ಬೇಕಾಗುವ ಪದಾರ್ಥಗಳು…
- ಸೋಯಾ ಬೀನ್- 20-25
- ಶುಂಠಿ-ಬೆಳ್ಳುಳ್ಳಿ ಪೇಸ್ಟ್-2 ಚಮಚ
- ಹಸಿ ಮೆಣಸಿನಕಾಯಿ-2
- ಈರುಳ್ಳಿ- 3
- ಮೊಸರು-ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಖಾರದ ಪುಡಿ- ಒಂದು ಚಮಚ
- ಗರಂ ಮಸಾಲ- ಒಂದೂವರೆ ಚಮಚ
- ಕಾಳು ಮೆಣಸಿನ ಪುಡಿ- 1 ಚಮಚ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಉಪ್ಪು- ರುಚಿಗೆ ತಕ್ಕಷ್ಟುಮಾಡುವ ವಿಧಾನ…
- ಸೋಯಾ ಬೀನ್ ಅನ್ನು 20-25 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ಬಳಿಕ ಹಸಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಿ. ನಂತರ ಇದೇ ಮಿಕ್ಸಿ ಜಾರಿಗೆ ನೆನೆಸಿದ ಸೋಯಾ ಬೀನ್ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್. ಖಾರದ ಪುಡಿ, ಗರಂ ಮಸಾಲ, 2 ಚಮಚ ಮೊಸರು, ಕಾಳು ಮೆಣಸಿನ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ನೆನೆಯಲು ಬಿಡಿ.
- ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮಸಾಲೆಯುಕ್ತ ಸೋಯಾ ಬೀನ್ ನಿಮಗೆ ಬೇಕಾಗ ಆಕಾರದಲ್ಲಿ ತಟ್ಟಿ ಎಣ್ಣೆ ಹಾಕಿ 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಕಬಾಬ್ ಸವಿಯಲು ಸಿದ್ಧ.