SUDDIKSHANA KANNADA NEWS/ DAVANAGERE/DATE:20_09_2025
ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜನುಮದಿನದ ಪ್ರಯುಕ್ತ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್, ಎಸ್ ಎಸ್ ಎಂ ಬಾಸ್ಕೆಟ್ ಬಾಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 3 ×3 ಬಾಸ್ಕೆಟ್ ಬಾಲ್ -2025 ಪಂದ್ಯಾವಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಚಾಲನೆ ನೀಡಿದರು.
READ ALSO THIS STORY: ದಾವಣಗೆರೆ ಹಿಂದೂಮಹಾಸಭಾ ಗಣಪನ ಅದ್ಧೂರಿ ವಿಸರ್ಜನೆ: ಡಿಜೆ ಇಲ್ಲದ ಮೆರವಣಿಗೆ ಹೇಗಿತ್ತು ಗೊತ್ತಾ?
3×3 ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಬಾಲ್ ಅನ್ನು ಬಾಸ್ಕೆಟ್ ಬುಟ್ಟಿಗೆ ಹಾಕುವ ಮೂಲಕ ವಿಶೇಷವಾಗಿ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ತಮ್ಮ ಬಾಲ್ಯದ ಕ್ರೀಡಾ ಬಗ್ಗೆ ವಿವರಿಸಿದರು.
ತಾವು ಕೂಡ ಒಬ್ಬ ವಾಲಿಬಾಲ್ ಕ್ರೀಡಾಪಟುವಾಗಿದ್ದೆ. ಮಕ್ಕಳು ಹೆಚ್ಚಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ. ಈ ಮೂಲಕ ದೈಹಿಕ ಸದೃಢತೆ ಸಾಧ್ಯ. ದೈಹಿಕ ಅಭ್ಯಾಸಗಳಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಲೂಬಹುದು ಎಂದು ಸಲಹೆ ನೀಡಿದರು.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಆರ್. ಹಾಗೂ ಎಸ್ ಎಸ್ ಎಂ ಬಾಸ್ಕೆಟ್ ಬಾಲ್ ಕಬ್ ಅಧ್ಯಕ್ಷ ಗಡಿಗುಡಾಳ್ ಮಂಜುನಾಥ್ ಅವರು ಮಾತನಾಡಿ ಬಾಸ್ಕೆಟ್ ಬಾಲ್ ಸೆಮಿ ಇಂಡೋರ್ ಕ್ರೀಡಾಂಗಣ ನಿರ್ಮಿಸಿದರೆ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ಹಾಗಾಗಿ ನಿರ್ಮಿಸಲು ಸಂಸದರಲ್ಲಿ ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ಸಂಸದರು ಬಾಸ್ಕೆಟ್ ಬಾಲ್ ಸೆಮಿ ಇಂಡೋರ್ ಕ್ರೀಡಾಂಗಣವನ್ನು ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆಯಲ್ಲಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಈಗಾಗಲೇ ನಡೆದಿದೆ.ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಪುರುಷ ಹಾಗೂ ಮಹಿಳೆಯರ ತಂಡ ಪ್ರಥಮ ಸ್ಥಾನ ಪಡೆದಿದ್ದು, ಆಟಗಾರರಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ರಾಜ್ಯ ಮಟ್ಟದ ಮೈಸೂರು ದಸರಾ ಕ್ರೀಡಾಕೂಟದಲ್ಲೂ ಚಾಂಪಿಯನ್ ಆಗಿ ಹೊರ ಹೊಮ್ಮಿ ಎಂದು ಶುಭ ಹಾರೈಸಿದರು.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಗೌರವಾಧ್ಯಕ್ಷ ಶ್ರೀರಾಮಮೂರ್ತಿ ಸಿ., ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷ ವಿಜಯ್ ಕುಮಾರ್ ಗೌಡ, ಕಾರ್ಯದರ್ಶಿ ವೀರೇಶ್ ಆರ್, .ಖಜಾಂಚಿ ಪ್ರಸನ್ನ, ಎಸ್. ಎಲ್. ತರಬೇತುದಾರ ದರ್ಶನ್ ಆರ್., ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ನ ಎಲ್ಲಾ ಸದಸ್ಯರು, ಎಸ್ ಎಸ್ ಎಂ ಬಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಗಡಿಗುಡಾಳ್ ಮಂಜುನಾಥ್, ಉಪಾಧ್ಯಕ್ಷ ಸಂಕೇತ್ ಮತ್ತು ಸಿದ್ದಾರ್ಥ್, ಕಾರ್ಯದರ್ಶಿ ಪ್ರವೀಣ್ ಕುಮಾರ್ ಕೆಎಂ, ಸಹ ಕಾರ್ಯದರ್ಶಿ ಜೆ. ಬಿ. ಶ್ರೀಧರ್ ಮತ್ತು ಎಸ್ ಎಸ್ ಎಂ ಬಾಸ್ಕೆಟ್ ಬಾಲ್ ಕ್ಲಬ್ ನ ಎಲ್ಲ ಸದಸ್ಯರು ಹಾಜರಿದ್ದರು.