ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನಾನವನಲ್ಲ… ನಾನವನಲ್ಲ… ನನ್ನ ವಿರುದ್ಧ ಷಡ್ಯಂತ್ರ, ತಪ್ಪು ಮಾಡಿಲ್ಲ: ಡಾ. ಸೂರಜ್ ರೇವಣ್ಣ ಸ್ಪಷ್ಟನೆ..!

On: June 23, 2024 9:28 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:23-06-2024

ಬೆಂಗಳೂರು: ನಾನವನಲ್ಲ…ನಾನವನಲ್ಲ… ನಾನವನಲ್ಲ… ಇದು ಸಲಿಂಗ ಕಾಮ ಆರೋಪದಡಿ ಬಂಧನಕ್ಕೊಳಗಾಗುವ ಮುನ್ನ ಮಾಧ್ಯಮದವರ ಮುಂದೆ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಕೊಟ್ಟಿರುವ ಸ್ಪಷ್ಟನೆ.

ನಾನೇನೂ ತಪ್ಪು ಮಾಡಿಲ್ಲ, ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಎಲ್ಲದಕ್ಕೂ ಕಾನೂನಿನ ಮೂಲಕ ಉತ್ತರ ನೀಡುವುದಾಗಿ ಸೂರಜ್ ರೇವಣ್ಣ ಹೇಳಿದ್ದು, ಮಾತ್ರವಲ್ಲ, ಈ ಆರೋಪದಿಂದ ಮುಕ್ತನಾಗಿ ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾಸನ ಸೆನ್ ಠಾಣೆಯಲ್ಲಿ ಸೂರಜ್ ರೇವಣ್ಣರಿಗೆ ಡ್ರಿಲ್ ಆಗಿದ್ದು, ಸಂತ್ರಸ್ತನಿಗೆ ಮೆಡಿಕಲ್ ಚೆಕ್ ಅಪ್ ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾದರೆ ಸೂರಜ್ ರೇವಣ್ಣರಿಗೆ ಕಂಟಕ ಫಿಕ್ಸ್ ಎನ್ನಲಾಗಿದೆ.

ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರಂತೂ ಲೈಂಗಿಕ ದೌರ್ಜನ್ಯ ಮಾತು ಕೇಳಿದರೆ ಸಾಕು ಬೆಚ್ಚಿ ಬೀಳುತ್ತಿದ್ದಾರೆ. ಮಾಧ್ಯಮದವರೊಂದಿಗೆ ಶನಿವಾರ ಮಾತನಾಡುವಾಗ ನನಗೆ ಯಾಕೆ ಕೇಳುತ್ತೀರಾ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಂಥ ವಿಚಾರ ನನ್ನ ಬಳಿ ಕೇಳಬೇಡಿ. ರಾಜ್ಯದ ವಿಚಾರಗಳಿದ್ದರೆ ಕೇಳಿ ಎಂದು ಹೇಳಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಮಾತ್ರವಲ್ಲ,ಹೆಚ್. ಡಿ. ರೇವಣ್ಣರ ಪರ ನಿಂತಿದ್ದ ಕುಮಾರಸ್ವಾಮಿ ಈಗ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣರ ಲೈಂಗಿಕ ಆರೋಪ ಕೇಸ್ ನಿಂದ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಈ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೋ
ಅಥವಾ ಅವರ ಪರವಾಗಿ ಪರೋಕ್ಷವಾಗಿ ನಿಲ್ಲುತ್ತಿದ್ದಾರೋ ಎಂಬ ಗೊಂದಲ ಹೆಚ್. ಡಿ. ರೇವಣ್ಣರ ಕುಟುಂಬಕ್ಕೆ ಇದೆ.

ಏನಿದು ಕೇಸ್…?

ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ, ಶಾಸಕ ಹೆಚ್. ಡಿ. ರೇವಣ್ಣರ ಪುತ್ರ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅಸಹಜ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧಿಸಲಾಗಿದೆ.

ಹೊಳೇನರಸಿಪುರದಲ್ಲಿ ದಾಖಲಾಗಿದ್ದ ಸಲಿಂಗ ಕಾಮ ಆರೋಪದಡಿ ಕೇಸ್ ದಾಖಲಿಸಲಾಗಿತ್ತು. ಹಾಸನದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸೂರಜ್ ರೇವಣ್ಣ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಬೆಂಗಳೂರಿನ ಕಡೆ ಹೋಗಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದರು. ಈ ವೇಳೆ ವಶಕ್ಕೆ ಪಡೆದು ಹಾಸನದ ಕಡೆಗೆ ಕರೆದುಕೊಂಡು ಬರಲಾಗುತ್ತಿದೆ. ಸಂತ್ರಸ್ತನ ದೂರು ಆಧರಿಸಿ ಬಂಧಿಸಲಾಗಿದೆ.

