SUDDIKSHANA KANNADA NEWS/ DAVANAGERE/ DATE:11-06-2023
ದಾವಣಗೆರೆ(DAVANAGERE): ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಾವಣಗೆರೆಯಲ್ಲಿ ಬಿಜೆಪಿ ನಡೆಸಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಕುಂದುವಾಡ ಕೆರೆ, ಹಳೆ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಹಾಗಾಗಿ, ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ಕುರಿತಂತೆ ಸಮಗ್ರ ತನಿಖೆ ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ (S. S. Mallikarjun) ತಿಳಿಸಿದರು.
ಹಳೆ ಬಸ್ ಸ್ಟ್ಯಾಂಡ್ ಹಾಳ್ ಮಾಡಿದ್ದಾರೆ:
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ನಗರದ ಹೈಸ್ಕೂಲ್ ಮೈದಾನದ ಪಕ್ಕದಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳೆ ಬಸ್ ಸ್ಟಾಂಡ್ ಹಾಳ್ ಮಾಡಿಬಿಟ್ಟಿದ್ದಾರೆ. ಏನೋ ಮಾಡಲೋ ಹೋಗಿ ಬೇರೆ ಏನೋ ಮಾಡಿದ್ದಾರೆ. ಇದರಲ್ಲಿಯೂ ಶೇಕಡಾ 40ರಷ್ಟು ಪಡೆದಿದ್ದಾರೋ ಏನೋ. ಈ ಬಗ್ಗೆ
ತನಿಖೆ ನಡೆಸುತ್ತೇನೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ (S. S. Mallikarjun) ಹೇಳಿದರು.
ತೊಳೆಯೋಕೆ ಐದು ವರ್ಷ ಬೇಕು:
ಡಿಸಿಎಂ ಟೌನ್ ಶಿಪ್ ನಲ್ಲಿ ರೈಲ್ವೆ ಅಂಡರ್ ಪಾಸ್ ಕುರಿತಂತೆ ನಾನು ಗಲಾಟೆ ಮಾಡಿದ್ದೆ. ಅದನ್ನೂ ಹಾಳು ಮಾಡಿಬಿಟ್ಟಿದ್ದಾರೆ. ಬಿಜೆಪಿಯು ಊರೆಲ್ಲಾ ಹದಗೆಡಿಸಿದೆ. ಅವ್ರು ಮಾಡಿರೋದನ್ನು ತೊಳೆಯೋಕೆ ಐದು ವರ್ಷ ಬೇಕು.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಪ್ರತಿ ತಿಂಗಳು 5 ನೇ ತಾರೀಖಿನಂದು ಬರುತ್ತಿದ್ದರು. ಏಳನೇ ತಾರೀಖು ಹೋಗುತ್ತಿದ್ದರು. ಆದ್ರೆ, ಪರಿಸ್ಥಿತಿ ಈಗ ಆ ರೀತಿ ಇಲ್ಲ. ನಾನೇ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ನಿಮ್ಮ ಜೊತೆ ಇದ್ದೇನೆ,
ಇರುತ್ತೇನೆ. ಇನ್ನು ಹೆಚ್ಚು ಕೆಲಸ ಮಾಡುತ್ತೇವೆ. ಜನರ ಸಹಕಾರ, ಪ್ರೀತಿ ಮತ್ತು ವಿಶ್ವಾಸ ಬೇಕು ಎಂದರು.
ದಾವಣಗೆರೆ(DAVANAGERE)ಯಲ್ಲಿ 11 ಇಂದಿರಾ ಕ್ಯಾಂಟೀನ್ ಆರಂಭ:
ದಾವಣಗೆರೆ ಜಿಲ್ಲೆಯಲ್ಲಿ 11 ಇಂದಿರಾ ಕ್ಯಾಂಟೀನ್ ಗಳು ಇದ್ದು ಪ್ರಾರಂಭ ಮಾಡುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಗುಣಮಟ್ಟದ ಆಹಾರ ಪೂರೈಕೆ ಮಾಡುವ ಕುರಿತಂತೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗುವುದು. ಇಂದಿರಾ ಕ್ಯಾಂಟೀನ್
ಗಳನ್ನು ಬಿಜೆಪಿಯವರು ಬಂದ್ ಮಾಡಿಸಿದ್ದರು. ಈಗ ನಾವು ಶುರು ಮಾಡಿಸಿದ್ದೇವೆ. ಜನರಿಗೆ ಒಳ್ಳೆಯ ಆಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Shamanuru Shivashankarappa:ಶಕ್ತಿ ಯೋಜನೆಗೆ ಷರತ್ತು ವಿಧಿಸಿರುವುದಕ್ಕೆ ಶಾಮನೂರು ಶಿವಶಂಕರಪ್ಪ ಏನಂದ್ರು…? ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದಿದ್ಯಾಕೆ ಕೈ ಹಿರಿಯ ಶಾಸಕ…?
ಕ್ರೆಡಿಟ್ ಗಾಗಿ ಯೋಜನೆ ಹಳ್ಳಹಿಡಿಸಿದ್ರು:
ನಾನು ಸಚಿವನಾಗಿದ್ದಾಗ ದಾವಣಗೆರೆಗೆ ಅನೇಕ ಯೋಜನೆಗಳನ್ನು ತಂದಿದ್ದೆ. ಇವುಗಳಲ್ಲಿ ಕಾಂಗ್ರೆಸ್ ನವರಿಗೆ ಹೆಸರು ಹೋಗುತ್ತದೆ ಎಂಬ ಕಾರಣಕ್ಕೆ ಅನುಷ್ಠಾನಗೊಳಿಸಲಿಲ್ಲ. ಜನರಿಗೆ ಒಳ್ಳೆಯದಾಗುವುದಿದ್ದರೆ ಯೋಜನೆ ಜಾರಿಗೊಳಿಸಬೇಕು.
