Home ದಾವಣಗೆರೆ ನಾನು ಸಾದಿಕ್ ಪೈಲ್ವಾನ್ ಬೇರೆಯವರಲ್ಲ, ಒಂದೇ ಮನೆಯವರು: ಎಲ್ಲ ಸಮಸ್ಯೆಗಳು ಬಗೆಹರಿದಿವೆ ಎಂದ್ರು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್
ದಾವಣಗೆರೆಬೆಂಗಳೂರು

ನಾನು ಸಾದಿಕ್ ಪೈಲ್ವಾನ್ ಬೇರೆಯವರಲ್ಲ, ಒಂದೇ ಮನೆಯವರು: ಎಲ್ಲ ಸಮಸ್ಯೆಗಳು ಬಗೆಹರಿದಿವೆ ಎಂದ್ರು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್

Share
ಎಸ್. ಎಸ್. ಮಲ್ಲಿಕಾರ್ಜುನ್
Share

ದಾವಣಗೆರೆ: ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ಸಲೀಂ ಅಹ್ಮದ್, ಸಚಿವ ಬೈರತಿ ಸುರೇಶ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಚರ್ಚೆ ನಡೆಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸಂಧಾನದ ಬಳಿಕ ಮಲ್ಲಿಕಾರ್ಜುನ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗವು ಸಾದಿಕ್ ಪೈಲ್ವಾನ್ ಮನವೊಲಿಸಿ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಕೋರಿದರು.

ಬಳಿಕ ಮಾತನಾಡಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಸಾದಿಕ್ ಪೈಲ್ವಾನ್ ನಾನು ಬೇರೆ ಏನಲ್ಲ. ಒಂದೇ ಮನೆಯವರು. ಅಣ್ಣ ತಮ್ಮಂದಿರ ರೀತಿ ಇದ್ದೆವು. ಏನೋ ಸಣ್ಣ ಪುಟ್ಟ ಸಮಸ್ಯೆಗಳಾಗಿದ್ದವು. ಎಲ್ಲವೂ ಬಗೆಹರಿದಿವೆ ಎಂದು ಹೇಳಿದರು.

ಮುಂಚಿನಿಂದಲೂ ಸಾದಿಕ್ ಪೈಲ್ವಾನ್ ಗೊತ್ತು. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಬಂಬಲವನ್ನು ಸೂಚಿಸಿದ್ದಾರೆ. ಸಾದಿಕ್ ಪೈಲ್ವಾನ್ ಮನೆತನದವರು ಎಲ್ಲರೂ ಪರಿಚಯಸ್ಥರೇ. ಸಾದಿಕ್ ಪೈಲ್ವಾನ್ ತಮ್ಮ, ಅಣ್ಣ, ಅಣ್ಣನ ಮಕ್ಕಳು, ಅಳಿಯಂದಿರು ಮಕ್ಕಳು ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಕಚೇರಿ ಮುಂದೆ ಆದ ಹೈಡ್ರಾಮಾ ಕುರಿತಂತೆ ಪ್ರತಿಕ್ರಿಯೆ ನೀಡಿದ ಎಸ್ಎಸ್ಎಂ, ಒಬ್ಬರನ್ನೊಬ್ಬರು ದೂರುವಂತೆ ಆಗಬಾರದು, ಒಂದಕ್ಕೊಂದು ಬೆಳೆದುಕೊಂಡು ಹೋಗುತ್ತದೆ. ಎಲ್ಲರೂ ಸೇರಿ ಸ್ನೇಹ ಮನೋಭಾವನೆಯಿಂದ ಇರಬೇಕು. ಶಾಂತಿಯುತವಾಗಿ ಚುನಾವಣೆ ಎದುರಿಸೋಣ ಎಂದು ಸಲಹೆ ನೀಡಿದರು.

Share

Leave a comment

Leave a Reply

Your email address will not be published. Required fields are marked *