTRACEMCO, POWERGRID ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 82.92 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ
ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-340.05 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ. 2,911.19 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.