ಅದನ್ನು ಬಿಟ್ಟು ನಿಲ್ಲಿಸುವ ಕೆಲಸ ಆಗಿದೆ. ಬಜೆಟ್ ನಲ್ಲಿ ಘೋಷಿಸಿದ್ದ ಯೋಜನೆಗಳನ್ನು ನಿಲ್ಲಿಸಿದರು. ಅವರು ಮಾಡಿದ್ರು, ಇವ್ರು ಮಾಡಿದರು ಎಂಬುದು ಮುಖ್ಯವಲ್ಲ, ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನನ್ನ ಭಾವನೆ. ಚಿಗಟೇರಿ ಜಿಲ್ಲಾ
ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಲು 30 ಕೋಟಿ ರೂಪಾಯಿ ನೀಡುವುದಾಗಿ ಸರ್ಕಾರ ಹೇಳಿತ್ತು. ಆದ್ರೆ, ಈ ಕೆಲಸ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಇದು ಏನಾಗಿದೆ ಎಂಬ ಕುರಿತಂತೆ ಎಲ್ಲಾ ಮಾಹಿತಿ ಪಡೆಯಲು ಸೂಚನೆ
ನೀಡಿದ್ದೇನೆ. ಒಳ್ಳೆಯ ರೀತಿಯಲ್ಲಿ ಪ್ರಾಮಾಣಿಕ ಆಡಳಿತ ನೀಡಬೇಕು. ಜನರ ಸೇವೆ ಮಾಡಬೇಕು ಎಂಬುದು ನನ್ನ ಆಸೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಜನರಿಗೆ ಮೂರು ಅಗತ್ಯ ಬೇಕು:
ಜನರಿಗೆ ಮೂರು ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳು. ಆರೋಗ್ಯ, ವಿದ್ಯಾಭ್ಯಾಸ, ಸೂರು ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. ಜನರಿಗಾಗಿ, ಜನರ ಒಳಿತಿಗಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. ದಾವಣಗೆರೆಗೆ
ಬಂದವರು ಇಲ್ಲಿನ ಕಾಮಗಾರಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಬೇಕು. ಆದ್ರೆ, ಬಿಜೆಪಿಯವರು ಎಲ್ಲವನ್ನೂ ಹಾಳು ಮಾಡಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಶಾಸಕ ಬಸವಂತಪ್ಪ, ಎಡಿಸಿ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಸದಸ್ಯರಾದ ಗಡಿಗುಡಾಳ್
ಮಂಜುನಾಥ್, ಅಬ್ದುಲ್ ಲತೀಫ್, ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು.
ಎಷ್ಟು ಬಸ್ ಗಳು ಸಂಚರಿಸುತ್ತವೆ..?
ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕರಾದ ಸಿ.ಇ. ಶ್ರೀನಿವಾಸ್ ಮಾತನಾಡಿ ದಾವಣಗೆರೆ (DAVANAGERE) ವಿಭಾಗದಲ್ಲಿ 386 ವಾಹನಗಳಿದ್ದು 368 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಪ್ರತಿನಿತ್ಯ 1.50 ಲಕ್ಷ ಕಿ.ಮೀ ಕ್ರಮಿಸುವ ಮೂಲಕ 1.25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ವಿಭಾಗದಲ್ಲಿ 17 ವೋಲ್ವೋ, 3 ಸ್ಕ್ಯಾನಿಯ, 6 ನಾನ್ ಎಸಿ ಸ್ಲೀಪರ್, 29 ರಾಜಹಂಸ, 205 ಸಾರಿಗೆ, 16 ಗ್ರಾಮೀಣ ಸಾರಿಗೆ, 37 ಎಲ್.ಇ.ಡಿ.ನಗರ ಸಾರಿಗೆ, 61 ನರ್ಮ್ ನಗರ ಸಾರಿಗೆ, 12 ಇವ್ಹಿ ಪವರ್ ಪ್ಲಸ್ ವಾಹನಗಳಿರುತ್ತವೆ ಎಂದರು.
ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್ ಸೇರಿದಂತೆ ವಿವಿಧ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸ್ವಾಗತಿಸಿದರು. ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ರಾಜಪ್ಪನವರ ಮಗಳು ಸುಕೃತ ಜಿ.ಆರ್. ಇವರು ರಾಷ್ಟ್ರೀಯ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
Statement by SS Mallikarjun in Davangere
Davangere against BJP. S. Mallikarjun Guturu
How was Mallikarjun’s speech in Davangere..?
What did Mallikarjun say in Davanagere..?
ದಾವಣಗೆರೆಯಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ
ಬಿಜೆಪಿ ವಿರುದ್ಧ ದಾವಣಗೆರೆಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಗುಟುರು
ದಾವಣಗೆರೆಯಲ್ಲಿ ಮಲ್ಲಿಕಾರ್ಜುನ್ ಭಾಷಣ ಹೇಗಿತ್ತು..?
ದಾವಣಗೆರೆಯಲ್ಲಿ ಮಲ್ಲಿಕಾರ್ಜುನ್ ಏನೆಲ್ಲಾ ಹೇಳಿದ್ರು..?
Comments 1