SUDDIKSHANA KANNADA NEWS/ DAVANAGERE/DATE:11_08_2025
ದಾವಣಗೆರೆ: ಸಹಕಾರ ಸಚಿವ ಕೆ. ಎನ್. ರಾಜಣ್ಣ ರಾಜೀನಾಮೆ ನೀಡಿರುವ ಕುರಿತಂತೆ ಮಾಹಿತಿ ಇಲ್ಲ. ಕಾರ್ಯಕ್ರಮಗಳು ಹೆಚ್ಚಿದ್ದ ಕಾರಣ ಬೆಂಗಳೂರಿಗೆ ಹೋಗಿಲ್ಲ. ನಾಳೆ ಹೋಗುತ್ತಿದ್ದು, ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: HDFC, SBI ಸೇರಿ 11 ಬ್ಯಾಂಕ್ ಗಳ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು? ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ
ಮಾಧ್ಯಮದವರೊಂದಿಗೆ ಅವರು ನಗರದ ಗೃಹ ಕಚೇರಿಯಲ್ಲಿ ಮಾತನಾಡಿದರು.
2024 ರಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರವಿತ್ತು? ಒಂದೊಂದು ಮನೆಯಲ್ಲಿ 80 ಓಟ್ ಇರುವುದು ಸಾಧ್ಯನಾ? ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮತಗಳ್ಳತನಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಮೇತವಾಗಿ ವರದಿಯನ್ನು ನೀಡಲಾಗಿದೆ ಎಂದರು.
2024 ರಲ್ಲಿ ಮತಗಳ್ಳತನದ ಆರೋಪ ಕೇಳಿಬಂದಿದ್ದು ಆ ಅವಧಿಯಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರವಿತ್ತು ಎಂದು ಪ್ರಶ್ನಿಸಿದ ಸಚಿವರು ಕಾಂಗ್ರೆಸ್ ಪಕ್ಷದವರು ಮತಗಳ್ಳತನ ಮಾಡಿಲ್ಲ. ಬಿಜೆಪಿಯವರು ಮತಗಳ್ಳತನ ಮಾಡಿರುವುದನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಮಳೆ ನಿಂತ ಮೇಲೆ ಭದ್ರೆಗೆ ಬಾಗಿನ
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಈ ವರ್ಷದ ಅವಧಿಯಲ್ಲಿಯೇ ಜಲಾಶಯವು ಶೀಘ್ರದಲ್ಲೇ ಭರ್ತಿ ಆಗುವ ಸಾಧ್ಯತೆ ಇದೆ. ಮಳೆ ನಿಂತ ಮೇಲೆ ಭದ್ರೆಗೆ ಬಾಗಿನ
ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಟೀಕೆ ಮಾಡುವವರಿಗೆ ಸಚಿವರಿಂದ ಕಿವಿಮಾತು:
ಬಿಜೆಪಿಯವರ ಅವಧಿಯಲ್ಲಿಯಲ್ಲಾದ ಕಾಮಗಾರಿಗಳಿಂದ ರೋಸಿ ಹೋಗಿದ್ದ ಜನತೆಯು ನಮ್ಮ ಸರ್ಕಾರದ ಕಾರ್ಯಗಳಿಂದ ನೆಮ್ಮದಿಯ ಜೀವನ ಮಾಡ್ತಿದ್ದಾರೆ. ಹೈಟೆಕ್ ರಸ್ತೆಗಳು, ಪಾರ್ಕುಗಳು, ವೃತ್ತಗಳಿಂದ ನಗರದಲ್ಲಿ ಎಂತಹ ಮಳೆ ಬಂದರೂ ಮಳೆ ನೀರು ಸರಾಗವಾಗಿ ಹರಿಯುತ್ತದೆ ಎಂದು ಮಾತನಾಡುತ್ತಿದ್ದಾರೆ. ಬಿಜೆಪಿಯವರು ಉತ್ತಮ ಕಾರ್ಯಗಳಿಗೆ ಕೈ ಜೋಡಿಸದೇ ಬರೀ ಟೀಕೆ ಮಾಡುವುದರಲ್ಲೆ ಮುಂದಾಗಿದ್ದಾರೆ ಎಂದು ಗುಡುಗಿದ ಸಚಿವರು, ನಮ್ಮ ಸರ್ಕಾರ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿದೆ. ಘನ ತ್ಯಾಜ್ಯ ನಿರ್ವಹಣೆಗೆ ಮೊದಲು ಜಾಗ ಪಡೆದಿದ್ದು ಯಾರು? ಇಂಡಸ್ಟ್ರಿ ಡಿಪಾರ್ಟ್ಮೆಂಟ್ ನಲ್ಲಿ ಏನೇನು ಗೊಲ್ಮಾಲ್ ಆಗಿದೆ ಅನ್ನೊದು ಗೊತ್ತಿದೆ ಎಂದರು.