ಗೃಹ ಸಚಿವ ಜಿ. ಪರಮೇಶ್ವರ್ ಅವರು ದೂರು ನೀಡಿರಲಿಲ್ಲ ಎಂದು ಬೆಳಿಗ್ಗೆ ಹೇಳಿದ್ದರು. ಆದ್ರೆ, ಸೂರಜ್ ರೇವಣ್ಣ ವಿರುದ್ಧ ಸಿಎಂ ಕಾರ್ಯಾಲಯದಿಂದ ಗೃಹ ಇಲಾಖೆಗೆ ಸೂಚನೆ ಕೊಟ್ಟ ಕಾರಣ, ಎಫ್ ಐ ಆರ್ ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಹಾಸನಕ್ಕೆ ವಿಚಾರಣೆಗೆ ಕರೆ ತಂದ ಬಳಿಕ ಹಾಗೂ ಸಂತ್ರಸ್ತ ಮೆಡಿಕಲ್ ಚೆಕಪ್ ಗೆ ಒಪ್ಪಿದ ಕಾರಣ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ ಏನು..?

ಮಹಿಳೆಯರು, ಯುವತಿಯರ ಜೊತೆಗಿನ ಪ್ರಜ್ವಲ್ ರೇವಣ್ಣರ ರಾಸಲೀಲೆ ವಿಡಿಯೋ ವೈರಲ್ ಆದ ಬಳಿಕ ದೇವೇಗೌಡ ಕುಟುಂಬ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ಮರ್ಯಾದೆಗೆ ಧಕ್ಕೆ ಆಗಿತ್ತು. ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸುದ್ದಿ ಮಾಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿತ್ತು. ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಈಗಾಗಲೇ ಹೆಚ್. ಡಿ. ರೇವಣ್ಣ ಜೈಲಿಗೆ ಹೋಗಿ ಬಂದದ್ದು ಆಗಿದೆ. ಭವಾನಿ ರೇವಣ್ಣರಿಗೆ ಜಾಮೀನು ಸಿಕ್ಕ ಕಾರಣ ಕೂದಲೆಳೆ ಅಂತರದಲ್ಲಿ ಬಂಧನದಿಂದ ಬಚಾವಾಗಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ತನಿಖೆ ಇನ್ನು ನಡೆಯುತ್ತಿದೆ. ಕುಟುಂಬವೇ ಈಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮುಜುಗರಕ್ಕೀಡಾಗಿದೆ. ಪ್ರಜ್ವಲ್ ಸಹೋದರ, ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ
ಕೂಡ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಅದೂ ಯುವಕನಿಗೆ ರಾಸಲೀಲೆ ಕರೆದಿರುವುದು. ಮಾತ್ರವಲ್ಲ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸದ್ದು ಮಾಡಿದೆ.

ಅಸಹಜ ಲೈಂಗಿಕ ಕಿರುಕುಳ ಪ್ರಕರಣದ ದೂರು ನೀಡಿದ್ದ ವ್ಯಕ್ತಿಯ ವಿರುದ್ಧವೇ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಆಪ್ತ ಸುಲಿಗೆ ಪ್ರಕರಣದಲ್ಲಿ ದೂರು ಕೊಟ್ಟಿದ್ದಾರೆ. ಜೆಡಿಎಸ್ ಕಾರ್ಯಕರ್ತ ಎಂದು ಹೇಳಲಾದ ವ್ಯಕ್ತಿ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳದ ದೂರು ನಿಡಿದ್ದು, ಸೂರಜ್ ರೇವಣ್ಣ ನನ್ನ ಮೇಲೆ ಸಲಿಂಗ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದಾನೆ. ಇದಕ್ಕೆ ಪ್ರತಿಯಾಗಿ ಸಂತ್ರಸ್ತನ ವಿರುದ್ಧವೇ ಕೇಸ್ ಆಗಿದೆ.

ಡಾ. ಸೂರಜ್ ವಿರುದ್ದ ಬೆಂಗಳೂರಿನಲ್ಲಿ ದೂರು ನೀಡಿದ ಸಂತ್ರಸ್ತನ ವಿರುದ್ಧವೇ ಕೇಸ್ ದಾಖಲಿಸಲಾಗಿದ್ದು, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.  ಸೂರಜ್ ಆಪ್ತ ಶಿವಕುಮಾರ್ ಎಂಬುವವರು ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐದು ಕೋಟಿ ರೂಪಾಯಿ ಹಣ ನೀಡದಿದ್ದರೆ
ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ ಆರೋಪ ಮಾಡಿ ದೂರು ಕೊಡಲಾಗಿದೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರೊ ಬಗ್ಗೆ ಉಲ್ಲೇಖಿಸಿ ದೂರು ಕೊಡಲಾಗಿದ್ದು, ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಪ್ರಕರಣ ದಾಖಲಾಗಿದೆ.

ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವಕ ಕೇಳಿಕೊಂಡಿದ್ದ, ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ ಎಂದು ದೂರಿನಲ್ಲಿ ಶಿವಕುಮಾರ್ ತಿಳಿಸಿದ್ದಾರೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಸಂತ್ರಸ್ಥ ಹೋಗಿದ್ದ, ಕೆಲಸ ಕೇಳಿ ವಾಪಸ್ಸು ಬಂದ ಬಳಿಕ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಿಂದ ವಿದೇಶಕ್ಕೆ ಹೋಗುವ ಯೋಜನೆ ಸೂರಜ್ ರೇವಣ್ಣ ಹಾಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಮಾರ್ಗ ಮಧ್ಯೆ ಬಂಧಿಸಿ, ಹಾಸನಕ್ಕೆ ಕರೆತಂದು ಪೊಲೀಸರು ವಿಚಾರಣೆಗೆ ಒಳಪಡಿಸಲಾಗುತ್ತದೆ. ಕಾರಿನಲ್ಲಿ ಹೋಗುತ್ತಿದ್ದ ಸೂರಜ್ ರೇವಣ್ಣನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಶುರು ಮಾಡಲಿದ್ದಾರೆ. ಸೂರಜ್ ರೇವಣ್ಣ ತಾಯಿ ಭವಾನಿ ರೇವಣ್ಣ, ಶಾಸಕ ಹೆಚ್. ಡಿ. ರೇವಣ್ಣ ಅವರು ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಜಾಮೀನು ಪಡೆದು ಹೊರಗಡೆ ಇದ್ದಾರೆ. ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಜೊತೆಗಿನ ರಾಸಲೀಲೆ ಪ್ರಕರಣ ಸಂಬಂಧ ಜೈಲಿನಲ್ಲಿ ಇದ್ದಾರೆ. ಈಗ ಸೂರಜ್ ರೇವಣ್ಣ ಅರೆಸ್ಟ್ ಆಗಿದ್ದು, ಇಡೀ ಕುಟುಂಬವೇ ಈಗ ಕಾನೂನು ಮುಷ್ಠಿಯಲ್ಲಿ ಸಿಲುಕಿದೆ.

ಸಲಿಂಗ ಕಾಮದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹೊಳೇನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿ ದೂರು ದಾಖಲಿಸಿರುವ ಸೂರಜ್ ರೇವಣ್ಣರ ಪರ ಅವರ ಪಿಎ ಶಿವಕುಮಾರ್ ಪ್ರತಿದೂರು ದಾಖಲಿಸಿದ್ದು, ಐದು ಕೋಟಿ ರೂಪಾಯಿ ಆಮೀಷವೊಡ್ಡಿದ್ದ ಎಂದು ದೂರಲಾಗಿದೆ.

ಸೂರಜ್ ರೇವಣ್ಣ ಹಾಗೂ ಸಂತ್ರಸ್ತ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಈಗಾಗಲೇ ನನ್ನ ಕುಟುಂಬ ಮುಜುಗರಕ್ಕೀಡಾಗಿದ್ದು, ನನ್ನ ಕುಟುಂಬಕ್ಕೆ ಧಕ್ಕೆಯಾಗಿದೆ. ಈ ಕಾರಣಕ್ಕೆ ನೀನು ಹೊರಗಡೆ ಮಾತನಾಡಬೇಡಾ. 2 ಕೋಟಿ
ರೂಪಾಯಿ ನೀಡುತ್ತೇನೆ, ಜೊತೆಗೆ ಸರ್ಕಾರಿ ಕೆಲಸ ನೀಡಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎನ್ನಲಾದ ಸೂರಜ್ ರೇವಣ್ಣರ ಆಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಸಂತ್ರಸ್ತನಿಗೆ ಕಳುಹಿಸಿರುವ ವ್ಯಾಟ್ಸಪ್ ಮೆಸೇಜ್ ವೈರಲ್ ಆಗಿದ್ದು, ಇದರಲ್ಲಿ
ಯುವಕನಿಗೆ ಲವ್ ಯೂ ಸಿಂಬಲ್ ಅನ್ನು ಸೂರಜ್ ಕಳುಹಿಸಿರುವುದು ಪತ್ತೆಯಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment