SUDDIKSHANA KANNADA NEWS/ DAVANAGERE/DATE:03_09_2025
ದಾವಣಗೆರೆ: ಶಾಮನೂರು ಮನೆತನದವರು ಒಂದು ಗಂಟೆ ತಡವಾಗಿ ಬಂದರೂ ಪೊಮೆರೇನಿಯನ್ ನಾಯಿ ರೀತಿಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೇಟ್ ಬಾಗಿಲಿನಲ್ಲಿ ಕಾಯುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
READ ALSO THIS STORY: ಶಾಮನೂರು ಮನೆತನದವರ ಮನೆ ಬಾಗಿಲು ಕಾಯುವ “ಪೊಮೆರೇನಿಯನ್ ನಾಯಿ” ದಾವಣಗೆರೆ ಎಸ್ಪಿ: ಶಾಸಕ ಬಿ. ಪಿ. ಹರೀಶ್ ಕೆಂಡಾಮಂಡಲ!
ಸ್ವತಃ ಉಮಾ ಪ್ರಶಾಂತ್ ಅವರೇ ಈ ದೂರು ನೀಡಿದ್ದಾರೆ. ಈ ಸಂಬಂಧ ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ದೂರು ದಾಖಲಾಗಿದೆ.
ದೂರಿನಲ್ಲೇನಿದೆ?
ಹರಿಹರ ಶಾಸಕ ಬಿ. ಪಿ. ಹರೀಶ್ ಕೀಳುಮಟ್ಟದ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
02-09-2025ರಂದು ನಗರದ ವರದಿಗಾರರ ಕೂಟದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರನ್ನು ಉದ್ದೇಶಿಸಿ ಶಾಮನೂರು ಮನೆ ನಾಯಿ ರೀತಿ ವರ್ತಿಸುತ್ತಿದ್ದಾರೆ ಎಂದು ಕೀಳು ಮಟ್ಟದಲ್ಲಿ ಬಿ. ಪಿ. ಹರೀಶ್ ಟೀಕಿಸಿದ್ದು, ಈ ಸಂಬಂಧ ಉಮಾ ಪ್ರಶಾಂತ್ ಅವರು ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ 2023 (ಯು/ಎಸ್-132, 351(2)79 ರೀತ್ಯಾ ಪ್ರಕರಣ ದಾಖಲಾಗಿದೆ.
ಬಿ. ಪಿ. ಹರೀಶ್ ಹೇಳಿದ್ದೇನು?
ಶಾಮನೂರು ಮನೆತನದವರು ಒಂದು ಗಂಟೆ ತಡವಾಗಿ ಬಂದರೂ ಪೊಮೆರೇನಿಯನ್ ನಾಯಿ ರೀತಿಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೇಟ್ ಬಾಗಿಲಿನಲ್ಲಿ ಕಾಯುತ್ತಾರೆ. ಶಾಸಕರು ಸಭೆಗೆ ಬಂದರೆ ಮುಖ ತಿರುಗಿಸಿಕೊಂಡು ಎಸ್ಪಿ ಕುಳಿತುಕೊಳ್ಳುತ್ತಾರೆ. ಅದೇ ಶಾಮನೂರು ಮನೆತನದವರು ಬಂದರೆ ಪೊಮೆರೇನಿಯನ್ ನಾಯಿ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಯಾಕೆ ಹೀಗೆ.
ಹರಿಹರದಲ್ಲಿ ಗಣೇಶೋತ್ಸವ ಕುರಿತ ಶಾಂತಿ ಸಭೆಗೆ ಎಸ್ಪಿ ಅವರು ಹರಿಹರಕ್ಕೆ ಬಂದರೂ ಆ ಕಡೆ ತಿರುಗಿ ಕೂತರು. ನಾನು ಹಂಗೆ ಇದ್ದೆ. ನಿಜವಾಗಿಯೂ ಆ ಸಂದರ್ಭದಲ್ಲಿ ಡಿವೈಎಸ್ಪಿ ಬಸವರಾಜಪ್ಪ ಅವರಿಗೆ ನೇರವಾಗಿ ಏನು ತಿಳಿಸಬೇಕೋ ಅದನ್ನು ತಿಳಿಸಿದ್ದೇನೆ.
ಹರಿಹರ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಬರುತ್ತಾರೆಂದು ಅರ್ಧಗಂಟೆ ಉರಿಬಿಸಿಲಿನಲ್ಲಿ ದಾವಣಗೆರೆ ಎಸ್ಪಿ ನಿಂತಿದ್ದರು. ತಡವಾಗಿ ಬರುವುದು ಶಾಮನೂರು ಮನೆತನದ ಗುಣ. ಪಾಪ ಜನರು ಶ್ರೀಮಂತಿಕೆಗೋಸ್ಕರ ಕಾಯುತ್ತಾರೆ. ಸೆಂಟ್ ಕಾನ್ವೆಂಟ್ ನಲ್ಲಿ ಮಕ್ಕಳನ್ನು ಹತ್ತೂವರೆಯವರೆಗೆ ಕೂರಿಸಿದ್ದಾರೆ. ಆ ತಾಯಿ 12 ಗಂಟೆಗೆ ಬಂದರು. ಹರಿಹರದಲ್ಲಿ ಕಾರ್ಯಕ್ರಮದ ನಿಮಿತ್ತ ನಾನು ಹೋದೆ. ಅದೇ ಎಸ್ಪಿ ಇದ್ದಿದ್ದರೆ ಒಂದೂವರೆ ಗಂಟೆ ಶಾಲೆಯ ಬಾಲಿಗಿನಲ್ಲಿ ಕಾಯುತ್ತಿದ್ದರು ಎಂದು ಬಿಪಿ ಹರೀಶ್ ಕಿಡಿಕಾರಿದ್ದರು.